ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ನಿರ್ಮಾಣವಾಗಿರುವ ಸರ್ಕಾರವೇ ಪ್ರಜಾಸರ್ಕಾರ

ಕುಕನೂರು: ಸಂವಿಧಾನದಿಂದ ಭಾರತದ ಪ್ರಜೆಗಳಿಗೆ ಸಮಾನ ಅವಕಾಶ ದೊರಕಿದೆ ಎಂದು ತಾಪಂ ಇಒ ಸಂತೋಷ ಬಿರಾದಾರ ಪಾಟೀಲ ಹೇಳಿದರು.

ಪಟ್ಟಣದ ತಾಪಂನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ನಿರ್ಮಾಣವಾಗಿರುವ ಸರ್ಕಾರವೇ ಪ್ರಜಾಸರ್ಕಾರ.ಅಂತಹ ಅವಕಾಶ ಭಾರತದ ಸಂವಿಧಾನ ನೀಡಿದೆ. ದೇಶ1947. ಅ.15ರಂದು ಸ್ವತಂತ್ರಗೊಂಡಿತು, ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ದೇಶದ ಅಖಂಡತೆಗೆ ಒಪ್ಪುವಂತೆ ಸಂವಿಧಾನವು ರೂಪಗೊಂಡು 1950 ಜ. 26 ರಂದು ಜಾರಿಗೊಂಡಿತು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಕಾರ್ಯಾಂಗ,ಶಾಸಕಾಂಗ, ನ್ಯಾಯಾಂಗ ಸೃಷ್ಠಿಯಾದವು. ಕಾರ್ಯಾಂಗ ವ್ಯವಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯೂ ಸಹ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ಯೋಜನೆಗಳ ಮೂಲಕ ಗ್ರಾಮೀಣಾಭಿವೃದ್ಧಿ ನನಸಾಗುತ್ತಿದೆ. ಅಲ್ಲದೆ ನಮ್ಮ ಸಂವಿಧಾನವು ದೇಶದ ಸಾಮಾನ್ಯ ಪ್ರಜೆಯೂ ಸರ್ಕಾರಿ ನೌಕರ, ಜನ ನಾಯಕ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗುವಂತೆ ಮಾಡಿದೆ. ಇಂದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಜಾತಿಯತೆ ಮಹಿಳಾ ದೌರ್ಜನ್ಯ, ಅಸಮಾನತೆ ತೊಡೆದು ಹಾಕಬೇಕು ಎಂದರು.

ತಾಲೂಕು ಯೋಜನಾಧಿಕಾರಿ ಆನಂದ ಗರೂರ, ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಸದ್ದಾಂ ಹುಸೇನ್, ಗಿರಿಧರ್ ಜ್ಯೋಷಿ, ಸರಿತಾ ರಾಠೋಡ, ಹನಮಂತಪ್ಪ ನಾಯಕ,ಯಲ್ಲಪ್ಪ ನಿಡಶೇಸಿ, ಲಕ್ಷ್ಮಣ ಕೆರಳ್ಳಿ, ರಾಜಾಭಕ್ಷಿ ಕಲಬಂಡಿ, ಮಹಾದೇವಯ್ಯ, ಸುಧಾ, ಚಂದ್ರು ಸಂಗಟಿ, ಶಿಲ್ಪಾ ಅರಳಿ, ಸುಹೇಲ್ ಪಾಷಾ, ರವಿಕುಮಾರ ಇತರರಿದ್ದರು.