ಸಾರಾಂಶ
ಆಲೂರು ತಾಲೂಕಿನ ವಾಟೇಹೊಳೆಯಲ್ಲಿರುವ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ರಿಸ್‌ಮಸ್ ಎಂಬುದು ಸೌಹಾರ್ದತೆಯಾಗುತ್ತಿದ್ದು, ಸಡಗರವಾಗಿ, ಜಾತಿ-ಧರ್ಮಗಳ ಭೇದವಿಲ್ಲದೆ ಆಚರಣೆಯಲ್ಲಿ ಭಾಗವಹಿಸುತ್ತಾರೆ. ನಮ್ಮ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ಕ್ರೆಸ್ತ ಬಾಂಧವರೊ ದಿಗೆ ಅನ್ಯ ಧರ್ಮೀಯರು ಸಹ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗಿಯಾಗಿ ಸಾಮರಸ್ಯ ಮೆರೆದಿದ್ದಾರೆ ಎಂದು ತಿಳಿಸಿದರು.
ಆಲೂರು:ಪ್ರತಿಯೊಬ್ಬರು ದೇವರ ಸ್ವರೂಪವಾಗಿದ್ದು, ಅದೃಶ್ಯ ದೇವರ ಸದೃಶ್ಯ ರೂಪ ಮನುಷ್ಯನಾಗಿದ್ದಾನೆ. ಜಾತಿ, ಮತ, ಪಂಥ ಭೇದ-ಭಾವಗಳಿಲ್ಲದೆ ಜೀವನ ನಡೆಸುವುದು ಅಗತ್ಯವಾಗಿದೆ ಎಂದು ವಾಟೇಹೊಳೆ ಗ್ರೆಸ್ ರಿವೈವಲ್ ಚರ್ಚ್‌ನ ಪಬ್ಲಿಕ್ ಸ್ಪೀಕರ್ ಮತ್ತು ಸಿಂಗರ್ ರೆವರೆಂಡ್ ಪುಟ್ಟಸ್ವಾಮಿ ಎಸ್ ಎಸ್ ಅಭಿಪ್ರಾಯಪಟ್ಟರು.
ಆಲೂರು ತಾಲೂಕಿನ ವಾಟೇಹೊಳೆಯಲ್ಲಿರುವ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ರಿಸ್‌ಮಸ್ ಎಂಬುದು ಸೌಹಾರ್ದತೆಯಾಗುತ್ತಿದ್ದು, ಸಡಗರವಾಗಿ, ಜಾತಿ-ಧರ್ಮಗಳ ಭೇದವಿಲ್ಲದೆ ಆಚರಣೆಯಲ್ಲಿ ಭಾಗವಹಿಸುತ್ತಾರೆ. ನಮ್ಮ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ಕ್ರೆಸ್ತ ಬಾಂಧವರೊ ದಿಗೆ ಅನ್ಯ ಧರ್ಮೀಯರು ಸಹ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗಿಯಾಗಿ ಸಾಮರಸ್ಯ ಮೆರೆದಿದ್ದಾರೆ ಎಂದು ತಿಳಿಸಿದರು.ಡಿ.೨೫ ಯೇಸುಕ್ರಿಸ್ತರು ಜನ್ಮತಾಳಿದ ಹಬ್ಬ. ಯೇಸು ವಿಶ್ವಮಾನವರಾಗಿ ಎಲ್ಲರ ಉದ್ಧಾರಕ್ಕಾಗಿ ಧರೆಗೆ ಬಂದವರು. ಪ್ರೀತಿಯೇ ದೇವರು. ಪ್ರತಿಯೊಬ್ಬರು ದೇವರ ಸ್ವರೂಪವಾಗಿದ್ದು, ಅದೃಶ್ಯ ದೇವರ ಸದೃಶ್ಯ ರೂಪ ಮನುಷ್ಯನಾಗಿದ್ದಾನೆ. ಜಾತಿ, ಮತ, ಪಂಥ ಭೇದ-ಭಾವಗಳಿಲ್ಲದೆ ಜೀವನ ನಡೆಸುವುದು ಇಂದಿನ ಅಗತ್ಯವಾಗಿದೆ. ಪ್ರೀತಿಯೇ ದೇವರಾಗಿದ್ದು, ಪ್ರತಿಯೊಬ್ಬರು ಯೇಸುವಿನ ಸಂದೇಶಗಳನ್ನು ಪಾಲಿಸಿ, ಜಗತ್ತಿಗೆ ಶಾಂತಿ ಸಂದೇಶ ಸಾರಬೇಕಿದೆ. ಎಲ್ಲರೂ ಒಂದೇ ಎಂಬ ಮನೋಭಾವ ಎಲ್ಲರಲ್ಲಿ ಬರಬೇಕಿದೆ. ಇದಕ್ಕಾಗಿ ಎಲ್ಲ ಧರ್ಮಗಳ, ಸ್ವಾಮೀಜಿಗಳು, ಧರ್ಮಾಧಿಕಾರಿಗಳು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಲೋಕ ಕೆಟ್ಟು ಹೋಗಿದೆ. ಬರೀ ಮಾತಿನಲ್ಲಿ ಅಣ್ಣ, ತಮ್ಮ ಎಂದು ಹೇಳುತ್ತೇವೆ. ಆದರೆ, ಅಂತರಾಳದಲ್ಲಿ ಪ್ರೀತಿಯಿಲ್ಲ. ಸ್ವಾರ್ಥ ಮನೋಭಾವದಿಂದ ಕೂಡಿದ ಮನಸುಗಳು ಹೆಚ್ಚಾಗುತ್ತಿವೆ. ಆದ್ದರಿಂದ ಯೇಸು ಮಾನವ ಕಲ್ಯಾಣಕ್ಕಾಗಿ ಗೋದಲಿಯಲ್ಲಿ ಜನಿಸಿಬಂದ. ಪ್ರತಿಯೊಬ್ಬರು ಪ್ರೀತಿಯಿಂದ ಬಾಳಿ, ಶಾಂತಿಯನ್ನು ಕಾಪಾಡಬೇಕಾದ ಅವಶ್ಯವಿರುವ ಪ್ರಸ್ತುತದಲ್ಲಿ ಗ್ರೆಸ್ ರಿವೈವಲ್ ಚರ್ಚ್ ಪ್ರೀತಿ ಹಂಚಿ, ಶಾಂತಿ ಕಾಪಾಡುತ್ತಿದೆ ಎಂದು ಹೇಳಿದರು.