ಕೊಟ್ಟಿಗೆಹಾರಇದೇ 25ರಂದು ನಡೆಯಲಿರುವ ಕ್ರಿಸ್ ಮಸ್ ಹಬ್ಬಕ್ಕೆ ಕೊಟ್ಟಿಗೆಹಾರ ಚರ್ಚ್ ವ್ಯಾಪ್ತಿಯ ಕ್ರೈಸ್ತರು ಬಾಳೂರು, ಜಾವಳಿ,ಕೊಟ್ಟಿಗೆಹಾರ ಸುತ್ತಮುತ್ತ ಹಬ್ಬಕ್ಕೆ ಎರಡು ವಾರಕ್ಕೆ ಮುನ್ನವೇ ಕ್ರಿಸ್ ಮಸ್ ಕೇರಲ್ಸ್ ಗೀತ ಗಾಯನಗಳನ್ನು ಆರಂಭಿಸಿದ್ದಾರೆ.

- ಮಲೆನಾಡಿನಲ್ಲಿ ಕ್ರಿಸ್ತನ ಜನನದ ಸಂದೇಶ ಸಾರುವ ಕೇರಲ್ಸ್ ಸಂಭ್ರಮ

ಕನ್ನಡಪ್ರಭವಾರ್ತೆ, ಕೊಟ್ಟಿಗೆಹಾರ

ಇದೇ 25ರಂದು ನಡೆಯಲಿರುವ ಕ್ರಿಸ್ ಮಸ್ ಹಬ್ಬಕ್ಕೆ ಕೊಟ್ಟಿಗೆಹಾರ ಚರ್ಚ್ ವ್ಯಾಪ್ತಿಯ ಕ್ರೈಸ್ತರು ಬಾಳೂರು, ಜಾವಳಿ,ಕೊಟ್ಟಿಗೆಹಾರ ಸುತ್ತಮುತ್ತ ಹಬ್ಬಕ್ಕೆ ಎರಡು ವಾರಕ್ಕೆ ಮುನ್ನವೇ ಕ್ರಿಸ್ ಮಸ್ ಕೇರಲ್ಸ್ ಗೀತ ಗಾಯನಗಳನ್ನು ಆರಂಭಿಸಿದ್ದಾರೆ.

ಪ್ರತಿ ವಾರದ ಶನಿವಾರ, ಭಾನುವಾರ ಪ್ರತಿ ಕ್ರೈಸ್ತರ ಮನೆಗಳಿಗೆ ಬಾಲ ಯೇಸುವಿನ ಪ್ರತಿಮೆಯನ್ನು ಹೊತ್ತು ಸಾಗಿ ಕ್ರಿಸ್ ಮಸ್ ಗೀತೆಗಳನ್ನು ಹಾಡಿ ಸಾಂತಾ ಕ್ಲಾಸ್ ನೃತ್ಯದ ಮೂಲಕ ಗಮನ ಸೆಳೆದು ಮಕ್ಕಳು, ಹಿರಿಯರಿಗೆ ಸಿಹಿ ನೀಡಿ ಕೈಕುಲುಕಿ ಹಬ್ಬದ ಶುಭಾಶಯ ಕೋರುವ ಸಂಭ್ರಮ ಜೋರಾಗಿ ಸಾಗಿದೆ.

ಬಾಳೂರು ಚರ್ಚ್ ವ್ಯಾಪ್ತಿಯ ಮನೆಗಳಿಗೆ ಧರ್ಮಗುರು ಫಾ.ವಿಲಿಯಂ ಬರ್ನಾರ್ಡ್ ನೇತೃತ್ವದಲ್ಲಿ ಕೇರಲ್ಸ್ ಸಿಂಗಿಂಗ್ ಆರಂಭವಾಗಿದ್ದು ಕೈಸ್ತ ಭಕ್ತಿಗೀತೆಗಳನ್ನು ಹಾಡಿ ಬೈಬಲ್ ಪಠಿಸಿ ಗುರುಗಳು ಸಂದೇಶ ನೀಡಿ ಕ್ರೈಸ್ತರ ಜನನದ ಆಗಮನದ ಬಗ್ಗೆ ಜಾಗೃತಿ ಮೂಡಿಸಿ ಶುಭಾಶಯ ಕೋರುತ್ತಾರೆ.

ಬಾಳೂರು ಭಾಗದಲ್ಲಿ ಈಗಾಗಲೇ ಕೇರಲ್ಸ್ ಗೀತಾ ಗಾಯನದ ಸಂಭ್ರಮ ಆರಂಭವಾಗಿದ್ದು ಮಲೆನಾಡಿನ ಮನೆಗಳಿಗೆ ಕ್ರಿಸ್ ಮಸ್ ತಾತಾ ಕ್ರೈಸ್ತ ಭಕ್ತಾಧಿಗಳ ಜತೆಗೆ ತೆರಳಿ ಹಬ್ಬದ ಸಂಭ್ರಮ ಇಮ್ಮಡಿ ಗೊಳಿಸುತ್ತಿದ್ದಾರೆ. ಕೊಟ್ಟಿಗೆಹಾರ, ಬಾಳೂರು ಜಾವಳಿ ಚರ್ಚ್ ನಲ್ಲಿ ಕ್ರಿಸ್ ಮಸ್ ಗೋದಲಿಗಳ ತಯಾರಿ ನಡೆಯುತ್ತಿದ್ದು ಗೋದಲಿಯ ಪೈಪೋಟಿ ಕೂಡ ಜೋರಾಗಿ ಮುಂದುವರೆದಿದೆ.ಭಕ್ತರಲ್ಲಿ ಕ್ರಿಸ್ ಮಸ್ ಹಬ್ಬದ ಕೇರಲ್ಸ್ ಸಂಭ್ರಮ ಕೊರೆಯುವ ಚಳಿಯಲ್ಲೂ ಉತ್ಸಾಹ ಜೋರಾಗಿದೆ.ಪೋಟೋ ಫೈಲ್ ನೇಮ್‌ 13 ಕೆಸಿಕೆಎಂ 1ಕೊಟ್ಟಿಗೆಹಾರ ಚರ್ಚ್ ವ್ಯಾಪ್ತಿಯಲ್ಲಿ ಕ್ರಿಸ್ಮಸ್ ಜಾಗೃತಿ ಆರಂಭ