ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜಧಾನಿ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲೇ ಇದ್ದರೂ ಅಭಿವೃದ್ದಿಯಲ್ಲಿ ಮಾತ್ರ ಜಿಲ್ಲಾ ಕೇಂದ್ರ ಕೋಲಾರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಅಷ್ಟೇ ಅಲ್ಲದೆ ಅಲ್ಲಿನ ಅಧಿಕಾರಿಗಳ ನಿರ್ಲ್ಯಕ್ಷದಿಂದಾಗಿ ನಗರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ಸಂಬಳಕ್ಕೂ ಹಣವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.ಜಿಲ್ಲಾ ಕೇಂದ್ರ ಕೋಲಾರದ ಪ್ರಮುಖ ರಸ್ತೆಗಳಲ್ಲಿ ಕಸ ಸಂಗ್ರಹಿಸುತ್ತಿರುವ ಪೌರಕಾರ್ಮಿಕರು, ರಸ್ತೆಗಳನ್ನು ಸ್ವಚ್ಛಗೊಳಿಸಿ, ಬದಿಯಲ್ಲಿನ ಕಸದ ರಾಶಿಯನ್ನು ತೆಗೆದು ನಗರವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ದಿನನಿತ್ಯವೂ ಮಾಡುತ್ತಾರೆ. 8 ತಿಂಗಳಿಂದ ಸಂಬಳ ಇಲ್ಲ
ಆದರೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೋಲಾರ ನಗರಸಭೆಯಲ್ಲಿ ಈಗ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲದ ಸ್ಥಿತಿ ಎದುರಾಗಿದೆ, ಪರಿಣಾಮ ಕಳೆದ ಏಳೆಂಟು ತಿಂಗಳಿಂದ ನಗರ ಸಭೆಯ ಪೌರಕಾರ್ಮಿಕರಿಗೆ ವೇತನವನ್ನೇ ನೀಡಿಲ್ಲ. ಪರಿಣಾಮ ಪೌರಕಾರ್ಮಿಕ ಸಿಬ್ಬಂದಿ ಸಂಬಳವಿಲ್ಲದೆ ಕೆಲಸ ಮಾಡುವ ಸ್ಥಿತಿ ಇಲ್ಲಿದೆ. ಕೋಲಾರ ನಗರಸಭೆಯಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಜನ ಪೌರಕಾರ್ಮಿಕರಿದ್ದಾರೆ. ಈ ಪೈಕಿ ಕಸ ಸಂಗ್ರಹ ಮಾಡುವುದು, ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ನಗರಸಭೆ ಸಂಬಳ ನೀಡಿಲ್ಲ.ಇದರಿಂದ ಕಳೆದ ೭ ತಿಂಗಳಿನಿಂದ ಪೌರಕಾರ್ಮಿಕರು ಪರದಾಡುವ ಸ್ಥಿತಿ ಎದುರಾಗಿದೆ, ಆದರೂ ಸಹ ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ದ ಮಾತನಾಡದೆ, ಪ್ರತಿನಿತ್ಯ ಕೆಲಸ ಮಾಡಿ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಮುಂದುರಿಸಿದ್ದಾರೆ. ಕೆಲವು ಸಿಬ್ಬಂದಿಗಳಿಗೆ ಮೂರು ತಿಂಗಳು, ಇನ್ನು ಕೆಲವು ಸಿಬ್ಬಂದಿಗಳಿಗೆ ನಾಲ್ಕು ತಿಂಗಳು, ಇನ್ನು ಕೆಲವು ಪೌರಕಾರ್ಮಿಕರಿಗೆ ಏಳು ತಿಂಗಳು ವೇತನ ಬಾಕಿ ಇದೆ. ಆದಷ್ಟು ಬಾಕಿ ಇರುವ ವೇತನವನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಅನ್ನೋದು ನಗರಸಭೆ ಆಯುಕ್ತ ನವೀನ್‌ಚಂದ್ರರ ಮಾತಾಗಿದೆ.
