ಸಾಹಿತ್ಯ ಲೋಕಕ್ಕೆ ಚುಟುಕು ಸಾಹಿತ್ಯದ ಕೊಡುಗೆ ದೊಡ್ಡದು: ಕನ್ನಡ ಸಾಹಿತ್ಯ ಪರಿಷತ್‌ನ ಬಿ.ವಾಮದೇವಪ್ಪ

| Published : Jan 24 2025, 12:48 AM IST

ಸಾಹಿತ್ಯ ಲೋಕಕ್ಕೆ ಚುಟುಕು ಸಾಹಿತ್ಯದ ಕೊಡುಗೆ ದೊಡ್ಡದು: ಕನ್ನಡ ಸಾಹಿತ್ಯ ಪರಿಷತ್‌ನ ಬಿ.ವಾಮದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಂಕ್ರಾಂತಿ ಹಬ್ಬದ ಹೊತ್ತಿಗೆ ರೈತರು ತಾವು ಬೆಳೆದ ಬತ್ತ, ರಾಗಿ, ಕಾಳುಗಳನ್ನು ರಾಶಿ ಮಾಡಿ, ಬೆಳೆ ರಾಶಿ ಹಾಗೂ ಎತ್ತುಗಳಿಗೆ ಪೂಜಿಸಿ, ಸಂಭ್ರಮಿಸುವ ಹಬ್ಬವೇ ಈಚೆಗೆ ಸಂಕ್ರಾಂತಿಯಾಗಿ ಆಚರಿಸಲ್ಪಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.

ಕವಿಗೋಷ್ಠಿ । ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ವಿಶ್ವಾಸ: ನಾಗರಾಜ್‌ । ವೇಷಭೂಷಣ ಸ್ಪರ್ಧೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಮೀಣರಿಂದ ಸುಗ್ಗಿ ಹಬ್ಬವೆಂದೇ ಕರೆಯಲ್ಪಡುತ್ತಾ ಬಂದಿದ್ದ ಸಂಕ್ರಾಂತಿ ಹಬ್ಬದ ಹೊತ್ತಿಗೆ ರೈತರು ತಾವು ಬೆಳೆದ ಬತ್ತ, ರಾಗಿ, ಕಾಳುಗಳನ್ನು ರಾಶಿ ಮಾಡಿ, ಬೆಳೆ ರಾಶಿ ಹಾಗೂ ಎತ್ತುಗಳಿಗೆ ಪೂಜಿಸಿ, ಸಂಭ್ರಮಿಸುವ ಹಬ್ಬವೇ ಈಚೆಗೆ ಸಂಕ್ರಾಂತಿಯಾಗಿ ಆಚರಿಸಲ್ಪಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.

ನಗರದ ಕೊಂಡಜ್ಜಿ ರಸ್ತೆಯ ಆವರಗೊಳ್ಳ ಸಮೀಪದ ಕೇಂದ್ರೀಯ ವಿದ್ಯಾಲಯ ಪಕ್ಕದ ಬಿ.ಎಸ್.ಚನ್ನಬಸಪ್ಪ ತೋಟದಲ್ಲಿ ಇತ್ತೀಚೆಗೆ ಚುಟುಕು ಸಾಹಿತ್ಯ ಪರಿಷತ್, ಸ್ಪೂರ್ತಿ ಪ್ರಕಾಶನ, ಕರ್ನಾಟಕ ಲೇಖಕಿಯರ ಸಂಘದಿಂದ ಹಮ್ಮಿಕೊಂಡಿದ್ದ ಹಳ್ಳಿ ಸೊಗಡಿನ ತೋಟದ ಮಡಿಲೊಳಗೆ ಕವಿಗೋಷ್ಠಿ, ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಶು‍ಭ ಪರ್ವ ಕಾಲವನ್ನು ನಾವು ಮಕರ ಸಂಕ್ರಮಣ ಎನ್ನುತ್ತೇವೆ ಎಂದರು.

