ನುಡಿದಂತೆ ನಡೆಯುವ ನಿಷ್ಠುರ ವ್ಯಕ್ತಿ ಚೌಡಯ್ಯ: ಸಂಸದ ಪಿ.ಸಿ.ಗದ್ದಿಗೌಡರ

| Published : Jan 22 2025, 12:31 AM IST

ನುಡಿದಂತೆ ನಡೆಯುವ ನಿಷ್ಠುರ ವ್ಯಕ್ತಿ ಚೌಡಯ್ಯ: ಸಂಸದ ಪಿ.ಸಿ.ಗದ್ದಿಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರು ಸುಖ ಜೀವನ ಸಾಗಿಸಬೇಕು. ಚೌಡಯ್ಯನವರು ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ್ದರು. ಸಮಾಜದ ಅಭಿವೃದ್ಧಿಗೆ ಬದ್ಧರಾಗುವ ಜತೆಗೆ ಕಾಯಕದಲ್ಲಿ ತೊಡಗಬೇಕು

ಕನ್ನಡಪ್ರಭ ವಾರ್ತೆ ಬಾದಾಮಿ

ಎಲ್ಲ ಶರಣರಗಿಂತ ಭಿನ್ನವಾಗಿ ತಮ್ಮ ದಿಟ್ಟ ಮತ್ತು ಕ್ರಾಂತಿಕಾರಕ, ನುಡಿದಂತೆ ನಡೆಯುವ ಮೂಲಕ ನೇರ ನಿಷ್ಠುರ ವ್ಯಕ್ತಿ ಎಂದು ಹೆಸರುವಾಸಿಯಾದವರು ಅಂಬಿಗರ ಚೌಡಯ್ಯ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಇಲ್ಲಿನ ಪಿರ್ಕಾರ್ಡ್‌ ಬ್ಯಾಂಕ್‌ ಆವರಣದಲ್ಲಿ ಮಂಗಳವಾರ ನಡೆದ ತಾಲೂಕು ಆಡಳಿತ ಮತ್ತು ಅಂಬಿಗರ ಸಮಾಜದಿಂದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಶರಣರು ಎಂದಿದ್ದರೆ. ಅಂಬಿಗರ ಚೌಡಯ್ಯನವರಿಗೆ ನಿಜಶರಣ ಎಂದು ಕರೆದರು. ಅವರಲ್ಲಿನ ನೇರ ಮತ್ತು ದಿಟ್ಟತನದ ವಚನಗಳನ್ನು ಅವಲೋಕಿಸಿದ್ದಲ್ಲದೆ ನಾವಿ ಹಿಡಿದು ನುಡಿದಂತೆ ಬದುಕುವ ಶೈಲಿಯನ್ನು ಶರಣರೆಲ್ಲರೂ ಗಮನಿಸಿದ್ದರು. ನಿಜಶರಣರ ಬದುಕು ಮಾದರಿ. ಸಮಾಜ ಬಾಂಧವರು ಅವರ ಜೀವನ ಚರಿತ್ರೆ ಓದುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಮೂಲಕ ಬೇರೆ ಸಮಾಜ ಗೌರವಸಿ ಉತ್ತಮ ಬದುಕನ್ನು ಕಟ್ಟಿಕೊಳ್ಳ ಬೇಕು ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದನ ಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಯಾವ ಸ್ವಾಮೀಜಿಯನ್ನು ನಂಬಬೇಡಿ ನಿಮ್ಮ ಹೆತ್ತ ತಂದೆ ತಾಯಿಯನ್ನು ಪೂಜೆ ಮಾಡಿ ಅವರನ್ನು ವೃದ್ಧಾಶ್ರಮಕ್ಕೆ ಕಳಿಸದೆ ಜೋಪಾನವಾಗಿ ಸಾಕಿ ನಾನು ನೇರವಾಗಿ ಮಾತನಾಡುತ್ತೇನೆ. ಅದು ಕೆಲವರಿಗೆ ಆಗಿಬರುವುದಿಲ್ಲ. ನನ್ನ ಉದ್ದೇಶ ಭಕ್ತರಿಂದ ನಾವು ಅವರೆ ಮಠಮಂದಿರಗಳಿಗೆ ದಾನ ಮಾಡದಿದ್ದರೆ ನಮ್ಮಂತ ಸ್ವಾಮೀಜಿ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ಭಕ್ತರು ಸುಖ ಜೀವನ ಸಾಗಿಸಬೇಕು. ಚೌಡಯ್ಯನವರು ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ್ದರು. ಸಮಾಜದ ಅಭಿವೃದ್ಧಿಗೆ ಬದ್ಧರಾಗುವ ಜತೆಗೆ ಕಾಯಕದಲ್ಲಿ ತೊಡಗಬೇಕು ಎಂದರು.

