ಸಾರಾಂಶ
ಕುಣಿಬೆಳಕೆರೆಯ ಸಂತ್ರಸ್ತ ಮಹಿಳೆ ಗಿರಿಜಮ್ಮಗೆ ವಸತಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಮಹಾದೇವ್ ಕಾನಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಹರಿಹರ
ಕುಣಿಬೆಳಕೆರೆಯ ಸಂತ್ರಸ್ತ ಮಹಿಳೆ ಗಿರಿಜಮ್ಮಗೆ ವಸತಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಮಹಾದೇವ್ ಕಾನಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹರಿಹರ ನಗರದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಗಿರಿಜಮ್ಮನ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸಿಸಲು ಮಹಿಳೆಗೆ ಸ್ವಂತ ಮನೆ ಇಲ್ಲದ ಕಾರಣ ಬಸ್ ನಿಲ್ದಾಣ, ಗ್ರಾಮ ಪಂಚಾಯಿತಿ ಬಳಿ ವಾಸ್ತವ ಮಾಡುತ್ತಿರುವ ಬಗ್ಗೆ ತಿಳಿಸಿದ್ದರಿಂದ ಕೂಡಲೆ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ತಹಸೀಲ್ದಾರರಿಗೆ ಸೂಚಿಸಿದ್ದೇನೆ ಎಂದರು.
ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದಿದ್ದು, ಅವರಿಗೆ ಮಂಡಿ ಚಿಪ್ಪಿನ ಎಲುಬು ಸವೆದಿರುವುದರಿಂದ ಮಂಡಿ ನೋವು ಬರುವುದರಿಂದ ಓಡಾಡಲು ಆಗುತ್ತಿಲ್ಲ. ತಜ್ಞ ವೈದ್ಯರ ಸಲಹೆ ಹಾಗು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ತಕ್ಷಣ ರವಾನಿಸುವಂತೆ ತಿಳಿಸಿದ್ದೇನೆ ಎಂದರು.
ಗಿರಿಜಮ್ಮರ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಯ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಪರಿಶೀಲನೆಗೆ ಆಗಮಿಸಿದ್ದೇನೆ. ವೃದ್ದಾಪ್ಯ ವೇತನ ತಡವಾಗಿದೆ ಅಥವಾ ಕೊಟ್ಟಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ವೃದ್ಧಾಪ್ಯ ವೇತನ ಸಮಸ್ಯೆಯಲ್ಲ, ಅವರಿಗೆ ವಾಸಕ್ಕೆ ಮನೆ ಇಲ್ಲದಿರುವುದು ನಿಜವಾದ ಸಮಸ್ಯೆ ಎಂದರು.
ತಹಸೀಲ್ದಾರ್ ಗುರುಬಸವರಾಜಯ್ಯ ಮಾತನಾಡಿ, ಮಾಧ್ಯಮಗಳಲ್ಲಿ ಗಿರಿಜಮ್ಮನಿಗೆ ವೃದ್ಧಾಪ್ಯವೇತನ ಸಂದಾಯವಾಗಿಲ್ಲ ಎಂದು ಬಿಂಬಿಸಲಾಗುತ್ತಿದೆ. ಮಾಧ್ಯಮಗಳು ವಸ್ತುಸ್ಥಿತಿ ತಿಳಿದುಕೊಂಡು ವರದಿ ಮಾಡಬೇಕು, ಉತ್ಪ್ರೇಕ್ಷೆ ಮಾಡಬಾರದು.
ಜನವರಿ ೨೦೧೮ರಿಂದ ನವಂಬರ್ ೨೦೨೩ರವರೆಗೆ ವೃದ್ಧಾಪ್ಯ ವೇತನ ಅವರಿಗೆ ಸಕಾಲಕ್ಕೆ ತಲುಪಿದೆ. ಡಿಸೆಂಬರ್ 2023ರ ವೇತನ ಮಾತ್ರ ಕೆಲ ದಿನಗಳು ತಡವಾಗಿದೆ ಈ ಬಗ್ಗೆ ದಾಖಲೆಗಳಿವೆ ನೋಡಿ ಎಂದು ತೋರಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ್, ಉಪಾಧ್ಯಕ್ಷೆ ಶುಭ, ಕಾರ್ಯದರ್ಶಿ ಎಂ.ನಾಗರಾಜ್, ಸಹ ಕಾರ್ಯದರ್ಶಿ ಪಿ.ಸಿ.ಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಪಿ.ರುದ್ರಗೌಡ, ವಕೀಲರಾದ ಜಿ.ಬಿ.ರಮೇಶ್, ಮಾರುತಿ ಬೇಡರ್, ನಟರಾಜ್, ಬಾಲಾಜಿ, ಮಾಲತೇಶ್, ಆಸ್ಪತ್ರೆಯ ಡಾ. ಹನುಮಾನಾಯ್ಕ, ಡಾ.ವಿಕ್ರಂ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಉಮ್ಮಣ್ಣ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))