ಸಾರಾಂಶ
ಪ್ರತಿಭಾನ್ವಿತ ಬಾಲ ರಂಗನಟರಾಗಿರುವ ಚರಿತ್ ಮತ್ತು ಮಯೂರ್ ಗೌಡ ಇಬ್ಬರೂ ಅದಮ್ಯ ರಂಗಶಾಲೆಯ ಹದಿನೈದಕ್ಕೂ ಹೆಚ್ಚು ಮಕ್ಕಳ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಮೈಸೂರು
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕೆ.ಎಚ್. ರಾಮಯ್ಯ ಸ್ಮರಣಾರ್ಥ ಕೊಡಮಾಡುವ ವಿಕಾಸಶ್ರೀ ಪ್ರಶಸ್ತಿಗೆ ನಗರದ ಅದಮ್ಯ ರಂಗಶಾಲೆಯ ಪ್ರತಿಭಾವಂತ ರಂಗ ವಿದ್ಯಾರ್ಥಿಗಳಾದ ಚರಿತ್ ಅದಮ್ಯ ಹಾಗೂ ಜೆ. ಮಯೂರ್ ಗೌಡ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಅಧ್ಯಕ್ಷೆ ಎಚ್.ಎಲ್. ಯಮುನಾ ಹೇಳಿದ್ದಾರೆ. ಪ್ರತಿಭಾನ್ವಿತ ಬಾಲ ರಂಗನಟರಾಗಿರುವ ಚರಿತ್ ಮತ್ತು ಮಯೂರ್ ಗೌಡ ಇಬ್ಬರೂ ಅದಮ್ಯ ರಂಗಶಾಲೆಯ ಹದಿನೈದಕ್ಕೂ ಹೆಚ್ಚು ಮಕ್ಕಳ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜು. 12ರಂದು ಸಂಜೆ 4.30ಕ್ಕೆ ನಗರದ ದ ಪ್ರೆಸಿಡೆಂಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ಕೆ.ಎಚ್. ರಾಮಯ್ಯ ಸಂಸ್ಮರಣಾ ಸಮಾರಂಭದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ಸಾಹಿತಿ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.