ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಟಪ್ಟಣ
ಪಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾನ 225 ವರ್ಷಗಳ ಇತಿಹಾಸ ಇರುವ ಅಬ್ಬೆದುಬ್ಬಾ ಚರ್ಚ್ ನ ಮಾತಾ ಅಮೃತ ಮಾತೆಯ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಚರ್ಚ್‌ನ ಫಾದರ್ ಜಾನ್ ಸಗಾಯ್ ಪುಷ್ಪರಾಜ್ ನೈತೃತ್ವದಲ್ಲಿ ನೆರೆದಿದ್ದ ಜನರು ಏಸು ಕುರಿತು ಪ್ರಾರ್ಥನೆ ಸಲ್ಲಿಸಿದ್ದರು. ಮಕ್ಕಳು ವೇಷಭೂಷಣ ತೊಟ್ಟು ಜನರನ್ನು ಆಕರ್ಷಿಸಿದರು. ನೆರದಿದ್ದ ಜನರು ಏಸು ಕ್ರಿಸ್ತನ ಕುರಿತು ಹಾಡುಗಳ ಹೇಳಿ ಪ್ರಾರ್ಥಿಸಿದರು. ಚರ್ಚ್ ಸುತ್ತಲೂ ನಿರ್ಮಿಸಿದ್ದ ಯೇಸು ಕ್ರಿಸ್ತನ ಜೀವನಾಧಾರಿತ ಸ್ತಬ್ಧ ಚಿತ್ರಗಳು ಚರ್ಚ್ ಗೆ ಬರುವ ಭಕ್ತರ ಗಮನ ಸೆಳೆಯಿತು.
ಪಟ್ಟಣ ಸೇರಿದಂತೆ ಗಂಜಾಂನ ಮಕ್ಕಳು ಸೇರಿದಂತೆ ನೂರಾರು ಕ್ರೈಸ್ತ ಮುಖಂಡರು ಭಾಗವಹಿಸಿದ್ದರು. ಚರ್ಚ್ ಆವರಣದಲ್ಲಿ ಏಸು ದೇವರು ಮಕ್ಕಳಂತಿದ್ದ ವೇಳೆ ಕುರಿತಾಗಿ ಗುಡಿಸಿಲು ನಿರ್ಮಿಸಿ ಏಸುವಿನ ಬೊಂಬೆಗಳ ಇಟ್ಟು ಜನಾರ್ಕಣೆಗೊಳ್ಳುವಂತೆ ಮಾಡಲಾಯಿತು.ಗಂಜಾಂ ಮಾತ್ರವಲ್ಲದೆ ತಾಲೂಕಿನ ಪಾಲಹಳ್ಳಿ, ಚಿಂದಗಿರಿಕೊಪ್ಪಲು ಹಾಗೂ ಹುಲಿಕೆರೆ ಗ್ರಾಮಗಳ ಚರ್ಚ್‌ಗಳಲ್ಲೂ ಏಸು ಕ್ರಿಸ್ತನ ಪ್ರಾರ್ಥನೆ ಸಲ್ಲಿಸಿದರು.
