ಜೆಪಿನಗರ ಚರ್ಚ್‌ನಲ್ಲಿ ಕ್ರಿಸ್‌ಮಸ್‌

| Published : Dec 27 2024, 12:47 AM IST

ಸಾರಾಂಶ

ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್ ಈವ್ ಹಬ್ಬವನ್ನು ಕ್ರೈಸ್ತ ಬಾಂಧವರು ಅತ್ಯಂತ ಸಡಗರದಿಂದ ಆಚರಿಸಿದರು. ಪಟ್ಟಣದ ಜೆಪಿ ನಗರದ ಸಂತ ಮಿಕೇಕೇನರ ದೇವಾಲಯದ ಧರ್ಮಗುರು ಫಾದರ್‌ ಪೃಸನ್ನ ಕುಮಾರ್ ಏಸುವಿನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಲ ಏಸುವಿನ ಪ್ರತಿಮೆಯನ್ನು ಅವರ ಜೀವನಾಧರಿತ ಕಥೆ ಸಾರುವ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬೇಲೂರು: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್ ಈವ್ ಹಬ್ಬವನ್ನು ಕ್ರೈಸ್ತ ಬಾಂಧವರು ಅತ್ಯಂತ ಸಡಗರದಿಂದ ಆಚರಿಸಿದರು.ಪಟ್ಟಣದ ಜೆಪಿ ನಗರದ ಸಂತ ಮಿಕೇಕೇನರ ದೇವಾಲಯದ ಧರ್ಮಗುರು ಫಾದರ್‌ ಪೃಸನ್ನ ಕುಮಾರ್ ಏಸುವಿನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಲ ಏಸುವಿನ ಪ್ರತಿಮೆಯನ್ನು ಅವರ ಜೀವನಾಧರಿತ ಕಥೆ ಸಾರುವ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಧರ್ಮಗುರು ಪ್ರಸನ್ನ ಕುಮಾರ್, ಕ್ರಿಸ್ತ ಜಯಂತಿ ಶಾಂತಿ ಮತ್ತು ಭರವಸೆ ಸಂದೇಶವಾಗಿದೆ. ಬೆತ್ಲಹೇಮಿನಲ್ಲಿ ದನದ ಕೊಟ್ಟಿಗೆಯಲ್ಲಿ ದೀನನಾಗಿ ಜನಿಸಿದ ಪ್ರಭು ಏಸುವಿನ ಜನನ ನಮ್ಮ ಮೇಲಿರಿಸಿದ ಪ್ರೀತಿಯ ಸ್ನರಣೆಯ ದಿನವಾಗಿದ್ದು, ದ್ಚೇಷ, ಕಲಹ, ವಿಭಜನೆಯ ಹಾಗೂ ಪ್ರಕೃತಿ ವಿಕೋಪಗಳಿಂದ ನಲುಗಿದ ಜಗತ್ತಿಗೆ ಸಂದೇಶ ಸಾರಲು ಏಸು ಪ್ರತಿ ವರ್ಷವೂ ಸಹ ಪ್ರೀತಿ ಮತ್ತು ನಿರಂತರ ಪ್ರಸನ್ನತೆಯ ಪ್ರತೀಕವಾಗಿದೆ. ಮಾನವನಾಗಿ ಜನಿಸಿದ ಏಸು ಮಾನವರ ಮಧ್ಯೆ ಮಾನವೀಯತೆ ಕಾಪಾಡಿಕೊಂಡು ಜೀವಿಸಿ ಎಂದು ತೋರಿಸಿಕೊಟ್ಟಿದ್ದು ಏಸುವಿನ ಬೋಧನೆ ಬೆಳಕು ಮತ್ತೊಮ್ಮೆ ಪ್ರಕಾಶಿಸಲಿ. ಎಲ್ಲರಲ್ಲೂ ಸಹೋದರತ್ವದ ಭಾವನೆ ಬೆಳೆಯಲಿ. ನೂತನ ವರ್ಷವು ಪರಸ್ಪರ ಗೌರವಿಸುವಂತಹ ವರ್ಷವಾಗಲಿ ಎಂದು ಶುಭ ಹಾರೈಸಿದರಲ್ಲದೆ ತಾಲೂಕಿನ ಎಲ್ಲಾ ಜನತೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಫಾದರ್ ಪ್ರಕಾಶ್ ಥಾವರ್, ಜೋಸೆಫ್‌, ಪಿಂಟೋ, ಬ್ರದರ್‌ ಕ್ರಿಸ್ಟನ್ ಫರ್ನಾಂಡಿಸ್, ಬ್ರದರ್ ರಾಕೇಶ್, ದೀಪಕ್ ಫರ್ನಾಂಡಿಸ್, ಬೋನಿ ಡಿಸೋಜ ಹಾಜರಿದ್ದರು.