ಪೌರಕಾರ್ಮಿಕರಿಲ್ಲದೆ ನಗರ, ಪಟ್ಟಣಗಳು ಸುಂದರವಾಗಿರಲು ಸಾಧ್ಯವಿಲ್ಲ: ಬಲವಂತಗೌಡ ಪಾಟೀಲ

| Published : May 24 2024, 12:50 AM IST

ಪೌರಕಾರ್ಮಿಕರಿಲ್ಲದೆ ನಗರ, ಪಟ್ಟಣಗಳು ಸುಂದರವಾಗಿರಲು ಸಾಧ್ಯವಿಲ್ಲ: ಬಲವಂತಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಶರಣ ಮಾದರ ಚನ್ನಯ್ಯ ಸಮುದಾಯ ಭವನದಲ್ಲಿ ಪೌರ ಕಾರ್ಮಿಕರು, ಪುರಸಭೆ ಅಧಿಕಾರಿಗಳು, ರಾಜಕೀಯ ಹಿತೈಷಿಗಳು ಮತ್ತು ಸಿಬ್ಬಂದಿ ಜೊತೆ ರಾಜೇಶ ಭಾವಿಕಟ್ಟಿ ಅವರ 46ನೇ ಹಾಗೂ ಪುರಸಭೆಯ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ ಅವರ 36ನೆಯ ಹುಟ್ಟುಹಬ್ಬ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಲಿಂಗಪುರತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಪ್ರತಿಯೊಬ್ಬರ ಆರೋಗ್ಯ ಕಾಳಜಿ ಮಾಡುವವರು ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು ಮಾತ್ರ. ಅವರು ನಮ್ಮ ಪರಿವಾರದ ಸದಸ್ಯರಿದ್ದಂತೆ. ಅವರ ಜೊತೆಯಲ್ಲಿ ನಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಪುರಸಭೆಯ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ ಹೇಳಿದರು.

ಗುರುವಾರ ಶಿವಶರಣ ಮಾದರ ಚನ್ನಯ್ಯ ಸಮುದಾಯ ಭವನದಲ್ಲಿ ಪೌರ ಕಾರ್ಮಿಕರು, ಪುರಸಭೆ ಅಧಿಕಾರಿಗಳು, ರಾಜಕೀಯ ಹಿತೈಷಿಗಳು ಮತ್ತು ಸಿಬ್ಬಂದಿ ಜೊತೆ ರಾಜೇಶ ಭಾವಿಕಟ್ಟಿ 46 ಮತ್ತು ತಮ್ಮ 36ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾತನಾಡಿದ ಅವರು, ಪೌರಕಾರ್ಮಿಕರು ವೇತನ ಪಡೆಯುತ್ತಿರಬಹುದು. ಆದರೆ ಅವರು ಪ್ರತಿ ದಿನ ದುರ್ಗಮ ಮತ್ತು ದುರ್ಗಂಧ ವಾತಾವರಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಂತಹದ್ದರಲ್ಲಿ ಅವರ ಆರೋಗ್ಯ ಅಪಾಯದಲ್ಲಿ ಸಿಲುಕುವ ಭಯವಿರುತ್ತದೆ. ಅಲ್ಲದೆ, ಅನೇಕ ಕಡೆಗಳಲ್ಲಿ ಪೌರ ಕಾರ್ಮಿಕರು ಪ್ರಾಣ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಸಾರ್ವಜನಿಕರಿಗೆ ಮುಡಿಪಾಗಿಟ್ಟ ಇವರ ತ್ಯಾಗವನ್ನು ಎಷ್ಟು ಹೊಗಳಿದರೂ ಕಡಿಮೆಯೇ ಎಂದರು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಾದಿಯಾಗಿ ಪುರಸಭೆಯ ಎಲ್ಲರೂ ಸೇರಿ ರಾಜೇಶ ಭಾವಿಕಟ್ಟಿ ಮತ್ತು ಬಲವಂತಗೌಡ ಪಾಟೀಲಗೆ ಗೌರವ ಸನ್ಮಾನ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಸೇರಿದವರೆಲ್ಲ ಪ್ರಭು ಮಲಾಬಾದಿ ಅವರ ವ್ಯವಸ್ಥೆಯ ಭೋಜನ ಸವಿದು, ಹುಟ್ಟುಹಬ್ಬ ಆಚರಿಸಿಕೊಂಡ ಮಹನೀಯರಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಲೆಕ್ಕಪರಿಶೋಧಕ ಕುಲಕರ್ಣಿ ಮತ್ತು ರವಿ ಹಲಸಪ್ಪಗೋಳ ಮಾತನಾಡಿದರು. ಮುಖಂಡರಾದ ಅರ್ಜುನ ದೊಡಮನಿ, ವಿಠಲ ಕುಳಲಿ, ಲಕ್ಷ್ಮಣ ಮಾಂಗ, ಶಂಕರಗೌಡ ಪಾಟೀಲ, ಈಶ್ವರ ಚಮಕೇರಿ, ರಾಮಣ್ಣ ಹಟ್ಟಿ, ಮಹಾಲಿಂಗಪ್ಪ ಮಾಳಿ, ಶಿವು ಕಡಬಲ್ಲವರ, ಪ್ರಭು ಮಲಾಬಾದಿ, ಈರಣ್ಣ ಸೊನ್ನದ, ಶಂಕರ ಸೊನ್ನದ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮತ್ತು ರಾಜು ಹೂಗಾರ, ಎಂ.ಎಸ್. ಮುಗಳಖೋಡ, ಸಿಬ್ಬಂದಿ ಸಿಪಾಯಿ ರಾಮು, ಮಹಾಲಿಂಗ ಮಾಂಗ, ರಂಗಾ ಹಲಸಪ್ಪಗೋಳ, ಲಖನ ದೊಡಮನಿ, ಚಂದ್ರವ್ವ ಮಾವಿನಹಿಂಡಿ, ಯಲ್ಲವ್ವ ಮಾಂಗ ಮುಂತಾದವರಿದ್ದರು.