ತರೀಕೆರೆ ಪುರಸಭೆಯಿಂದ 2026-27ನೇ ಸಾಲಿನ ಆಯವ್ಯಯ ಮಂಡನೆ । ₹5,16,849,00 ರು.ಗಳ ಉಳಿತಾಯ ಬಜೆಟ್ ಮಂಡನೆ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದಲ್ಲಿ ಪುರಸಭೆಯಿಂದ ವಿವಿಧ ವಾರ್ಡ್ ಗಳಲ್ಲಿ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿ ಕುರಿತು ವರದಿ ನೀಡಬೇಕು ಮತ್ತು ನಗರೋತ್ಥಾನ ಕಾಮಗಾರಿ ಅಪೂರ್ಣಗೊಳಿಸಿದವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಸೂಚಿಸಿದರು.ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ 2026-27ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅವರನ್ನು ತರೀಕೆರೆಗೆ ಆಹ್ವಾನಿಸಿ ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿ ಕಾಮಗಾರಿ, ಪುರಸಭೆ ನೂತನ ಕಟ್ಟಡ ಶಂಕುಸ್ಥಾಪನೆ, ತಾಯಿ ಮಗು ಆಸ್ಪತ್ರೆ ನೂತನ ಕಟ್ಟಡ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಾಗುವುದು ಎಂದರು.ಸದಸ್ಯ ಟಿ.ಎಂ,.ಬೋಜರಾಜ್ ಮಾತನಾಡಿ ಪಟ್ಟಣದಲ್ಲಿ ನಗರೋತ್ಥಾನ ಕಾಮಗಾರಿ ಅಪೂರ್ಣಗೊಂಡಿದ್ದು ಈಗಾಗಲೇ ಮುಗಿದ ಕಾಮಗಾರಿಗಳೂ ಗುಣಮಟ್ಟದಿಂದ ಕೂಡಿಲ್ಲ, ಉದ್ಯಾನವನಕ್ಕೆಮೀಸಲಿಟ್ಟ ಆಟೋಪಕರಣ ಬಳಕೆಯಾಗಿಲ್ಲ, ಕೊಳಚೆ ಅಭಿವೃದ್ಧಿ ಮಂಡಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗಳು ಪೂರ್ಣಗೊಳ್ಳದೆ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ 3 ವರ್ಷಗಳಿಂದ ಬೀದಿ ದೀಪಗಳ ವ್ಯವಸ್ಥೆ ಸರಿ ಇಲ್ಲ ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸದಸ್ಯ ಟಿ.ದಾದಾಪೀರ್ ಮಾತನಾಡಿ 15ನೇ ಹಣಕಾಸಿನ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನ ಖರ್ಚಾಗಿಲ್ಲ, ಅಭಿವೃದ್ಧಿ ವಿಚಾರದಲ್ಲಿ ತರೀಕೆರೆ ಪಟ್ಚಣ ಶೂನ್ಯವಾಗಿದೆ. ಪೂರ್ಣಾವಧಿ ಎಂಜಿನಿಯರ್ ಇಲ್ಲದೆ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಅನುದಾನ ಇದ್ದರೂ ಪುರಸಭೆ ಕೆಲಸ ಮಾಡಲು ಆಗಿಲ್ಲ. ಆಯವ್ಯಯ ಪೂರ್ವಬಾವಿ ಸಭೆಯಲ್ಲಿ ಜನಪರವಾಗಿ ನೀಡಿದ ಸಲಹೆ ಕಾರ್ಯಗತವಾಗಿಲ್ಲ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಪುರಸಭೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಮತ್ತು ಚುನಾಯಿತ ಪ್ರತಿನಿಧಿಗಳ ಸಲಹೆ, ಅಭಿಪ್ರಾಯ ಪಡೆದು ಹಲವಾರು ಕಾರ್ಯಕ್ರಮ ರೂಪಿಸುವ ಮೂಲಕ ಶಾಸಕರು, ಸಂಸದರ ಸಹಕಾರದಿಂದ ಪಟ್ಟಣದ ಅಭಿವೃದ್ಧಿಗೆ ಒತ್ತು ಕೊಟ್ಟು, 2026-27ನೇ ಸಾಲಿನ ಉಳಿತಾಯ ಬಜೆಟ್ ಮಂಡಿಸಲು ಸಂತೋಷವಾಗುತ್ತದೆ ಎಂದರು.ಸದಸ್ಯರಾದ ಕುಮಾರಪ್ಪ, ದಿವ್ಯ, ಪರಮೇಶ್, ಉಪಾಧ್ಯಕ್ಷೆ ಟಿ.ಆರ್.ಗೀತಾ, ಪುರಸಭೆ ಪರಿಸರ ಅಭಿಯಂತರಾದ ತಾಹಿರಾ ತಸ್ನೀಮ್, ಸಮುದಾಯ ಸಂಘಟನಾ ಅಧಿಕಾರಿ ಪ್ರಸನ್ನಕುಮಾರ್ ಪುರಸಭೆ ಸದಸ್ಯರು, ನಾಮಿನಿ ಸದಸ್ಯರು ಭಾಗವಹಿಸಿದ್ದರು.----------------
-- ಕೋಟ್--
ವಿಶ್ವಪ್ರಸಿದ್ಧ ಮಿಯಾವಾಕಿ ಪದ್ಧತಿಯಲ್ಲಿ ಪಟ್ಟಣದಲ್ಲಿ ಪಾರ್ಕ್.ಗಳನ್ನು ಆಯ್ಕೆ ಮಾಡಿ ಕಿರು ಅರಣ್ಯ ಬೆಳೆಸುವ ಮೂಲಕ ಪ್ರಾಕೃತಿಕ ಸಮತೋಲನ ಕಾಪಾಡಬೇಕು.
ಟಿ.ದಾದಾಪೀರ್ ಪುರಸಭೆ ಸದಸ್ಯ-- ಕೋಟ್--ಪಟ್ಟಣದಲ್ಲಿ ನಾಯಿಗಳ ಕಾಟ ವಿಪರೀತವಾಗಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಹಿಂಡು ಹಿಂಡಾಗಿ ನಾಯಿಗಳುಸಂಚರಿ ಸುತ್ತಿದ್ದು ಇದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು
ಸದಸ್ಯ ಟಿ.ಜೆ.ಲೋಕೇಶ್27ಕೆಟಿಆರ್.ಕೆ.15ಃತರೀಕೆರೆ ಪುರಸಭೆಯಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಮಂಡನೆ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಉಪಾಧ್ಯಕ್ಷೆ ಟಿ.ಆರ್.ಗೀತಾ, ಮುಖ್ಯಾಧಿಕಾರಿ ಮಂಜುನಾಥ್ ಸಿ.ಎಸ್. ಇದ್ದರು.