ಚುನಾವಣೆ ಕುರಿತಾದ ಎಲೆಕ್ಟ್ರಾನಿಕ್ ದಾಖಲೆ ನಿರ್ಬಂಧ ತೆರವಿಗೆ ಕಿರಂಗೂರು ಪಾಪು ಒತ್ತಾಯಮಂಡ್ಯ: ಚುನಾವಣೆ ಕುರಿತಾದ ಎಲೆಕ್ಟ್ರಾನಿಕ್ ದಾಖಲೆ ಸಾರ್ವಜನಿಕರಿಗೆ ಲಭ್ಯವಿದ್ದ ಕಡತಗಳನ್ನು ನಿರ್ಬಂಧಿಸಿರುವುದನ್ನು ಕೂಡಲೇ ತೆರವುಗೊಳಿಸಲು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ರಾಜ್ಯ ರೈತ ಸಂಘದ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಸಾರ್ವಜನಿಕ ತೆರಿಗೆ ಹಣದಿಂದ ಚುನಾವಣಾ ಆಯೋಗವು ಚುನಾವಣೆ ಖರ್ಚು-ವೆಚ್ಚ ಭರಿಸುತ್ತದೆ. ಯಾವುದೇ ಚುನಾವಣೆಗಳು ಸರ್ಕಾರ ಮತ್ತು ಚುನಾವಣಾ ಆಯೋಗ ಸಾಧಕ-ಬಾಧಕಗಳನ್ನು ಚರ್ಚೆ ಮಾಡಿ ಮಾರ್ಗಸೂಚಿಗಳ-ಬೈಲಾಗಳ ಪ್ರಕಾರ ನಡೆಯುತ್ತವೆ ಎಂದು ತಿಳಿಸಿದ್ದಾರೆ.ಪಾರದರ್ಶಕವಾಗಿ ಚುನಾವಣೆಗಳಿಗಾಗಿ ಆಯೋಗ ನೂರಾರು ಕೋಟಿ ಖರ್ಚು ಮಾಡಿ ಮುಕ್ತ ಮತದಾನ, ಸುರಕ್ಷತಾ ದೃಷ್ಟಿಯಿಂದ ಎಲೆಕ್ಟ್ರಾನಿಕ್ ವೆಬ್‌ಕಾಸ್ಟಿಂಗ್ ಸಿಸಿ ಟಿವಿಗಳನ್ನು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಸುರಕ್ಷಿತ ಕ್ರಮವಾಗಿ, ದಾಖಲೆ ಕೈತುದಿಯಲ್ಲಿ ಸಿಕ್ಕಬೇಕೆಂಬ ಉದ್ದೇಶದಿಂದ ಚುನಾವಣೆ ನಡೆಸುತ್ತದೆ. ಆದರೆ, ಚುನಾವಣೆ ಹಾಗೂ ಅಭ್ಯರ್ಥಿಗಳ ನಾಮಪತ್ರಗಳು ಪಾರದರ್ಶಕವಾಗಿ ನಡೆದಿಲ್ಲ ಎಂಬ ಸಂಶಯ ಬಂದಾಗ ಹಾಗೂ ಖರ್ಚು-ವೆಚ್ಚಗಳಲ್ಲಿ ಲೋಪವಾದರೆ ಅದನ್ನು ಪ್ರಶ್ನೆ ಮಾಡಿ ದಾಖಲೆ ತೆಗೆದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಹಾಗೂ ಅಭ್ಯರ್ಥಿಗಳು, ಮತದಾರರು ಸ್ವತಂತ್ರರಾಗಿರುತ್ತಾರೆ ಎಂದು ಹೇಳಿದ್ದಾರೆ.
ಕೇಂದ್ರ ಚುನಾವಣೆ ಆಯೋಗ ಹಾಗೂ ಕೇಂದ್ರ ಸರ್ಕಾರ ಚುನಾವಣೆಗಳಲ್ಲಿ ಸಾರ್ವಜನಿಕ ಎಲೆಕ್ಟ್ರಾನಿಕ್ ದಾಖಲೆಗಳು ನೀಡುವುದಿಲ್ಲ ಹಾಗೂ ಕಾಯ್ದೆಗೆ ತಿದ್ದುಪಡಿ ಮಾಡಿ ನಿರ್ಬಂಧಿಸಿರುವುದು ನೋಡಿದರೆ ಬೇಲಿಯೇ ಎದ್ದು ಹೊಲ ಮೇದಂತಿದೆ ಎಂದು ದೂರಿದ್ದಾರೆ.ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ ದಾಖಲೆ ನೀಡಲು ಆಯೋಗ ಹಿಂದೇಟು ಆಗುತ್ತಿವೆ. ಕೂಡಲೇ ಇದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.