ಮೆರವಣಿಗೆಯಲ್ಲಿ ಕ್ರೈಸ್ತ ಸಮುದಾಯದ ನೂರಾರು ಭಕ್ತರು ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಯೇಸು ಕ್ರಿಸ್ತನ ಜನನದ ಸಂದೇಶ ಸಾರುವ ಫಲಕಗಳು, ಕ್ರಿಸ್‌ಮಸ್ ಗೀತೆಗಳು ಹಾಗೂ ಕ್ರಿಸ್‌ಮಸ್ ತಾತ ಮತ್ತು ಪುಟಾಣಿ ಮಕ್ಕಳು ಸಂಭ್ರಮದ ಘೋಷಣೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಪ್ರತಿಧ್ವನಿಸಿತು. ಹಬ್ಬದ ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳು ಹಾಗೂ ಯುವಕರು ಮಹಿಳೆಯರು ಮೆರವಣಿಗೆಗೆ ವಿಶೇಷ ಆಕರ್ಷಣೆಯಾದರು.
ಬೇಲೂರು: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬೇಲೂರು ನಗರದಲ್ಲಿ ಕ್ರೈಸ್ತ ಬಾಂಧವರಿಂದ ಭವ್ಯವಾದ ಕ್ರಿಸ್‌ಮಸ್ ಮೆರವಣಿಗೆ ನಡೆಸಲಾಯಿತು.
ನಗರದ ಜೂನಿಯರ್ ಕಾಲೇಜ್ ಮೈದಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಕ್ರೈಸ್ತ ಸಮುದಾಯದ ನೂರಾರು ಭಕ್ತರು ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಯೇಸು ಕ್ರಿಸ್ತನ ಜನನದ ಸಂದೇಶ ಸಾರುವ ಫಲಕಗಳು, ಕ್ರಿಸ್‌ಮಸ್ ಗೀತೆಗಳು ಹಾಗೂ ಕ್ರಿಸ್‌ಮಸ್ ತಾತ ಮತ್ತು ಪುಟಾಣಿ ಮಕ್ಕಳು ಸಂಭ್ರಮದ ಘೋಷಣೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಪ್ರತಿಧ್ವನಿಸಿತು. ಹಬ್ಬದ ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳು ಹಾಗೂ ಯುವಕರು ಮಹಿಳೆಯರು ಮೆರವಣಿಗೆಗೆ ವಿಶೇಷ ಆಕರ್ಷಣೆಯಾದರು.ಈ ಸಂದರ್ಭದಲ್ಲಿ ಮಾತನಾಡಿದ ಕ್ರೈಸ್ತ ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ಸುರೇಶ್ ಬಾಂಡ್ ಅವರು, ತಾಲೂಕಿನ ಸಮಗ್ರ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಮುಖಂಡರು, ಧಾರ್ಮಿಕ ಗುರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಮೆರವಣಿಗೆಯು ಶಾಂತಿ ಮತ್ತು ಶಿಸ್ತುಬದ್ಧವಾಗಿ ಸಂಪನ್ನಗೊಂಡಿತು.