ಸಾರಾಂಶ
ಲಕ್ಷ್ಮೇಶ್ವರ: ಪೌರ ಕಾರ್ಮಿಕರು ನಮ್ಮ ಪಟ್ಟಣ ಹಾಗೂ ನಗರ ಸ್ವಚ್ಛತೆಯ ಹರಿಕಾರರು, ನಮ್ಮ ದೇಶದ ಸ್ವಚ್ಛತೆಗಾಗಿ ತಮ್ಮ ಪ್ರಾಣ ಮುಡಿಪಾಗಿಡುವ ಪೌರ ಕಾರ್ಮಿಕರು ಎಲ್ಲರಿಗಿಂತಲೂ ಮಿಗಿಲಾಗಿ ದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹೇಳಿದರು.
ಸೋಮವಾರ ಪಟ್ಟಣದ ಪುರಸಭೆಯ ಎದುರು ನಡೆದ 13ನೇ ಪೌರ ಕಾರ್ಮಿಕ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೌರ ಕಾರ್ಮಿಕರ ದಿನಾಚರಣೆಯನ್ನು ಪಟ್ಟಣದ ಎಲ್ಲ ಸಾರ್ವಜನಿಕರು ಸೇರಿ ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಗೌರವಿಸುವ ಕಾರ್ಯವಾಗಬೇಕು. ಪಟ್ಟಣದ ಆರೋಗ್ಯದ ದೃಷ್ಟಿಯಿಂದ ಪೌರ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ದುಡಿಯುತ್ತಿರುವ ಕಾರ್ಯ ಶ್ಲಾಘನೀಯ, ಪೌರ ಕಾರ್ಮಿಕರು ನಮ್ಮ ನಾಡಿನ ಸ್ವಚ್ಛತೆಯ ಸೇನಾನಿಗಳಾಗಿದ್ದಾರೆ. ಆರೋಗ್ಯವಂತ ಸಮಾಜಕ್ಕೆ ಪೌರ ಕಾರ್ಮಿಕರಾಗಿ ಅಗತ್ಯವಾಗಿದ್ದಾರೆ. ಪೌರ ಕಾರ್ಮಿಕರು ನಮ್ಮ ದೇಹದ ನರನಾಡಿಗಳಾಗಿದ್ದಾರೆ, ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಈ ವೇಳೆ ಪುರಸಭೆಯ ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಅಲ್ಲದೆ ಪೌರ ಕಾರ್ಮಿಕರಿಗೆ ಸರ್ಕಾರ ಕೊಡಮಾಡಿದ ಪರಿಹಾರದ ಚೆಕ್ ನೀಡಲಾಯಿತು.ಸಭೆಯಲ್ಲಿ ತಹಸೀಲ್ದಾರ್ ವಾಸುದೇವ ಸ್ವಾಮಿ, ಉಪಾಧ್ಯಕ್ಷ ಪಿರ್ಧೋಶ್ ಆಡೂರ, ರಾಜು ಕುಂಬಿ, ಪೂರ್ಣೀಮಾ ಪಾಟೀಲ, ಅಶ್ವಿನಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಮಾತನಾಡಿದರು.
ಪುರಸಭೆಯ ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ ಪ್ರಾಸ್ಥಾವಿಕವಾಗಿ ಮಾತನಾಡಿದರು, ಜಯಕ್ಕ ಅಂದಲಗಿ, ಮಂಜವ್ವ ನಂದೆಣ್ಣವರ, ವಾಣಿ ಹತ್ತಿ, ಪೂಜಾ ಕರಾಟೆ, ರಾಮು ಅಡಗಿಮನಿ, ಸಾಹೀಬ್‌ಜಾನ್ ಹವಾಲ್ದಾರ, ಮಂಜುಳಾ ಗುಂಜಳ, ಬಸವಣ್ಣೆಪ್ಪ ನಂದೆಣ್ಣವರ, ಮಂಜುನಾಥ ಮುದಗಲ್ಲ, ಮಂಜುಳಾ ಹೂಗಾರ, ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ, ಪಿಎಸ್ಐ ಈರಣ್ಣ ರಿತ್ತಿ ಹಾಗೂ ಪೌರ ಕಾರ್ಮಿಕ ಸಿಬ್ಬಂದಿಗಳು ಇದ್ದರು.ಹನಮಂತಪ್ಪ ನಂದೆಣ್ಣವರ ಕಾರ್ಯಕ್ರಮ ನಿರ್ವಹಿಸಿದರು.