ಸಾರಾಂಶ
ಇಲ್ಲಿನ ಮುರುಘಾಮಠದ ರಾಜಾಂಗಣದಿಂದ ನಾಪತ್ತೆಯಾಗಿದ್ದ ಶಿವಮೂರ್ತಿ ಮುರುಘಾಶರಣರ 22 ಕೆ.ಜಿ. ತೂಕದ ಬೆಳ್ಳಿ ಪುತ್ಥಳಿ ಸೋಮವಾರ ಶಾಲಾ ಆವರಣದಲ್ಲಿ ಪತ್ತೆಯಾಗಿದೆ.
ಚಿತ್ರದುರ್ಗ: ಇಲ್ಲಿನ ಮುರುಘಾಮಠದ ರಾಜಾಂಗಣದಿಂದ ನಾಪತ್ತೆಯಾಗಿದ್ದ ಶಿವಮೂರ್ತಿ ಮುರುಘಾಶರಣರ 22 ಕೆ.ಜಿ. ತೂಕದ ಬೆಳ್ಳಿ ಪುತ್ಥಳಿ ಸೋಮವಾರ ಶಾಲಾ ಆವರಣದಲ್ಲಿ ಪತ್ತೆಯಾಗಿದೆ.
ಜು.11ರಂದು 20ಲಕ್ಷ ರು. ಮೌಲ್ಯದ ಬೆಳ್ಳಿ ಪುತ್ಥಳಿ ನಾಪತ್ತೆಯಾದ ಹಿನ್ನೆಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೇ ಆರೋಪಿಗಳು 4 ದಿನಗಳ ಬಳಿಕ ಮುರುಘಾಮಠದ ಶಾಲಾ ಕಾಂಪೌಂಡ್ ಪಕ್ಕದಲ್ಲಿ ಗೋಣಿಚೀಲದಲ್ಲಿ ಪುತ್ಥಳಿ ಇಟ್ಟು ಪರಾರಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಮಠದ ವಿದ್ಯಾರ್ಥಿಗೆ ಚೀಲ ಕಂಡಿದ್ದು, ಮಠದ ವಕ್ತಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಪಿಐ ಮುದ್ದುರಾಜು ನೇತೃತ್ವದಲ್ಲಿ ಡಾಗ್ ಸ್ಕ್ವಾಡ್ ತಂಡ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಚೀಲವನ್ನು ಪರಿಶೀಲಿಸಿದ್ದು, ಪುತ್ಥಳಿ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ನನ್ನ ಮೇಲೂ ಕಳ್ಳತನದ ಆರೋಪ ಹೊರಿಸಲು ಷಡ್ಯಂತ್ರ ನಡೆದಿತ್ತು. ಪೊಲೀಸರ ತನಿಖೆಯಿಂದ ಕಳ್ಳತನ ಪ್ರಕರಣ ಪೂರ್ಣ ಬಯಲಾಗಬೇಕು ಎಂದು ಹೇಳಿದರು.