ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೃಷಿ ಬೆಳವಣಿಗೆ ಮೇಲೆ ದೇಶದ ಅರ್ಥಶಾಸ್ತ್ರ ಅವಲಂಬಿತವಾಗಿದ್ದರೂ ಸ್ವಾತಂತ್ರ್ಯ ಬಂದಾಗಿನಿಂದಲೂ ಎಲ್ಲ ಸರ್ಕಾರಗಳು ರೈತ ಸಮುದಾಯವನ್ನು ನಿರ್ಲಕ್ಷ್ಯ ಮಾಡಿವೆ. ಕೃಷಿಕರನ್ನ ದೇಶ ಮರೆತಿದೆ. ರೈತರ ಪರ ಮಾತನಾಡುವ ಒಬ್ಬ ಪ್ರತಿನಿಧಿಯೂ ವಿಧಾನಸಭೆಯಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ನೆನಪಿನಲ್ಲಿ ಮಂಗಳವಾರ ನಡೆದ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ವತಿಯಿಂದ ಕೋಲಾರ, ಚಿಕ್ಕಬಳ್ಳಾಪುರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಸಂಘಟನೆಗಳ ಪ್ರಮುಖ ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತಸಂಘಗಳಲ್ಲಿ ಒಗ್ಗಟ್ಟಿಲ್ಲಸಂಸತ್ತಿನಲ್ಲಿ 543 ಸಂಸದರ ಪೈಕಿ 180ಕ್ಕೂ ಹೆಚ್ಚು ಜನ ರಿಯಲ್ ಎಸ್ಟೇಟ್, ಗಣಿ ಮಾಫಿಯಾಗಳಿಂದ ಬಂದವರೆ ತುಂಬಿ ಹೋಗಿದ್ದಾರೆ. ಇನ್ನು ರೈತರ ಸಂಘಟನೆಗಳ ಗಟ್ಟಿ ಮತ್ತು ಒಗ್ಗಟ್ಟು ಪ್ರದರ್ಶನವಾಗುತ್ತಿಲ್ಲ. ಒಂದು ಹಳ್ಳಿಯಲ್ಲಿ ಪ್ರತಿ ಮನೆಯಲ್ಲಿ ಒಬ್ಬೂಬ್ಬರು ಒಂದೋಂದು ಪಕ್ಷ, ನೌಕರ ಶಾಹಿ ವರ್ಗ ತಮ್ಮ ಕರ್ತವ್ಯ ಮರೆತು ರಾಜಕಾರಣಿಗಳ ಕೈ ಗೊಂಬೆಯಾಗಿ ವರ್ತಿಸುತಿದ್ದಾರೆ. ಇಡೀ ದೇಶವೆಲ್ಲಾ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಸಂವಿಧಾನವನ್ನು ಯಾರೂ ಪಾಲಿಸುತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಹತ್ತಾರು ವರ್ಷಗಳಿಂದ ಬಯಲು ಸೀಮೆ ಜನ ನೀರಿಗಾಗಿ ತತ್ತರಿಸಿ ಹೋಗಿದ್ದಾರೆ. ನಮ್ಮನ್ನಾಳಿ ಶಾಸನ ರೂಪಿಸಬೇಕಾದ ವಿಧಾನ ಮಂಡಲದಲ್ಲೂ ರೈತರ ಪರ ದ್ವನಿ ಎತ್ತುವವರಿಲ್ಲದಾಗಿದೆ. ರೈತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಸಹ ಕಾರ್ಪೊರೇಟ್ ಕುಳಗಳ ಪರ ನಿಂತಿದೆ. ಹೀಗಿರುವಾಗ ಕೆಲವೇ ರೈತರು ಬಾಯಿ ಬುಡುಕೊಂಡ್ರೆ ನಮ್ಮ ಗುರಿ ಮುಟ್ಟೋಕೆ ಆಗೋಲ್ಲ ಎಂದರು.
