ಸಾರಾಂಶ
ಹೆಣ್ಣೆಂಬ ಕಾರಣಕ್ಕೆ ಅಕ್ಷರ ಕಲಿಯಿಂದ ವಂಚಿಸುವ ಪುರುಷ ಪ್ರಧಾನ ಮನಸ್ಥಿತಿಗೆ ಛೀಮಾರಿ ಹಾಕಿದರು. ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಬಿತ್ತಿಪತ್ರ ಪ್ರದರ್ಶಿಸಿ ಹೆಣ್ಣು-ಗಂಡಿನ ಸಮಾನತೆಗೆ ಕಿರು ನಾಟಕದ ಮೂಲಕ ಆಗ್ರಹ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಶಾಲೆ ಬಿಡಿಸಿ ಶಾದಿ ಭಾಗ್ಯ ಕರುಣಿಸುವ ಮೂಲಕ ಬಾಲ್ಯವಿವಾಹ ಪೋಷಿಸುವ ಪೋಷಕರ ಧೊರಣೆ ಖಂಡಿಸಿ ಕಿರುನಾಟಕ ಪ್ರದರ್ಶಿಸಿದ ಬಾಲಕರು, ಪಾಲಕರ ಅಂತಕರಣ ಕಲುಕುವಲ್ಲಿ ಯಶಸ್ವಿಯಾದರು. ಗಂಡ ಸತ್ತ ವಿಧವೆ ಮಹಿಳೆಯನ್ನು ವಿಕೃತಗೊಳಿಸಿ ಅಪಮಾನಿಸುವ ಸಮಾಜದ ಶೋಷಣೆಯನ್ನು ಧಿಕ್ಕರಿಸಿದರು. ಹೆಣ್ಣೆಂಬ ಕಾರಣಕ್ಕೆ ಅಕ್ಷರ ಕಲಿಯಿಂದ ವಂಚಿಸುವ ಪುರುಷ ಪ್ರಧಾನ ಮನಸ್ಥಿತಿಗೆ ಛೀಮಾರಿ ಹಾಕಿದರು. ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಬಿತ್ತಿಪತ್ರ ಪ್ರದರ್ಶಿಸಿ ಹೆಣ್ಣು-ಗಂಡಿನ ಸಮಾನತೆಗೆ ಆಗ್ರಹಿಸಿದರು.ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳು ಪ್ರದರ್ಶಿಸಿದ ಬಾಲಪರಾಧ ಕಿರುನಾಟಕ ಪ್ರೇಕ್ಷಕರ ಹೃದಯ ತಟ್ಟುವಲ್ಲಿ ಸಫಲವಾಯಿತು. ಕುಡಿಯುವ ನೀರಿನ ಸದ್ಬಳಕೆ, ಕಸ ವಿಲೇವಾರಿ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತ ಜಾಗೃತಿ ಮೂಡಿಸುವ ಹಾಡಿನ ನೇತ್ಯಗಳು ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವು. ಭಾರತದಲ್ಲಿ ಕೈಗೊಂಡ ಸಾಮಾಜಿಕ ಸೇವೆ ಮತ್ತು ಶಿಕ್ಷಣ ಕಾಳಜಿಯನ್ನು ಬಾಲಕೀಯರು ತಮ್ಮ ಉತ್ತಮ ನಟನೆ ಮೂಲಕ ಅನಾವರಣಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ತಾಪುರ ಬಿಇಒ ಸಿದ್ಧವೀರಯ್ಯ ರುದ್ನೂರ, ಶಿಕ್ಷಣವೊಂದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಹೀಗಾಗಿ ಹೆಣ್ಣು ಗಂಡಿನ ಬೇಧ ತೋರದೆ ಹೆತ್ತ ಮಕ್ಕಳೆಲ್ಲರಿಗೂ ಶಿಕ್ಷಣ ಕೊಡಿಸಬೇಕು ಎಂದರು. ಕ್ರೆöÊಸ್ತ ಧರ್ಮಗುರು ಬಿಶಫ್ ಡಾ.