Civic workers flag off women's bike rally.
-ವಿಜಯದಶಮಿ ಪ್ರಯುಕ್ತ ದಾವಣಗೆರೆಯಲ್ಲಿ ವಿಶ್ವ ಹಿಂದು ಪರಿಷತ್ನಿಂದ ಮಹಿಳಾ ಬೈಕ್ ರ್ಯಾಲಿಗೆ ರತ್ನಮ್ಮ, ಅಕ್ಕಮ್ಮ ಚಾಲನೆ
--ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಶ್ವ ಹಿಂದು ಪರಿಷತ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿಜಯದಶಮಿ ಪ್ರಯುಕ್ತ ಬುಧವಾರ ಪಿ.ಜೆ.ಬಡಾವಣೆಯ ಹರಳೆಣ್ಣೆ ಕೊಟ್ರಬಸಪ್ಪ (ರಾಂ ಅಂಡ್ ಕೋ) ವೃತ್ತದಿಂದ ಮಹಿಳೆಯರಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.ಮಹಿಳಾ ಬೈಕ್ ರ್ಯಾಲಿಗೆ ಪೌರ ಕಾರ್ಮಿಕರಾದ ರತ್ನಮ್ಮ, ಅಕ್ಕಮ್ಮ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ, ನಾಡ ಹಬ್ಬ ದಸರಾ ಹಬ್ಬದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ. ನಾಡಹಬ್ಬವನ್ನು ಅತೀ ಉತ್ಸಾಹದಿಂದ ಆಚರಿಸಬೇಕೆಂಬ ಹಿನ್ನಲೆಯಲ್ಲಿ ನಗರದಾದ್ಯಂತ ಮಹಿಳೆಯರಿಂದ ಬೈಕ್ ರ್ಯಾಲಿ ಮಾಡಿ ಜನಜಾಗೃತಿ ಮಾಡುವುದರ ಜೊತೆಗೆ ಹಿಂದು ಧರ್ಮದ ಬಗ್ಗೆ ಕೆಲವು ದುಷ್ಟಶಕ್ತಿಗಳು ಕೀಳರಿಮೆ ತೋರಿಸುತ್ತಿದ್ದಾರೆ ಅದಕ್ಕೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲಾ ಮಹಿಳೆಯರು ಬೈಕ್ ರ್ಯಾಲಿ ಆಯೋಜಿಸಿದ್ದಾರೆ. ಮಹಿಳೆಯರು ಕೇವಲ ಅಡಿಗೆ ಮನೆಗೆ ಸೀಮಿತವಲ್ಲ ಎಂಬ ಭಾವನೆಯನ್ನು ಹೊಡೆದು ಹಾಕಿ ಮಹಿಳೆಯರು ನಾವು ಎಲ್ಲ ರಂಗದಲ್ಲಿಯೂ ಇದ್ದೇವೆ ಎಂಬುದನ್ನು ತೋರಿಸುವ ಉದ್ದೇಶದಿಂದ ಸ್ವತಃ ತಾವೇ ಬೈಕ್ ಚಲಾಯಿಸುವ ಮೂಲಕ ಇಂದು ಹಿಂದೂ ಧರ್ಮ ಜಾಗೃತಿಗೊಳಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.ಸಮಿತಿಯ ಸ್ವಾಗತ ಸಮಿತಿಯ ಸದಸ್ಯೆ ಭಾಗ್ಯ ಪಿಸಾಳೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಮಹಿಳಾ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ. ಪ್ರತಿಯೊಬ್ಬ ಮಹಿಳೆಯರು ಕೇಸರಿ ಪೇಠ ಧರಿಸಿ ಈ ಬೈಕ್ ರ್ಯಾಲಿಯಲ್ಲಿ ಉತ್ಸುಕರಾಗಿ ಭಾಗವಹಿಸಿದ್ದಾರೆ.
