ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹುಬ್ಬಳ್ಳಿಯಲ್ಲಿ ಪೌರಕಾರ್ಮಿಕರ ಪ್ರತಿಭಟನೆ

| Published : Nov 28 2024, 12:34 AM IST

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹುಬ್ಬಳ್ಳಿಯಲ್ಲಿ ಪೌರಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆ ಠರಾವು ಅನ್ವಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕು, ಪೌರಕಾರ್ಮಿಕರ ಬೇಡಿಕೆಗಳ ಕುರಿತು ಪಾಲಿಕೆಯ ಠರಾವುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು.

ಹುಬ್ಬಳ್ಳಿ:

ಪಾಲಿಕೆಯ 870 ಪೌರಕಾರ್ಮಿಕರನ್ನು ಏಕಕಾಲಕ್ಕೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬುಧ‍ಾರ ಇಲ್ಲಿನ ಮಹಾನಗರ ಪಾಲಿಕೆಯ ಎದುರು ಧಾರವಾಡ ಜಿಲ್ಲಾ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, ಪಾಲಿಕೆ ಠರಾವು ಅನ್ವಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕು, ಪೌರಕಾರ್ಮಿಕರ ಬೇಡಿಕೆಗಳ ಕುರಿತು ಪಾಲಿಕೆಯ ಠರಾವುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು, ಪಾಲಿಕೆಯ ಠರಾವಿನ ಅನ್ವಯ ಸಂಘಕ್ಕೆ ಕೊಠಡಿ ಒದಗಿಸಬೇಕು. ಕನಿಷ್ಠ ವೇತನ ವ್ಯತ್ಯಾಸ ಬಾಕಿ ₹ 9 ಕೋಟಿ, ತುಟ್ಟಿ ಭತ್ಯೆ ಬಾಕಿ ₹ 2 ಕೋಟಿ, ಸಂಕಷ್ಟ ಭತ್ಯೆ, ಬಿಬಿಎಂಪಿ ಮಾದರಿಯಂತೆ ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ ₹10 ಲಕ್ಷ, ಅವಲಂಬಿತರಿಗೆ ಕೆಲಸ, ನಿವೃತ್ತ ಪೌರಕಾರ್ಮಿಕರಿಗೆ ₹10 ಲಕ್ಷ ಪರಿಹಾರ ಮತ್ತು ₹5000 ಪ್ರತಿ ತಿಂಗಳು ನಿವೃತ್ತಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.

ನಂತರ ಮೇಯ‌ರ್ ರಾಮಪ್ಪ ಬಡಿಗೇರ, ಉಪಮೇಯ‌ರ್ ದುರ್ಗಮ್ಮ ಬಿಜವಾಡ ಹಾಗೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಈ ವೇಳೆ ಹೊನ್ನಪ್ಪ ದೇವಗೇರಿ, ಬಸಪ್ಪ ಮಾದರ, ರಮೇಶ ರಾಮ್ಮಯ್ಯನವರ, ಗಂಗಮ್ಮ ಸಿದ್ರಾಮಪುರ, ಭಾಗ್ಯಲಕ್ಷ್ಮೀ ಮಾದರ, ಲಕ್ಷ್ಮೀ ವಾಲಿ, ನೀಲವ್ವ ಬೆಳವಟಗಿ, ಲಕ್ಷ್ಮೀ ಬೇತಾಪಲ್ಲಿ, ದತ್ತಪ್ಪ ಆಪುಸಪೇಟ್, ರಾಜು ನಾಗರಾಳ, ತಾಯಪ್ಪ ಕಾಣೆಕಲ, ಶರೀಫ್ ಮಸರಕಲ್, ರಮೇಶ ಗೊಲ್ಲರ, ವೆಂಕಟೇಶ ಪಾಲವಾಯಿ, ಪಾರವ್ವ ಹೊಸಮನಿ, ಅನಿತಾ ಇನಗೊಂಡ, ಜಮುನಾ ಬೆನಸಮಟ್ಟಿ ಸೇರಿದಂತೆ ಇತರರು ಇದ್ದರು.