ಸಾರಾಂಶ
ರಾಮನಗರ: ಅಗ್ರಹಾರ ಮುಖ್ಯರಸ್ತೆಯ 147 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಸಿಮೆಂಟ್ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲ ಕೇಬಲ್ ಗಳನ್ನು ಈ ಪೈಪುಗಳ ಮೂಲಕವೇ ಅಳವಡಿಸಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು
ರಾಮನಗರ: ಅಗ್ರಹಾರ ಮುಖ್ಯರಸ್ತೆಯ 147 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಸಿಮೆಂಟ್ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲ ಕೇಬಲ್ ಗಳನ್ನು ಈ ಪೈಪುಗಳ ಮೂಲಕವೇ ಅಳವಡಿಸಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರದ 7ನೇ ವಾರ್ಡ್ ನ ಅಗ್ರಹಾರ ಮುಖ್ಯರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಿಂದ ನಗರ ವ್ಯಾಪ್ತಿಯಲ್ಲಿ 47 ಕೋಟಿ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಗರದಾದ್ಯಂತ ಪ್ರಗತಿಯಲ್ಲಿದೆ ಎಂದರು.1-25ನೇ ವಾರ್ಡುಗಳಲ್ಲಿ ಈ ನಿಧಿಯ ಅನುದಾನದಲ್ಲಿ ಪ್ಯಾಕೇಜ್ ರೀತಿಯಲ್ಲಿ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 15 ಕೋಟಿ ರು.ವೆಚ್ಚದಲ್ಲಿ ಸೀರಹಳ್ಳ ಅಭಿವೃದ್ಧಿ ಪ್ರತ್ಯೇಕ ಪ್ಯಾಕೇಜ್ ನಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ನೆಟ್ಕಲ್ ಕುಡಿಯುವ ನೀರಿನ ಯೋಜನೆಯಡಿ ಆರಂಭವಾಗಿರುವ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳ ಬಗ್ಗೆ ನಾಗರಿಕರು ದೂರಿದ್ದಾರೆ. ಇವುಗಳ ಪರಿಶೀಲನೆಗೆ ನಗರಸಭಾ ಸದಸ್ಯರ ಸಮಿತಿ ರಚಿಸಿ ಪರಿಶೀಲಿಸುತ್ತಿದೆ. ಈ ಸಮಿತಿ ಈಗಾಗಲೇ 13 ವಾರ್ಡುಗಳಲ್ಲಿ ಮಾಹಿತಿ ಸಂಗ್ರಹಿಸಿದೆ. ಹೀಗೆ ಸಂಗ್ರಹಿಸಿರುವ ಮಾಹಿತಿಯನ್ನು ಜಲಮಂಡಳಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು. ಬಳಿಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಗರಸಭಾ ವ್ಯಾಪ್ತಿಯನ್ನು ಜಲಮಂಡಳಿ 38 ವಲಯಗಳನ್ನಾಗಿ ವಿಂಗಡಿಸಿಕೊಂಡಿದೆ. ಸಮಸ್ಯೆಗಳಿಗೆ ಜಲಮಂಡಳಿ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದರು.ಈ ವೇಳೆ ನಗರಸಭಾ ಸದಸ್ಯರಾದ ಸೋಮಶೇಖರ್(ಮಣಿ), ಮಹಾಲಕ್ಷ್ಮೀ, ನಗರಸಭೆ ಮತ್ತು ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.
18ಕೆಆರ್ ಎಂಎನ್ 3,4.ಜೆಪಿಜಿರಾಮನಗರದ 7ನೇ ವಾರ್ಡ್ ಅಗ್ರಹಾರ ಮುಖ್ಯರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿಪೂಜೆ ನೆರವೇರಿಸಿದರು.