ಸಾರಾಂಶ
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಕ್ರೈಸ್ತರು ಪಟ್ಟಣದ ಚರ್ಚ್‌ಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಏಸುಕ್ರಿಸ್ತನ ಹುಟ್ಟುವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಗುಂಡ್ಲುಪೇಟೆ ಪಟ್ಟಣದ ಸೈಂಟ್ ಕುರಿಯಾಕೋಸ್ ಎಲಿಯಾಸ್ ಚರ್ಚ್‌ನಲ್ಲಿ ಫಾದರ್ ಸನ್ನಿ, ಫಾದರ್ ರಿಜೀಶ್ ಪುತಿಯಾಪರಂಬಿಲ್, ಫಾದರ್ ಆ್ಯಂಟನಿ, ಫಾದರ್ ಅಜು ಅವರು ಡಿ.೨೪ರ ಮಂಗಳವಾರ ಮಧ್ಯರಾತ್ರಿ ಯೇಸು ಕ್ರಿಸ್ತನ ಜನನವನ್ನು ಕೊಂಡಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಕ್ರೈಸ್ತರು ಪಟ್ಟಣದ ಚರ್ಚ್‌ಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಏಸುಕ್ರಿಸ್ತನ ಹುಟ್ಟುವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಪಟ್ಟಣದ ಸೈಂಟ್ ಕುರಿಯಾಕೋಸ್ ಎಲಿಯಾಸ್ ಚರ್ಚ್‌ನಲ್ಲಿ ಫಾದರ್ ಸನ್ನಿ, ಫಾದರ್ ರಿಜೀಶ್ ಪುತಿಯಾಪರಂಬಿಲ್, ಫಾದರ್ ಆ್ಯಂಟನಿ, ಫಾದರ್ ಅಜು ಅವರು ಡಿ.೨೪ರ ಮಂಗಳವಾರ ಮಧ್ಯರಾತ್ರಿ ಯೇಸು ಕ್ರಿಸ್ತನ ಜನನವನ್ನು ಕೊಂಡಾಡಿದರು. ಸೈಂಟ್ ಕುರಿಯಾಕೋಸ್ ಎಲಿಯಾಸ್ ಚರ್ಚ್‌ನಲ್ಲಿ ಹಾಗೂ ಲೂರ್ದ್ ಮಾತೆ ಚರ್ಚ್ ಒಳಗಡೆ ಯೇಸುವಿನ ಗೋದಲಿ (ತೊಟ್ಟಿ) ಯನ್ನು ಶೃಂಗರಿಸಿದ್ದರು. ಬಾಲ ಯೇಸುವನ್ನೊಳಗೊಂಡ ಚಿತ್ರಗಳನ್ನು ಅಲಂಕರಿಸಿದ್ದರು. ಭತ್ತದ ಹುಲ್ಲಿನಿಂದ ಕಟ್ಟಲಾಗಿದ್ದ ಹುಲ್ಲಿನ ತೊಟ್ಟಿಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಿದ ಬಳಿಕ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಬಲಿ ಪೂಜೆಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಬಂದಂತಹ ಯೇಸುವಿನ ಆರಾಧಕರಿಗೆ ಹಾಗೂ ಬಂದ ಜನರಿಗೆ ಕೇಕು ನೀಡಿ ಶುಭಾಶಯವನ್ನು ಚರ್ಚ್ ಪಾಧರ್‌ಗಳು ವಿನಿಮಯ ಮಾಡಿಕೊಂಡರು. ಮೈಸೂರು-ಊಟಿ ರಸ್ತೆಯಲ್ಲಿರುವ ಸೈಂಟ್ ಕುರಿಯಾಸ್ ಏಲಿಯಾಸ್ ಚಾವರ ಚರ್ಚ್‌ನಲ್ಲೂ ಕ್ರಿಸ್‌ಮಸ್ ಅಂಗವಾಗಿ ಮಿನುಗುವ ನಕ್ಷತ್ರಗಳು ನೋಡುಗರ ಗಮನ ಸೆಳೆಯಿತು.ಕ್ರೈಸ್ತ ಸಮುದಾಯದ ಮುಖಂಡರಾದ ಬೈಜು, ಪೌಲು, ಜಾಯ್, ಜಾನಿ, ಜ್ಯೋಶಿ, ಸಿಎಂಸಿ ಹಾಗೂ ನಿರ್ಮಲ ಕಾನ್ವೆಂಟ್ ಕನ್ಯಶ್ರೀಗಳು ಸೇರಿದಂತೆ ಫಾದರ್‌ಗಳು ತಮ್ಮೆಲ್ಲ ಸ್ನೇಹಿತರು ಹಾಗೂ ಬಂಧುಗಳಿಗೆ ಕೇಕು ಹಂಚಿದರು. ಕ್ರಿಸ್‌ಮಸ್ ಹಬ್ಬ ಸಡಗರ ಪಟ್ಟಣದ ಚರ್ಚ್‌ಗಳಲ್ಲಿ ಕಂಡು ಬಂತು.
;Resize=(128,128))
;Resize=(128,128))