ನಿಮ್ಮ ಆರೋಗ್ಯ ರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ

ಕುಕನೂರು: ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕು ಎಂದು ಪಪಂ ಮುಖ್ಯ ಅಧಿಕಾರಿ ನಾಗೇಶ ಹೇಳಿದರು.

ಸ್ಥಳೀಯ ಪಪಂ ಆವರಣದಲ್ಲಿ ಜರುಗಿದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಸಮಾಜದ ಸ್ವಚ್ಛತೆಯ ನಿಜವಾದ ಶ್ರಮಿಕರು. ನೀವು ನಿಮ್ಮ ಆರೋಗ್ಯ ತ್ಯಾಗ ಮಾಡಿಕೊಂಡು ಸಮಾಜದ ಆರೋಗ್ಯ ಕಾಪಾಡುತ್ತಿದ್ದೀರಿ.ಹಾಗಾಗಿ ನಿಮ್ಮ ಆರೋಗ್ಯ ರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ ಎಂದು ಹೇಳಿದರು.

ದಂತ ವೈದ್ಯಾಧಿಕಾರಿ ಸುಷ್ಮಾ ಜಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುತ್ತವೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ.ಸಮಾಜಕ್ಕೆ ಮಾರಕವಾಗಿರುವ ತಂಬಾಕು ಸೇವನೆ ಬಗೆಗಿನ ಅಪಾಯಗಳ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತ ಮೂಡಿಸಬೇಕಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು’ ಎಂದರು.

ಪೌರ ಕಾರ್ಮಿಕರು ಗುಟಕಾ,ಸಿಗರೇಟು ಎಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ನಾಗರಿಕರ ಸಹಕಾರವೂ ಮುಖ್ಯ ಎಂದರು.

ಈ ಸಂದರ್ಭದಲ್ಲಿ ವಿದ್ಯಾನಾಗರಡ್ಡಿ, ಮಂಜುನಾಥ ಹಿರೇಮನಿ,ಕಾಳಪ್ಪ ಕುಂಬಾರ್, ಕಳಕಪ್ಪ ಬಂಡಿ, ಕೃಷ್ಣರಾವ ದೇಶಪಾಂಡೆ,ರಮ್ಯ ತೊಂಡಿಹಾಳ, ಯಲ್ಲಪ್ಪ ಕಲ್ಮನಿ, ಮಹಾಂತೇಶ ಮುಧೋಳ, ಬಸವರಾಜ ಆರಬೆರಳಿನ ಇದ್ದರು.