ರಾಬರ್ಟ್ ಎಂ.ಮಿರAಡಾ ಮಾತನಾಡಿ, ಪ್ರಾಥಮಿಕ ಹಂತದ ಮಕ್ಕಳ ಕಲಿಕೆಗೆ ತೀವ್ರ ಒತ್ತಡ ಹೇರಬೇಡಿ. ಸ್ವಂತ್ರವಾಗಿ ಅಭ್ಯಾಸ ಮಾಡಲು ಅವಕಾಶ ಕೊಡಿ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿರಿ ಎಂದರು. ಬೌದ್ಧ ಭಿಕ್ಕು ಜ್ಞಾನಸಾಗರ ಭಂತೇಜಿ ಬೀದರ ಮಾತನಾಡಿ, ವಾಸ್ತವದಲ್ಲಿ ನಾವಿ ವಿವಿಧ ಧರ್ಮ ಚಿಂತನೆಗಳಲ್ಲಿ ಬಾಳುತ್ತಿರಬಹುದು. ಆದರೆ ಮಾನವೀಯತೆ ಸ್ಥಾಪನೆಯೇ ಪ್ರತಿಯೊಂದು ಧರ್ಮದ ಗುರಿಯಾಗಿದೆ. ಶಿಸ್ತು, ನಯ-ವಿನಯ, ಗೌರವಿಸುವ ಗುಣ, ಶೈಕ್ಷಣಿಕ ಸೇವೆಯನ್ನು ನಾವು ಕಲಿಯಬೇಕಿದೆ. ಅವರು ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಾಮಾಜಿಕ ಚಿಂತನೆ ಬಿತ್ತುತ್ತಿದ್ದಾರೆ ಎಂದರು.ಹಳಕರ್ಟಿ ಸಿದ್ದೇಶ್ವರ ಧ್ಯಾನಧಾಮದ ಶ್ರೀರಾಜಶೇಖರ ಸ್ವಾಮೀಜಿ, ಜಾಮಿಯಾ ಮಸೀದಿಯ ಮೌಲಾನಾ ಮಹ್ಮದ್ ಅಬ್ದುಲ್ ಬಾಖಿ ಖ್ವಾಲಿದ್ ನಿಜಾಮಿ ಹಾಗೂ ಸಂತ ಅನ್ನಾಸ್ ಕ್ಯಾಥೋಲಿಕ್ ಚರ್ಚ್ ಫಾದರ್ ರೋಹನ್ ಡಿಸೌಜಾ, ಫಾದರ್ ಸ್ಟ್ಯಾನಿಲೋಬೊ ಕಲಬುರಗಿ ಸಾನ್ನಿಧ್ಯ ವಹಿಸಿದ್ದರು.
ಎಸಿಸಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನೀಲ ಗುಪ್ತಾ, ಬಿಆರ್‌ಸಿ ಮಲ್ಲಿಕಾರ್ಜುನ ಸೇಡಂ, ಸಿಆರ್‌ಪಿ ಸೂರ್ಯಕಾಂತ ದಿಗ್ಗಾಂವಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಅಬ್ದುಲ್ ಸಲೀಂ ಪ್ಯಾರೆ, ಡಾ.ಖ್ವಾಜಾ ಮೈನೋದ್ಧಿನ್, ಡಾನ್‌ಬಾಸ್ಕೊ, ಸೇರಿದಂತೆ ಸಾವಿರಾರು ಜನ ಪೋಷಕರು ಪಾಲ್ಗೊಂಡಿದ್ದರು. ಸಿಸ್ಟರ್ ಗ್ರೇಸಿ ವಾರ್ಷಿಕ ವರದಿ ಓದಿದರು. ಸಿಸ್ಟರ್ ಜಯಾರಾಣಿ ವಸಂತಾ ಸ್ವಾಗತಿಸಿದರು. ಶಿಕ್ಷಕಿ ಲತಾ ವಂದಿಸಿದರು.