130 ಪೌರಕಾರ್ಮಿಕರ ಪರದಾಟಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೩೫ ವಾರ್ಡುಗಳಿವೆ ಈ ಪೈಕಿ ಒಟ್ಟು ೧೩೦ ಕ್ಕೂ ಹೆಚ್ಚು ಜನ ಪೌರಕಾರ್ಮಿಕರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪೌರಕಾರ್ಮಿಕರು ನಿತ್ಯ ಕಸ ಸಂಗ್ರಹ, ಬೀದಿ ಗುಡಿಸುವುದು, ವಾರ್ಡ್ಗಳಿಗೆ ನೀರು ಪೂರೈಕೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದರೆ ಮಾತ್ರವೇ ನಗರದಲ್ಲಿ ಜನರು ನೆಮ್ಮದಿಯಾಗಿರಲು ಸಾಧ್ಯ. ಒಂದು ದಿನ ಕಸ ಸಂಗ್ರಹ ಮಾಡದೆ ಹೋದರೆ ಇಡೀ ನಗರವೇ ಕಸದ ರಾಶಿಯಿಂದ ತುಂಬಿ ತುಳುಕುವ ಸ್ಥಿತಿಗೆ ಬರುತ್ತದೆ. ತಿಂಗಳಿಗೆ ಬೇಕು ₹25 ಲಕ್ಷ
ಹೀಗೆ ಪೌರಕಾರ್ಮಿಕರು ಆರೋಗ್ಯ ಪಣಕ್ಕಿಟ್ಟು ನಗರದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಸದ್ಯ ವೇತನ ನೀಡಿಲ್ಲ, ಕಾರಣ ಕೋಲಾರ ನಗರಸಭೆಯ ಬಳಿ ಹಣವಿಲ್ಲ ಅನ್ನೋ ಕಾರಣ ಹೇಳಲಾಗುತ್ತಿದೆ. ಪ್ರತಿ ತಿಂಗಳು ಕೋಲಾರ ನಗರಸಭೆಗೆ ವೇತನ ಸೇರಿದಂತೆ ಇತರ ಕಚೇರಿ ನಿರ್ವಹಣೆಗೆ ಸರಾಸರಿ ೨೫ ಲಕ್ಷ ರೂಪಾಯಿ ಹಣ ಬೇಕಾಗುತ್ತದೆ, ಆದರೆ ಕೋಲಾರ ನಗರಸಭೆಯಲ್ಲಿ ಸರಿಯಾಗಿ ತೆರಿಗೆ ವಸೂಲಿ ಆಗದ ಹಿನ್ನೆಯಲ್ಲಿ ಅದಕ್ಕೂ ನಗರಸಭೆಯ ಬಳಿ ಹಣವಿಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದು, ಪೌರಕಾರ್ಮಿಕರು ಸೇರಿದಂತೆ ಸಿಬ್ಬಂದಿಗಳಿಗೆ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ.ಸದ್ಯ ಈಗ ವಿಶೇಷ ಅಭಿಯಾನದ ಮೂಲಕ ತೆರಿಗೆ ವಸೂಲಾತಿಗೆ ನಗರಸಭೆ ಮುಂದಾಗಿದ್ದು, ಆದಷ್ಟು ಬೇಗ ಹಂತ ಹಂತವಾಗಿ ಬಾಕಿ ಇರುವ ಪೌರಕಾರ್ಮಿಕರ ವೇತನ ನೀಡುತ್ತೇವೆ, ಅನ್ನೋದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮರ ಮಾತಾಗಿದೆ.ಸರ್ಕಾರ ಅನುದಾನ ನೀಡಲಿಒಟ್ಟಿನಲ್ಲಿ ಕೋಲಾರ ನಗರಸಭೆಯಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಆಗುತ್ತಿಲ್ಲ. ಅಲ್ಲದೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನಗಳು ಬಾರದ ಪರಿಣಾಮ ನಗರಸಭೆಯ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಬಾಕಿ ವೇತನ ಪಾವತಿಸುವಂತೆ ಪೌರಕಾರ್ಮಿಕರು ಒತ್ತಾಯಿಸಿದ್ದಾರೆ.