ಕಸಾಪ ಅಂಗ ಸಂಸ್ಥೆಯೇ ಆದ ಚುಟುಕು ಸಾಹಿತ್ಯ ಪರಿಷತ್ ಕವಿಗೋಷ್ಠಿ, ಕವನ ಸಂಕಲನ ಬಿಡುಗಡೆ, ಬಹುಭಾಷಾ ಕವಿಗೋಷ್ಠಿ ಸೇರಿದಂತೆ ಹತ್ತು ಹಲವಾರು ಕಲೆ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಇಂದು ವಿಶಾಲ ತೋಟದಲ್ಲಿ ಸಂಕ್ರಮಣದ ಅಂಗವಾಗಿ ಹಳ್ಳಿ ಸೊಗಡಿನ ತೋಟದ ಮಡಿಲೊಳಗೆ ಕವಿಗೋಷ್ಟಿ, ವೇಷಭೂಷಣ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ವಿಷಯಗಳು ವಿಭಿನ್ನವಾಗಿದ್ದರೂ ಚುಟುಕು ಸಾಹಿತ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ ಸದಾ ಸಹಕಾರಿಯಾಗಿರುತ್ತದೆ. ದೊಡ್ಡ ಸಾಲುಗಳಲ್ಲಿ ಹೇಳಲಸಾಧ್ಯವಾದ ವಿಚಾರಗಳನ್ನು ಚುಟುಕು ಚುಟುಕಾಗಿ ಹೇಳುವ ಮೂಲಕ ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ತಿಳಿಸುವಂತಹ ಶಕ್ತಿಯೂ ಚುಟುಕು ಸಾಹಿತ್ಯಕ್ಕೆ ಇದೆ ಎಂದು ತಿಳಿಸಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಹಿರಿಯ ವರದಿಗಾರ ನಾಗರಾಜ ಎಸ್.ಬಡದಾಳ್ ಮಾತನಾಡಿ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ದಾವಣಗೆರೆಯಲ್ಲೇ ಶೀಘ್ರವೇ ನಡೆಸುವ ಬಗ್ಗೆ ಈ ಬಜೆಟ್‌ನಲ್ಲೇ ಘೋಷಣೆಯಾಗುವ ವಿಶ್ವಾಸವಿದೆ. ವಿಶ್ವ ಕನ್ನಡ ಸಮ್ಮೇಳನ ನಡೆಯುವ ವಿಷಯದಲ್ಲಿ ನಮ್ಮ ಜಿಲ್ಲಾ ವರದಿಗಾರರ ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸದಾ ನಿಮ್ಮೊಂದಿಗೆ ಇರುತ್ತವೆ. ಕನ್ನಡ ನಾಡು, ನುಡಿ, ಜನ, ನಗರ, ಜಿಲ್ಲೆಯ ವಿಚಾರದಲ್ಲಿ ನಾವೆಲ್ಲರೂ ನಿಮ್ಮೊಂದಿಗೆ ಸದಾ ಇರುತ್ತೇವೆ ಎಂದರು.

ಗದಗಿನ ವೇದಮೂರ್ತಿ ಮಂಜುನಾಥ ಶಾಸ್ತ್ರಿ, ಹಿರಿಯ ಸಾಹಿತಿ ಓಂಕಾರಯ್ಯ ಎಸ್.ತವನಿಧಿ ಮಾತನಾಡಿದರು.

ಚುಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಬಲಾ ವಾದಕ ವೇ.ವೀರಯ್ಯ ಹಿರೇಮಠ, ಸಂಗೀತ ಕಲಾವಿದ ವೇ. ಹುಚ್ಚಯ್ಯ ಗವಾಯಿ, ಕವಿಗಳಾದ ಎಂ.ಬಸವರಾಜ, ತೆಲಗಿ ವೀರಭದ್ರಪ್ಪ, ಶಿವಯೋಗಿ ಹಿರೇಮಠ, ರಾಜೇಂದ್ರ ಪ್ರಸಾದ ನೀಲಗುಂದ, ಮಲ್ಲಮ್ಮ, ಅಣಬೇರು ತಾರೇಶ, ಬಿಎಂಜಿ ವೀರೇಶ, ಪಕ್ಕೀರೇಶ ಆದಾಪುರ, ಸುನಿತಾ ಪ್ರಕಾಶ, ಡಾ.ಸಿಂದಗಿ, ಓಂಕಾರಯ್ಯ ತವನಿಧಿ, ಸಂಧ್ಯಾ, ಚನ್ನಬಸವ ಶೀಲವಂತ್, ಇತರರು ಇದ್ದರು. ನಂತರದಲ್ಲಿ ಕವಿಗೋಷ್ಠಿ ನಡೆಯಿತು. ಕ್ಯಾಪ್ಷನ22ಕೆಡಿವಿಜಿ31 ದಾವಣಗೆರೆಯಲ್ಲಿ ಚುಟುಕು ಸಾಹಿತ್ಯ ಪರಿಷತ್‌ನಿಂದ ನಡೆದ ಕವಿಗೋಷ್ಠಿ, ವೇಷಭೂಷಣ ಸ್ಪರ್ಧೆಯನ್ನು ಬಿ.ವಾಮದೇವಪ್ಪ ಉದ್ಘಾಟಿಸಿದರು.