ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ತಂದು ಸುಮಾರು 2 ಎಕರೆ ಜಾಗದಲ್ಲಿ 86 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅವುಗಳಲ್ಲಿ 46 ವಸತಿಗಳು ಪೂರ್ಣಗೊಂಡಿದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್ ಜನ್ಮದಿನ ಏ.14ರಂದು ಉದ್ಘಾಟಿಸಿ ಪೌರಕಾರ್ಮಿಕರ ಗೃಹಪ್ರವೇಶಕ್ಕೆ ಅನುವು ಮಾಡಿಕೊಳ್ಳಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.ನಗರದಲ್ಲಿ ಭಾನುವಾರ ನಗರೋತ್ಥಾನದಡಿ ಪರಿಶಿಷ್ಠ ಜಾತಿಯ ₹1.65 ಕೋಟಿ ಅನುದಾನ, ಪರಿಶಿಷ್ಟ ಪಂಗಡದ ₹70.90 ಲಕ್ಷ ಅನುದಾನ, ಇತರೆ ಬಡಜನರ ಕಲ್ಯಾಣದ ₹92.44 ಲಕ್ಷ ಅನುದಾನ ಹೀಗೆ ಒಟ್ಟು ಸುಮಾರು ₹3.28 ಕೋಟಿಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾದ ಮನೆಗಳ ಬಡಾವಣೆಯಲ್ಲಿ ₹52.91 ಲಕ್ಷ ಅನುದಾನದಲ್ಲಿ ಆಂತರಿಕ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ್ ನಂ.27ರ ಭೀಮನಗರದಲ್ಲಿ ವಿದ್ಯಾ ಮಂದಿರದಿಂದ ಉರ್ದು ಶಾಲೆಯವರೆಗೆ ₹20 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ, ವಾರ್ಡ್ ನಂ.31ರ ತಹಶೀಲ್ದಾರ ಬಡಾವಣೆಯಲ್ಲಿ ₹20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ, ವಾರ್ಡ್ ನಂ.20ರ ಶಿಂಧೆ ನಗರದಲ್ಲಿ ₹20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ, ವಾರ್ಡ್ ನಂ.24ರ ಭೀಮನಗರದಲ್ಲಿ ₹20 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.14ರ ಜತ್ರಾಟ್‌ವೇಸ್‌ನಲ್ಲಿ ₹40 ಲಕ್ಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ್ ನಂ.12ರ ಗೋಸಾವಿ ಗಲ್ಲಿಯಲ್ಲಿ ₹15.90 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.11ರ ಆಶ್ರಯನಗರದ ಗೋಸಾವಿ ವಸಾಹತ್ತಿನಲ್ಲಿ ₹15 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.12ರ ಆಂದೋಲನನಗರದ ಗೋಸಾವಿ ಬಡಾವಣೆಯಲ್ಲಿ ₹20.44 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.11ರ ಆಶ್ರಯನಗರದಲ್ಲಿ ₹28 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ, ವಾರ್ಡ್ ನಂ.21ರಲ್ಲಿ ಟಿಪ್ಕೋ ಅಪಾರ್ಟ್‌ಮೆಂಟ್‌ದಿಂದ ಮಗದುಮ ಗಲ್ಲಿ, ಶೇತವಾಳ ಗಲ್ಲಿ, ಮಾನವಿ ಗಲ್ಲಿ, ತೇಲಿ ಗಲ್ಲಿಯಲ್ಲಿ ₹29 ಲಕ್ಷ ಅನುದಾನದಲ್ಲಿ ಡಾಂಬರೀಕರಣ, ವಾರ್ಡ್ ನಂ.22ರ ನಾಗೋಬಾ ಗಲ್ಲಿ, ಗವಳಿ ಗಲ್ಲಿಯಲ್ಲಿ ₹15 ಲಕ್ಷ ಅನುದಾನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂಜಯ ಸಾಂಗಾವಕರ, ಸ್ಥಾಯಿ ಸಮಿತಿ ಚೇರಮನ್ ಡಾ.ಜಸರಾಜ ಗಿರೆ, ಸದಸ್ಯ ರಾಜೇಂದ್ರ ಗುಂದೇಶಾ, ವಿಲಾಸ್ ಗಾಡಿವಡ್ಡರ, ಜಯವಂತ ಭಾಟಲೆ, ಸುರೇಖ ದೇಸಾಯಿ-ಸರ್ಕಾರ, ಸುಜಾತಾ ಕದಮ, ಪ್ರಭಾವತಿ ಸೂರ್ಯವಂಶಿ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ರಾಜೇಶ ಕೊಠಡಿಯಾ, ಬಂಡಾ ಘೋರ್ಪಡೆ, ಪ್ರಣವ ಮಾನವಿ ಮೊದಲಾದವರು ಸಹಿತ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.