ಸಾರಾಂಶ
ಮೈಸೂರು: ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸದ್ವಿದ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ ''''''''''''''''ಸಂಪ್ರಭಾ'''''''''''''''' ಬಿಡುಗಡೆ ಸಮಾರಂಭ ನಡೆಯಿತು.ಕಾಲೇಜಿನ ಟಿ.ಪಿ.ಕೈಲಾಸಂ ರಂಗಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷ ಪ್ರೊ.ಎಂ.ಎಸ್.ಕೆ. ನರಹರಿ ಬಾಬು ಮಾತನಾಡಿ, ಜೀವನಕ್ಕೆ ಅನುಕೂಲಕರವಾದ ಓದನ್ನು ಪ್ರಜ್ಞಾವಂತಿಕೆಯಿಂದ ಆಯ್ಕೆ ಮಾಡಿಕೊಂಡು ಹೆತ್ತವರಿಗೆ, ಬೆಳೆಸಿದ ಸಂಸ್ಥೆಗೆ, ದೇಶಕ್ಕೆ ಕೃತಜ್ಞರಾಗಿರಬೇಕು ಎಂದು ಕರೆ ನೀಡಿದರು.ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ಕಾಲೇಜಿನ ವಾರ್ಷಿಕ ಸಂಚಿಕ ''''''''''''''''ಸಂಪ್ರಭಾ'''''''''''''''' ಬಿಡುಗಡೆಗೊಳಿಸಿ ಡಿಜಿಟಲ್ ಅವತರಿಣಿಕೆಯನ್ನು ಅನಾವರಣಗೊಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸುವುದೇ ನಮಗೆ ಸಂತೋಷದ ವಿಚಾರ, ಪ್ರತಿ ವರ್ಷವೂ ಕಾಲೇಜಿನ ಪ್ರತಿಭೆಗಳು ಹೆಚ್ಚಲಿ ಎಂಬ ಆಶಯ ನಮ್ಮದು ಎಂದರು.ವಾರ್ಷಿಕ ಸಂಚಿಕೆಯ ಸಂಪಾದಕ ಡಾ. ಮಂಜುನಾಥ್ ಭಟ್ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ಕೃಷ್ಟ ಶ್ರೇಣಿಯನ್ನು ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಉಪಾಧ್ಯಕ್ಷ ಎಸ್. ಬಾಲಾಜಿ ಅವರು ವಿದ್ಯಾವಂತರಾದ ನೀವು ಶ್ರದ್ಧಾವಂತರೂ, ವಿನಯವಂತರೂ ಆಗಿರಬೇಕೆಂದು ಶುಭ ಕೋರಿದರು. ಕಾಲೇಜಿನ ಪ್ರಾಂಶುಪಾಲ ವೈ.ಆರ್. ರಮೇಶ್ ಸ್ವಾಗತಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಇಂದುಮತಿ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೀಪ್ರದಾ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೃ. ಪಾ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.