ನವರಾತ್ರಿ ಆರಂಭದ ಪಾಡ್ಯ ದಿನದಂದು ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಂದು ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾದೇವಿಯ ಘಟಸ್ಥಾಪನೆ ಮಾಡಲಾಯಿತು.9 ದಿನಗಳ ಕಾಲ ದೇವಿಗೆ ವಿಶೇಷ ಪೂಜೆ, ಲಲಿತಾ ಸಹಸ್ರನಾಮ, ದೇವಿ ಭಜನಾ ಪಠಣ ಕಾರ್ಯಕ್ರಮ ನಡೆಯುತ್ತಿವೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ಸನ್ಮಾನಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಸಮಿತಿಯ ಶೋಭಾ ಕೊಟ್ರೇಶ್ ಮಾತನಾಡಿ, ಕಳೆದ 15 ವರ್ಷಗಳಿಂದ ವಿಜಯದಶಮಿ ಅಂಗವಾಗಿ ಹಿಂದುತ್ವದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹಿಳಾ ಬೈಕ್ ರ್ಯಾಲಿ ಹಮ್ಮಿಕೊಂಡು ಬರುತ್ತಿದ್ದೇವೆ. ಸಮಿತಿಯಿಂದ ಇದೇ ಅ. 16ರಂದು ವಿನೋಬನಗರದ ಗಣಪತಿ ದೇವಸ್ಥಾನದಿಂದ ಬೀರಲಿಂಗೇಶ್ವರ ದೇವಸ್ಥಾನದ ಆವರಣದವರೆಗೆ ಪೂರ್ಣಕುಂಭ ಮೆರವಣಿಗೆ, ಅ. 17ರಂದು ಹೈಸ್ಕೂಲ್ ಮೈದಾನದಿಂದ ಬೃಹತ್ ಆಟೋ ರ್ಯಾಲಿ ಆಯೋಜಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಿತಿಯ ಸಹ ಸಂಚಾಲಕರಾದ ಚೇತನಾ ಶಿವಕುಮಾರ, ಪ್ರಭಾ ವಿನಾಯಕ, ಕಲ್ಯಾಣಮ್ಮ, ನಾಗವೇಣಿ, ಭಾರತಿ, ಗಾಯತ್ರಿ, ಮಧು, ಶಾಂತಾ ದೊರೈ, ಸುಧಾ, ದ್ರಾಕ್ಷಾಯಣಮ್ಮ, ಹಾಗೂ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ್ ಸತೀಶ ಪೂಜಾರಿ, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯ ಹಿರಿಯರಾದ ವಿನಾಯಕ್ ರಾನಡೆ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಶಿವಪ್ರಕಾಶ್, ಶಂಭುಲಿಂಗಯ್ಯ, ಬಾಲಚಂದ್ರ, ಶಿವನಗೌಡ ಟಿ.ಪಾಟೀಲ್, ಮಲ್ಲಿಕಾರ್ಜುನ, ಕಿಶೋರ ಕುಮಾರ, ಟಿಂಕರ್ ಮಂಜಣ್ಣ, ಪದಾಧಿಕಾರಿಗಳು, ಸದಸ್ಯರು ಇದ್ದರು.
ಬೈಕ್ ರ್ಯಾಲಿಯು ಪಿ.ಜೆ.ಬಡಾವಣೆಯ ರಾಂ ಅಂಡ್ ಕೋ ಸರ್ಕಲ್ನಿಂದ ಆರಂಭಗೊಂಡು ಪಿ.ಜೆ.ಬಡಾವಣೆಯ 8ನೇ ಮುಖ್ಯ ರಸ್ತೆ ಮೂಲಕ ಅರುಣ ಸರ್ಕಲ್, ವಿನೋಬನಗರ 2ನೇ ಮುಖ್ಯ ರಸ್ತೆ, ರೆಡ್ಡಿ ಬಿಲ್ಡಿಂಗ್ ಮೂಲಕ ಎಸ್.ನಿಜಲಿಂಗಪ್ಪ ಬಡಾವಣೆಯ ಕರ್ನಲ್ ರವೀಂದ್ರನಾಥ ಸರ್ಕಲ್, ಶಾರದಾಂಭ ದೇವಸ್ಥಾನ, ಲಕ್ಷ್ಮಿ ಫ್ಲೋರ್ ಮಿಲ್, ಬಿಐಇಟಿ ರಸ್ತೆ, ನೂತನ ಕಾಲೇಜು ರಸ್ತೆ, ಕಾಫಿ ಡೇ ಸರ್ಕಲ್, ಗ್ರಾಮಾಂತರ ಪೊಲೀಸ್ ಠಾಣೆ, ಎಚ್ಕೆಆರ್ ಸರ್ಕಲ್, ಶಿವಪ್ಪಯ್ಯ ಸರ್ಕಲ್, ತ್ರಿಶೂಲ್ ಚಿತ್ರಮಂದಿರ ಮುಂಭಾಗದಿಂದ ಪಿ.ಬಿ.ರಸ್ತೆ ಮೂಲಕ ಬೀರಲಿಂಗೇಶ್ವರ ಮೈದಾನ ತಲುಪಿತು.ಪೋಟೊ: 14ಕೆಡಿವಿಜಿ39
ದಾವಣಗೆರೆಯಲ್ಲಿ ವಿಶ್ವ ಹಿಂದು ಪರಿಷತ್ನಿಂದ ವಿಜಯದಶಮಿ ಪ್ರಯುಕ್ತ ಆಯೋಜಿಸಿದ ಮಹಿಳಾ ಬೈಕ್ ರ್ಯಾಲಿಗೆ ಪೌರ ಕಾರ್ಮಿಕರಾದ ರತ್ನಮ್ಮ, ಅಕ್ಕಮ್ಮ ಚಾಲನೆ ನೀಡಿದರು.