ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪೌರಕಾರ್ಮಿಕರು ಸ್ವಚ್ಛತೆ ಮೂಲಕ ಸಮಾಜದ ಆರೋಗ್ಯ ಜೊತೆಗೆ ತಮ್ಮ ಆರೋಗ್ಯಕ್ಕೂ ಗಮನ ನೀಡಬೇಕೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ ನೀಡಿದರು.ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛತೆ ವೇಳೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಆಗಿಂದಾಗ್ಗೆ ಆರೋಗ್ಯ ತಪಾಸಣೆಗೆ ಒಳಗಾಗುವ ಜೊತೆಗೆ ವೃತ್ತಿ ಬಗ್ಗೆ ಗೌರವ ಹೆಚ್ಚಿಸಿಕೊಳ್ಳಬೇಕು ಎಂದರು.
ಪೌರಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ತಮ್ಮ ಮನೆಯನ್ನು ಬೆಳೆಗಿಸಬೇಕು. ಪೌರಕಾರ್ಮಿಕರು ಮಕ್ಕಳನ್ನು ಪೌರಕಾರ್ಮಿಕರನ್ನಾಗಿ ಮಾಡುವ ಮನಸ್ಥಿತಿ ಬಿಟ್ಟು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಹೇಳಿದರು.ವೃತ್ತಿ ಆಧಾರಿತ ಜಾತಿಯನ್ನು ಯಾವುದೋ ಕಾಲದಲ್ಲಿ ಮಾಡಲಾಗಿದೆ. ಪೂರಾಣ ಎಂದಿಗೂ ಇತಿಹಾಸವಾಗುವುದಿಲ್ಲ. ದೇಶದಲ್ಲಿ ಪುರಾಣವೇ ಮುನ್ನೆಡೆಯಲ್ಲಿದ್ದು, ಇದರ ಆಧಾರದ ಮೇಲೆ ಮನುವಾದವನ್ನು ಅಘೋಷಿತವಾಗಿ ಇಂದಿಗೂ ಆಚರಣೆಯಲ್ಲಿರುವುದು ವಿಷಾದನೀಯ ಎಂದರು.
ನಾವೆಲ್ಲರೂ ಸಮಾನರು ಎಂಬುದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಸಂವಿಧಾನದ ಮೂಲ ಆಶಯಗಳನ್ನು ಅರ್ಥ ಮಾಡಿಕೊಳ್ಳದಿದ್ದರೇ ಮಾನವೀಯತೆಯ ಅರ್ಥ ಗೊತ್ತಿರುವುದಿಲ್ಲ. ಮನುಷ್ಯನನ್ನು ಮನುಷ್ಯನ್ನಾಗಿ ಕಾಣದ ವ್ಯವಸ್ಥೆಯನ್ನು ನಾವು ದಿಕ್ಕರಿಸಬೇಕು ಎಂದು ತಿಳಿಸಿದರು.ಮನುವಾದವನ್ನು ನಾಶ ಪಡಿಸುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೆಯೇ ಸಂಸತ್‌ನಲ್ಲಿ ಮನುಸ್ಮುತಿಯನ್ನು ಸುಟ್ಟುಹಾಕಿದರು. ಆದರೆ, ಇಂದಿಗೂ ವೃತ್ತಿಯಾದರೀತ ಜಾತಿ ಸೃಷ್ಟಿಯಾಗಿರುವುದು ಭಾರತ ದೇಶದಲ್ಲಿ ಬಿಟ್ಟರೇ ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ. ಕೆಟ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ತೊಡೆದುಹಾಕಲು ಮುಂದಾಗಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಸರ್ಕಾರದಿಂದ ಸಿಗುವ ಸಲವತ್ತುಗಳನ್ನು ಸಮರ್ಪಕವಾಗಿ ಪೌರಕಾರ್ಮಿಕರಿಗೆ ಸಿಗುವಂತೆ ಆಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.ಇದೇ ವೇಳೆ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೀಡಿದರು. ಎಲ್ಲಾ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸಲಾಯಿತು. ಶಾಸಕರು ಪೌರಕಾರ್ಮಿಕರಿಗೆ ಊಟ ಬಡಿಸುವುದರ ಮೂಲಕ ಸೇವೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ನೂರುಲ್ಲಾ, ಎಂ.ಎನ್.ಶಿವಸ್ವಾಮಿ, ಸಿದ್ದರಾಜು, ಎಂ.ಆರ್.ರಾಜಶೇಖರ್, ನಾಗೇಶ್, ರವಿ, ಪ್ರಮೀಳಾ, ಇಂದ್ರಮ್ಮ ದೊಡ್ಡಯ್ಯ, ಮಣಿ ನಾರಾಯಣ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ಪೊತ್ತಂಡೆ ನಾಗರಾಜು, ರಮೇಶ್, ಅಂಕರಾಜು, ರಮೇಶ್, ಷರೀಫ್ ಸೇರಿದಂತೆ ಇತರರು ಇದ್ದರು. ನಾಮಪತ್ರ ಸಲ್ಲಿಸಿದರು.;Resize=(128,128))
;Resize=(128,128))
;Resize=(128,128))