ಸಾರಾಂಶ
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ, ಸಮಾಜ ಸೇವಕ ರಾಜೇಶ್ ಕಡಲಕೆರೆ ಅವರನ್ನು ಸನ್ಮಾನಿಸಲಾಯಿತು.
ಮೂಡುಬಿದಿರೆ: ಮೂಡುಬಿದಿರೆ ಅಲಂಗಾರು ಮೌಂಟ್ ರೋಸರಿ ಆಸ್ಪತ್ರೆ ಮತ್ತು ಮೌಂಟ್ ರೋಸರಿ ಸಂಸ್ಥೆಯ ಆಶ್ರಯದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.ಮೌಂಟ್ ರೋಸರಿ ಆಸ್ಪತ್ರೆ ಮತ್ತು ಮೌಂಟ್ ರೋಸರಿ ಸಂಸ್ಥೆಗಳ ಸ್ಥಾಪಕರಾದ ರೆ.ಫಾ. ಎಡ್ವಿನ್ ಪಿಂಟೊ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ., ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್, ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಎಂ.ಸಿ.ಎಸ್. ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪುರಸಭಾ ನಾಮನಿರ್ದೇಶಿತ ಸದಸ್ಯ ಕ್ಲಾರಿಯೋ ಡಿಸೋಜ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ, ಸಮಾಜ ಸೇವಕ ರಾಜೇಶ್ ಕಡಲಕೆರೆ ಅವರನ್ನು ಸನ್ಮಾನಿಸಲಾಯಿತು. ಮೌಂಟ್ ರೋಸರಿ ಸಂಸ್ಥೆಗಳ ಸುಪೀರಿಯರ್ ಸಿ. ಪ್ರೆಸಿಲ್ಲಾ, ಮದರ್ ಜನರಲ್ ಸುಪೀರಿಯರ್ ಸಿ. ಸುನೀತಾ ಮತ್ತಿತರರು ಉಪಸ್ಥಿತರಿದ್ದರು.