ಬಾವಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ

| Published : Nov 22 2023, 01:00 AM IST

ಬಾವಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೂವರೆ ವರ್ಷದ ಚಿರತೆಯೊಂದು ನಗರದ ಮಾರನಗೆರೆ ಬಡಾವಣೆಯ ಸಂಗಮೇಶ್ ಎಂಬುವರ ತೋಟದ ಪಾಳು ಬಾವಿಗೆ ಮಂಗಳವಾರ ಬಿದ್ದಿರುವ ಘಟನೆ ನಡೆದಿದೆ.

ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಬಾವಿಯಿಂದ ಮೇಲೆತ್ತುವ ಕಾರ್ಯಾಚರಣೆ

ಕನ್ನಡಪ್ರಭ ವಾರ್ತೆ, ತಿಪಟೂರು

ಒಂದೂವರೆ ವರ್ಷದ ಚಿರತೆಯೊಂದು ನಗರದ ಮಾರನಗೆರೆ ಬಡಾವಣೆಯ ಸಂಗಮೇಶ್ ಎಂಬುವರ ತೋಟದ ಪಾಳು ಬಾವಿಗೆ ಮಂಗಳವಾರ ಬಿದ್ದಿರುವ ಘಟನೆ ನಡೆದಿದೆ.

ಈ ಭಾಗದಲ್ಲಿ ಕಳೆದ ವರ್ಷದಿಂದಲೂ ೩ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಮೇಕೆ, ಕುರಿ ಹಾಗೂ ನಾಯಿಗಳನ್ನು ತಿನ್ನುತ್ತಿದ್ದವು. ಅಲ್ಲದೆ ಚಿರತೆಗಳು ಬೀಡು ಬಿಟ್ಟಿದ್ದು ಪ್ರದೇಶ ತೆಂಗಿನ ತೋಟಗಳಿಂದ ಕೂಡಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಇಟ್ಟಿದ್ದರೂ ಚಿರತೆಗಳು ಬಿದ್ದಿರಲಿಲ್ಲ. ರೈತರು ತಮ್ಮ ಹೊಲ, ತೋಟಗಳಿಗೆ ಹೋಗಲು ಹಾಗೂ ಕುರಿ, ಮೇಕೆ, ಹಸುಗಳನ್ನು ಮೇಯಿಲು ಭಯಪಡುವಂತಾಗಿದೆ. ಸಾಕಷ್ಟು ಸಲ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನು ಇಟ್ಟಿದ್ದರೂ ಚಿರತೆಗಳು ಬೋನಿಗೆ ಬಿದ್ದಿರಲಿಲ್ಲ. ಆದರೆ ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಬೆಳಗಿನ ಜಾವ ಚಿರತೆಯೊಂದು ಈ ಭಾಗದಲ್ಲಿ ಓಡಾಟ ನಡೆಸುತ್ತಿರುವ ಸಂದರ್ಭದಲ್ಲಿ ಮಾರನಗೆರೆ ಎಂ.ಆರ್. ಸಂಗಮೇಶ್ ರವರ ತೋಟದ ನೀರಿಲ್ಲದ ಬಾವಿಗೆ ಬಿದ್ದಿದೆ. ತೋಟದವರು ಮಂಗಳವಾರ ಅಡಿಕೆ ಕಾಯಿ ಕೀಳಲು ತೋಟಕ್ಕೆ ಬಂದ ಸಂದರ್ಭದಲ್ಲಿ ಚಿರತೆ ಬಾವಿಗೆ ಬಿದ್ದು ಶಬ್ಧ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ತಿಳಿದು ಬಂದಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಚಿರತೆಯನ್ನು ಮೇಲೆತ್ತಲು ಬೇಕಾದ ತಯಾರಿ ಮಾಡಿಕೊಂಡಿದ್ದು, ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಬಾವಿಯಿಂದ ಮೇಲೆತ್ತುವ ಕಾರ್ಯಾಚರಣೆ ನಡೆದಿದೆ. ಫೋಟೋ ೨೧-ಟಿಪಿಟಿ೪ ಹಾಗೂ ೫: ಬಾವಿಗೆ ಬಿದ್ದಿರುವ ಚಿರತೆ.