ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ವೈದ್ಯರಿಗಿಂತ ಕಡಿಮೆ ಏನಿಲ್ಲ. ಕಷ್ಟದ ಪರಿಸ್ಥಿತಿಯಲ್ಲೂ ನಿಸ್ವಾರ್ಥವಾಗಿ ಕೆಲಸ ಮಾಡುವ ಇವರಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಮತ್ತು ಸಾಮಾಜಿಕ ಭದ್ರತೆ ಇನ್ನಷ್ಟು ಹೆಚ್ಚಾಗಬೇಕು. ಯಾರು ಏನೇ ಅಂದರೂ, ಪೌರಕಾರ್ಮಿಕರು ನಮ್ಮ ನಗರದ ನಿಜವಾದ ಬೆನ್ನೆಲುಬು " ಎಂದು ಶಾಸಕರು ಬಣ್ಣಿಸಿದರು.ಇದೇ ವೇಳೆ, ಪೌರಕಾರ್ಮಿಕರ ಆರೋಗ್ಯ, ಸೌಲಭ್ಯಗಳು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ತಾವು ಸದಾ ಬದ್ಧರಾಗಿರುವುದಾಗಿ ಶಾಸಕರು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಆಲೂರು

ಸಮಾಜದಲ್ಲಿ ನಾವೆಲ್ಲರೂ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಬದುಕಲು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಪಾತ್ರ ಹಿರಿದಾದದ್ದು. ಮಳೆ, ಚಳಿ, ಬಿಸಿಲು ಎನ್ನದೆ ಪಟ್ಟಣವನ್ನು ಸ್ವಚ್ಛಗೊಳಿಸುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ. ಪೌರಕಾರ್ಮಿಕರು ಕೇವಲ ನೌಕರರಲ್ಲ, ಬದಲಿಗೆ ಸಮಾಜದ ನಿಜವಾದ ನೈರ್ಮಲ್ಯ ರಕ್ಷಕರು " ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ವೈದ್ಯರಿಗಿಂತ ಕಡಿಮೆ ಏನಿಲ್ಲ. ಕಷ್ಟದ ಪರಿಸ್ಥಿತಿಯಲ್ಲೂ ನಿಸ್ವಾರ್ಥವಾಗಿ ಕೆಲಸ ಮಾಡುವ ಇವರಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಮತ್ತು ಸಾಮಾಜಿಕ ಭದ್ರತೆ ಇನ್ನಷ್ಟು ಹೆಚ್ಚಾಗಬೇಕು. ಯಾರು ಏನೇ ಅಂದರೂ, ಪೌರಕಾರ್ಮಿಕರು ನಮ್ಮ ನಗರದ ನಿಜವಾದ ಬೆನ್ನೆಲುಬು " ಎಂದು ಶಾಸಕರು ಬಣ್ಣಿಸಿದರು.ಇದೇ ವೇಳೆ, ಪೌರಕಾರ್ಮಿಕರ ಆರೋಗ್ಯ, ಸೌಲಭ್ಯಗಳು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ತಾವು ಸದಾ ಬದ್ಧರಾಗಿರುವುದಾಗಿ ಶಾಸಕರು ಭರವಸೆ ನೀಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದ ಶಾಸಕರು, ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಕ್ಯಾಂಪ್‌ಗಳನ್ನು ಆಯೋಜಿಸಲಾಗುವುದು ಹಾಗೂ ಅವರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಗತ್ಯವಿರುವ ಸುರಕ್ಷತಾ ಪರಿಕರಗಳನ್ನು ಸ್ವಚ್ಛತೆಯ ಸಮಯಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ಸಲಹೆ ನೀಡಿದರು. ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಮತ್ತು ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ವಿಶೇಷ ಸೌಲಭ್ಯ ಹಾಗೂ ಯೋಜನೆಗಳಿವೆ. ಅರ್ಹರಾದ ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಈ ಸೌಲಭ್ಯಗಳನ್ನು ನೇರವಾಗಿ ತಲುಪುವಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು. ಅಲ್ಲದೆ, ಅವರ ಯಾವುದೇ ಸಮಸ್ಯೆಗಳಿದ್ದರೂ ನಾನು ಇಲಾಖೆಯ ಮೇಲಾಧಿಕಾರಿಯಂಬುದನ್ನು ಬದಿಗೊತ್ತಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು

ಕಾರ್ಯಕ್ರಮದಲ್ಲಿ ಸಾಧನೆಗೈದ ಪೌರಕಾರ್ಮಿಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಲೋಕೇಶ, ಪುರುಷೋತ್ತಮ, ಸುಬ್ಬಮ್ಮ, ನಾಗರತ್ನ, ಸುನಿತಾ, ಲಕ್ಷಣ್, ಪಾಲಾಕ್ಷ, ಶಶಿಕುಮಾರ, ಕೃಷ್ಣೇಗೌಡ, ಮಂಜುನಾಥ್, ಆದರ್ಶ್, ಭರತ್, ಇಂದ್ರೇಶ್, ಸಿದ್ದಗಂಗಮ್ಮ, ಪುಟ್ಟಲಕ್ಷ್ಮಿ,ಮಂಜುಳ, ಶಿವಣ್ಣ, ಶಂಕರ್, ಮನು , ಪ್ರಜ್ವಲ್, ಕಿರಣ್, ಅನುಕುಮಾರ್, ರಾಜಶೇಖರ್, ಷಣ್ಮುಖ, ಪ್ರತಾಪ, ಕಂದಾಯ ಅಧಿಕಾರಿ ಪೃಥ್ವಿ ಉಪಸ್ಥಿತರಿದ್ದರು.