ನಿರಾವರಿ ಬಗ್ಗೆ ಜನತೆಗೆ ಅರಿವಿಲ್ಲಶಾಶ್ವತ ನೀರಾವರಿ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ನಮ್ಮ ಭಾಗದ ಶಾಸಕರಲ್ಲಿ ಒಗ್ಗಟ್ಟಿಲ್ಲ. ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಬಯಲು ಸೀಮೆಯ ಎಲ್ಲಾ ರೈತರು, ವಿದ್ಯಾರ್ಥಿ ಯುವಜನರು, ಮಹಿಳೆಯರು, ಕಾರ್ಮಿಕರು, ಪಕ್ಷಾತೀತವಾಗಿ ನಿರಂತರ ಹೋರಾಟ ಮಾಡಬೇಕು. ಶಾಶ್ವತ ನೀರಾವರಿ ನಮ್ಮ ಜನ್ಮಸಿದ್ಧ ಹಕ್ಕೆಂದು ಪ್ರತಿಪಾದಿಸಿದಾಗ ಮಾತ್ರ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಲು ಸಾಧ್ಯ ಎಂದರು. ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನೀರಾವರಿ ಯೋಜನೆಗಳ ಜಪ ಮಾಡುತ್ತಾರೆ. ಚುನಾಯುತರಾದ ಬಳಿಕ ರಾಜಕೀಯ ಪಕ್ಷಗಳಿಗೆ ಗುಲಾಮರಾಗುತ್ತಾರೆ. ಇವರಿಗೆ ಬದ್ದತೆ ಇಲ್ಲ ಎಂದು ಟೀಕಿಸಿದರು.
ಕೆರೆಗಳಿಗೆ ಕೊಳಚೆ ನೀರುನಮ್ಮ ಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ತಲುಪಿದೆ ಭವಿಷ್ಯ ದಿನಗಳಲ್ಲಿ ಈ ಭಾಗಕ್ಕೆ ಶಾಶ್ವತವಾಗಿ ನೀರಾವರಿ ಯೋಜನೆ ಜಾರಿಗೊಳಿಸಲು ಮೂರು ದಶಕಗಳ ಹಿಂದೆ ದಿವಂಗತ ನಿವೃತ್ತ ಇಂಜಿನಿಯರ್ ಡಾ.ಜಿ ಎಸ್.ಪರಶಿವಯ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಸರ್ಕಾರ ಇವರ ವರದಿಯನ್ನು ಪರಿಗಣಿಸಲಿಲ್ಲ. ಮೂಗಿಗೆ ತುಪ್ಪ ಸವರಿದಂತೆ ಎತ್ತಿನ ಹೊಳೆ ಯೋಜನೆ ಎಂದು ಹಣದ ಹೊಳೆಯ ಯೋಜನೆ ಆರಂಬಿಸಿ, ಅದು ಬರುವುದು ನಿಧಾನವೆಂದು, ಬೆಂಗಳೂರಿನ ಕೊಳಚೆ ನೀರಾದ ಕೆಸಿ ಮತ್ತು ಎಚ್‌ಎನ್ ವ್ಯಾಲಿಯ ನೀರನ್ನು ಈಭಾಗದ ಕೆರೆಗಳಿಗೆ ಹರಿಸಿದ್ದಾರೆ ಎಂದು ಆಕ್ರೋಷ ವ್ಯೆಕ್ತ ಪಡಿಸಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ರಾಜ್ಯ ರೈತಸಂಘದ ಮುಖಂಡ ಅಬ್ಬಣಿ ಶಿವಪ್ಪ, ಪುಟ್ಟಣ್ಣಯ್ಯ ಬಣದ ರಾಜ್ಯಾಧ್ಯಕ್ಷ ಜಿ ಜೆ ಹಳ್ಳಿ ನಾರಾಯಣಸ್ವಾಮಿ, ರೈತ ಜನಸೇನಾ ಅಧ್ಯಕ್ಷೆ ಸುಷ್ಮಾಶ್ರೀನಿವಾಸ್, ಲಾಯರ್ ನಾರಾಯಣಸ್ವಾಮಿ, ಮಂಚೇನಹಳ್ಳಿ ಎಂ.ಆರ್. ಲಕ್ಷ್ಮೀನಾರಾಯಣ, ಮಳ್ಳೂರು ಹರೀಶ್, ಉಷಾ ಆಂಜನೇಯರೆಡ್ಡಿ, ನೂರುಲ್ಲಾ, ಕನ್ನಡ ಸೇನೆ ರವಿಕುಮಾರ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಶ್ರೀನಿವಾಸ್ ಮತ್ತಿತರರು ಇದ್ದರು.