ಗದಗ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾದ್ಯಾಪಕ ಎಚ್.ಎಸ್.ದಳವಾಹಿ ಚೌಡಯ್ಯ ಕುರಿತು ಉಪನ್ಯಾಸ ನೀಡಿದರು. ಶಿವಪೂಜಾ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ತಹಸೀಲ್ದಾರ್ ಮಧುರಾಜ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಸದಸ್ಯ ಮಂಜು ಹೊಸಮನಿ ಶಂಕರ ಕನಕಗಿರಿ, ಸಮಾಜದ ಅಧ್ಯಕ್ಷ ಅಡಿವೆಪ್ಪ ಅರಬೂತನವರ, ಸಿಪಿಐ ವಿಠ್ಠಲ ನಾಯ್ಕ, ಸಂಗಪ್ಪ ಬಾರಕೇರ, ಸಂಗಪ್ಪ ಶಿರಹಟ್ಟಿ, ಲಕ್ಷ್ಮಣ ಮಾಳವಾಡ, ರಾಜಶೇಖರ ಅಂಬಿಗೇರ, ಚಿನ್ನಪ್ಪ ಅಂಬಿಗೇರ, ವಿರುಪಾಕ್ಷಪ್ಪ ಅಂಬಿಗೇರ, ಡಾ.ಮುತ್ತಪ್ಪ ಅಂಬಿಗೇರ, ಗಂಗಾಧರ ಅರಬೂತನವರ ಸೇರಿ ಸರಕಾರಿ ಅಧಿಕಾರಿಗಳು ಇದ್ದರು.

ಇದೇ ವೇಳೆ ಅಂಬಿಗ ಸಮಾಜದ ಎಸ್ಎಸ್ಎಲ್‌ಸಿಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಮಟ್ಟದಲ್ಲಿ ಸರಕಾರಿ ಅಧಿಕಾರವನ್ನು ನಿರ್ವಹಿಸುವವರಿಗೆ ಸಮಾಜದಿಂದ ಸನ್ಮಾನಿಸಲಾಯಿತು. ಸದಾಶಿವ ಮರಡಿ ನಿರೂಪಿಸಿ, ಉಜ್ವಲ ಬಸರಿ ಸ್ವಾಗತಿಸಿ, ವಂದಿಸಿದರು.

ಮೆರವಣಿಗೆ:

ಇಲ್ಲಿಯ ಅಕ್ಕಮಹಾದೇವಿ ಸಭಾ ಭವನದಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಆರಂಭಗೊಂಡು ಮುಖ್ಯ ರಸ್ತೆಯ ಮೂಲಕ ವಿವಿಧ ವಾದ್ಯ ಮೇಳದೊಂದಿಗೆ ಪಿರ್ಕಾರ್ಡ್‌ ಬ್ಯಾಂಕ್ ಆವರಣಕ್ಕೆ ತಲುಪಿತು. ದ್ಯಾವಪ್ಪ ಬಾರಕೇರ, ಅರ್ಜುನ ಅಂಬಿಗೇರ, ಬಾಲಪ್ಪ ಬಾರಕೇರ, ರವಿ ಪೂಜಾರ ಮರಿಯಪ್ಪ ಬಾರಕೇರ, ರಂಗಪ್ಪ ಬಾರಕೇರ, ರಮೇಶ ಕುದರಿಮನಿ, ಯಮನಪ್ಪ ಬಾರಕೇರ, ಜಗದೀಶ ಕಟಗಿ, ಮಾಹಾಂತೇಶ ಅಂಬಿಗೇರ, ಮಲ್ಲಪ್ಪ ಅಂಬಿಗೇರ ಸೇರಿದಂತೆ ಮಹಿಳೆಯರು, ಯುವಕರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.