50 ಮಂದಿಗೆ ‘ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ’ ನೀಡಿ ಗೌರವಿಸಲಾಗುತ್ತದೆ ಎಂದು ಜವನೆರ್ ಬೆದ್ರದ ಸಂಸ್ಥಾಪಕ ಅಮರ್ ಕೋಟೆ ಅವರು ತಿಳಿಸಿದ್ದಾರೆ.

ಮೂಡುಬಿದಿರೆ: ಚೌಟರಾಣಿ ಅಬ್ಬಕ್ಕಳ 500 ನೇ ವರ್ಷದ ನೆನಪಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 500 ಮಂದಿ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕೆಲಸಕ್ಕೆ ಮೂಡುಬಿದಿರೆಯ ಜವನೆರ್ ಬೆದ್ರ ಫೌಂಡೇಶನ್ ಮುಂದಾಗಿದ್ದು ಪ್ರಥಮ ಹಂತದಲ್ಲಿ 50 ಮಂದಿಗೆ ‘ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ’ ನೀಡಿ ಗೌರವಿಸಲಾಗುತ್ತದೆ ಎಂದು ಜವನೆರ್ ಬೆದ್ರದ ಸಂಸ್ಥಾಪಕ ಅಮರ್ ಕೋಟೆ ಅವರು ತಿಳಿಸಿದ್ದಾರೆ.

ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ಉದ್ಯಮ ಕ್ಷೇತ್ರದ ಸಾಧನೆಗಾಗಿ ಶಾಂತಲಾ ಸೀತಾರಾಮ್‌ ಆಚಾರ್ಯ ಅವರ ಸಹಿತ 50 ಮಂದಿಯ ಹೆಸರು ಪ್ರಕಟಿಸಲಾಗಿದೆ. ವಿನಯ ಕಿಣಿ- ಸಾಮಾಜಿಕ ಜಾಲತಾಣ, ಪ್ರೇಮ ಪೂಜಾರಿ- ನಾಟಿ ವೈದ್ಯೆ, ಸಂದ್ಯಾ ಭಟ್ – ಪರಿಸರ, ಬಿಂದಿಯಾ ಶರತ್ ಶೆಟ್ಟಿ- ಸಮಾಜ ಸೇವೆ, ಡಾ.ರೇವತಿ ಭಟ್- ವೈದ್ಯಕೀಯ, ಡಾ‌.ಸರಸ್ವತಿ – ವೈದ್ಯಕೀಯ, ಡಾ‌.ಶೆಹನಾಝ್ – ವೈದ್ಯಕೀಯ, ರಮಣಿ- ಸಮಾಜಸೇವೆ, ಶಾರದಾ- ನರ್ಸ್, ಆಶಾ- ಸಿಸ್ಟರ್, ಉಷಾ- ಸಿಸ್ಟರ್, ಶೋಭಾ ಶೆಟ್ಟಿ- ಸಮಾಜ ಸೇವೆ,ಪೂರ್ಣಿಮಾ- ಕಲೆ, ರಕ್ಷಿತಾ- ಪೊಲೀಸ್, ವಿನುತಾ ಆನಂದ್- ಪಶು ಆರೈಕೆ, ಉಷಾ- ಶಿಕ್ಷಣ, ಜಾನ್ವಿ ಉಮೇಶ್ ಪೈ- ಧಾರ್ಮಿಕ ಸೇವೆ, ಆಶಾಲತಾ ಪ್ರಭು- ಧಾರ್ಮಿಕ, ಲಲಿತಾ- ನಾಟಿ ವೈದ್ಯೆ, ವೀಣಾ ಸಂತೋಷ್- ಸಂಗೀತ, ವಿದ್ಯಾಭಟ್ -ಉದ್ಯಮ, ರೂಪಾ ಬಲ್ಲಾಳ್ -ಸಮಾಜ ಸೇವೆ, ಶ್ವೇತಾ ಜೈನ್ -ವಕೀಲರು, ಸುಕನ್ಯಾ- ಉದ್ಯಮ, ಪ್ರಕೃತಿ ಮಾರೂರು-ಯಕ್ಷಗಾನ, ಸುಂದರಿ- ಪೌರಕಾರ್ಮಿಕ ಕ್ಷೇತ್ರ, ವಿನೋದಿನಿ-ಆಶಾ ಕಾರ್ಯಕರ್ತೆ, ಕಮಲಾ ಪಾಲಡ್ಕ- ಸಿಸ್ಟರ್,ನಾಗಶ್ರೀ-ಸಾಹಿತ್ಯ, ಸುಮನಾ-ಭರತನಾಟ್ಯ,ಹರ್ಷ ಕೋಟ್ಯಾನ್-ಕರಾಟೆ, ಪ್ರೇಮಲತಾ ಚಂದ್ರಶೇಖರ್- ಶಿಕ್ಷಣ, ಬೇಬಿ ಜೋಗಿ- ಹಿರಿಯ ಬಲೆ ವ್ಯಾಪಾರಿ,ಸಹನಾ ನಾಗರಾಜ್ – ಸಮಾಜ ಸೇವೆ,ಅಮ್ರಿನ್ – ಕ್ರೀಡೆ, ಸುಮಂಗಲ- ಸಮಾಜ ಸೇವೆ, ತನುಶ್ರೀ- ಯೋಗ, ಶುಭಲತಾ – ಸ್ವಚ್ಚತೆ, ರಾಜಶ್ರೀ- ಶಿಕ್ಷಣ, ಅನಿತಾ- ಸಾಹಿತ್ಯ ಕ್ಷೇತ್ರ, ಸೌಮ್ಯ ಕೋಟ್ಯಾನ್- ನಿರೂಪಣೆ, ಡಾ.ರೇಖಾ ರಮೇಶ್- ಆರೋಗ್ಯ ,ಶಶಿಕಲಾ- ಅಂಗನವಾಡಿ, ಉಷಾ ಡಿ.ಪೈ- ಉದ್ಯಮ, ಸವಿತಾ ರಾವ್- ಬ್ಯಾಂಕಿಂಗ್, ರೂಪಾ ಶೆಟ್ಟಿ- ಸಮಾಜ ಸೇವೆ ಹಾಗೂ ಶಾರದಮ್ಮ- ಧಾರ್ಮಿಕ ಕ್ಷೇತ್ರ.ಈ 50 ಮಂದಿಗೆ ಡಿ.14 ರಂದು ಸಂಜೆ 4 ಗಂಟೆಗೆ ಮೂಡುಬಿದಿರೆ ಚೌಟರ ಅರಮನೆಯ ಮುಂಭಾಗದಲ್ಲಿರುವ ಅಬ್ಬಕ್ಕ ಕಿರು ಉದ್ಯಾನದಲ್ಲಿ ಪ್ರೇರಣಾ ಪತ್ರ ನೀಡಿ ಗೌರವಿಸಲಾಗುವುದೆಂದು ಅಮರ್ ಕೋಟೆ ತಿಳಿಸಿದ್ದಾರೆ.