ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರದ ನಾಲ್ಕು ಹೊಸ ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಬೆಂಬಲಿಸಿ ಸಿಐಟಿಯು ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಜೆಸಿಟಿಯು ಸಂಯುಕ್ತ ಹೋರಾಟ ಸಂಚಲನ ಸಮಿತಿ, ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಗನವಾಡಿ, ಜೀವ ವಿಮೆ, ಪವರ್ ಸೆಲ್, ಅಕ್ಷರ ದಾಸೋಹ, ಬೀದಿ ಬದಿ ವ್ಯಾಪಾರಿಗಳ ಸಂಘ, ಕಟ್ಟಡ ಕಾರ್ಮಿಕರು, ನರೇಗಾ ನೌಕರರು, ಜನವಾದಿ ಮಹಿಳಾ ಸಂಘಟನೆ, ಪ್ರಾಂತ್ಯರೈತ ಸಂಘ ಮತ್ತು ದಲಿತ ಹಕ್ಕು ಸಮಿತಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ತಾಲೂಕು ಕಚೇರಿ ಮೆರವಣಿಗೆ ನಡೆಸಿದ ಕಾರ್ಮಿಕರು ಕೇಂದ್ರ ಸರ್ಕಾರದ ನಾಲ್ಕು ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂದಕ್ಕೆಪಡೆಯುವಂತೆ ಒತ್ತಾಯಿಸಿದರು.
ನಂತರ ತಾಲೂಕು ಕಚೇರಿಯ ಸಮೀಪದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸಿ. ಪ್ರದೀಪ, ಶೋಭಾ, ಸುನಂದ, ವಿಶ್ವನಾಥ್, ಭಾನುಪ್ರಕಾಶ್, ಕೆಂಪರಾಜು, ನೇತ್ರಾವತಿ, ಜಯಲಕ್ಷ್ಮಿ, ಸುಜಾತ, ಪ್ರಣಿತ, ಮಹಾಂತೇಶ್, ಸುನಂದಾ ,ರತ್ನಮ್ಮ, ಮಕ್ಬುಲ್ ಪಾಶ, ಮತ್ತಿತರರು ಭಾಗವಹಿಸಿದ್ದರು.ಫೆ.14 ರಿಂದ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಕನ್ನಡಪ್ರಭ ವಾರ್ತೆ ಹಲಗೂರು
ಇಲ್ಲಿಗೆ ಸಮೀಪದ ಬಾಣಸಮುದ್ರ ಗ್ರಾಮದ ಶ್ರೀಬಸವೇಶ್ವರ ಕ್ರೀಡಾ ಯುವಕರ ಸಂಘದಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ‘ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ’ಯನ್ನು ಆಯೋಜಿಸಲಾಗಿದೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿರುವ 20ನೇ ವರ್ಷದ ‘ನಾಡ ಪ್ರಭು ಕೆಂಪೇಗೌಡ ಟ್ರೋಫಿ-2026’ ಅನ್ನು ಫೆ.14 ರಿಂದ ಫೆ.16ರವರೆಗೆ ಬಾಣಸಮುದ್ರ ಗ್ರಾಮದ ಹೊರವಲಯದಲ್ಲಿರುವ ‘ನಿಸರ್ಗ ಗ್ರಾಮೀಣ ಪರಿಸರ ದೊಡ್ಡಮಾಯಪ್ಪ ಕ್ರೀಡಾಂಗಣ’ದಲ್ಲಿ ಪಂದ್ಯಾವಳಿಗಳು ನಡೆಯಲಿವೆ.
ಪಂದ್ಯಾವಳಿಯಲ್ಲಿ ಬಹುಮಾನ ಗೆಲ್ಲುವ ತಂಡಗಳಿಗೆ ಪ್ರಥಮ ಬಹುಮಾನ 50 ಸಾವಿರ ರು., ದ್ವಿತೀಯ ಬಹುಮಾನ 30 ಸಾವಿರ ರು., ತೃತೀಯ ಬಹುಮಾನ 15 ಸಾವಿರ ರು. ನಗದು ಬಹುಮಾನ ಮತ್ತು ಅಕರ್ಷಕ ಟ್ರೋಫಿ ಘೋಷಿಸಲಾಗಿದೆ.ಆಸಕ್ತ ಕ್ರಿಕೆಟ್ ತಂಡಗಳು ಪಂದ್ಯಾವಳಿ ಅಯೋಜಕರಾದ ಸ್ವಾಮಿ 8971068559, ಬಸವರಾಜು 9902118890 ಮತ್ತು ಬಿ.ಸಿ.ಶಿವಣ್ಣ 9902879801ಮತ್ತು ಗೌರಿಶಂಕರ 8105943179 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.