ಗೋರೆ ಕೆರೆ ಸ್ವಚ್ಛಗೊಳಿಸಿ ತೆಪ್ಪೋತ್ಸವ

| Published : Nov 27 2024, 01:04 AM IST

ಸಾರಾಂಶ

ನಮಗೆ ನೆಲ ಜಲ ಹಾಗೂ ಜೀವನವನ್ನೇ ನೀಡಿದ ತಾಯಿ ಭಾರತ ಮಾತೆಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.

ಕುಮಟಾ: ಇಲ್ಲಿನ ಯುವ ಬ್ರಿಗೇಡ್ ಹಾಗೂ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಸಹಯೋಗದಲ್ಲಿ ಗೋರೆಯ ಗೋಪಾಲಕೃಷ್ಣ ದೇವಸ್ಥಾನದ ಕೆರೆಯನ್ನು ಸ್ವಚ್ಛಗೊಳಿಸಿ ಭಾನುವಾರ ಸಾಯಂಕಾಲ ದೀಪೋತ್ಸವದೊಟ್ಟಿಗೆ ಕೆರೆಯಲ್ಲಿ ಭಾರತಮಾತೆಯ ತೆಪ್ಪೋತ್ಸವ ಆಚರಿಸಿದರು.

ಕೆನರಾ ಎಕ್ಸಲೆನ್ಸ್ ಕಾಲೇಜಿನ ಸಂಸ್ಥಾಪಕ ಡಾ. ಜಿ.ಜಿ. ಹೆಗಡೆ ಮಾತನಾಡಿ, ನಮಗೆ ನೆಲ ಜಲ ಹಾಗೂ ಜೀವನವನ್ನೇ ನೀಡಿದ ತಾಯಿ ಭಾರತ ಮಾತೆಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಯುವ ಬ್ರಿಗೇಡ್ ಇಂತಹ ಒಂದು ಸುವರ್ಣ ಅವಕಾಶ ಮತ್ತು ಅದ್ಭುತ ಕಲ್ಪನೆ ಜನ ಮಾನಸದಲ್ಲಿ ಮೂಡಿಸುತ್ತಾ ಬಂದಿದ್ದು ನಿಜಕ್ಕೂ ಅಭಿನಂದನಾರ್ಹ ಸಂಗತಿ. ಇಂತಹ ಉತ್ತಮ ಕಾರ್ಯಗಳು ಸಮಾಜದಲ್ಲಿ ಹೆಚ್ಚಲಿ ಎಂದರು. ಯುವ ಬ್ರಿಗೇಡ್ ವಿಭಾಗ ಸಹ ಸಂಚಾಲಕ ಅಣ್ಣಪ್ಪ ನಾಯ್ಕ ಮಾತನಾಡಿದರು. ಯುವ ಬ್ರಿಗೇಡ್‌ನ ಸತೀಶ ಪಟಗಾರ, ಸಚಿನ ಭಂಡಾರಿ, ರವೀಶ ನಾಯ್ಕ, ಚಿದಂಬರ ಅಂಬಿಗ, ಮದನ ಗುನಗ, ಸಂದೀಪ ಮಡಿವಾಳ, ಲಕ್ಷ್ಮೀಕಾಂತ ಮುಕ್ರಿ, ವಿನಾಯಕ ಗುನಗ, ಪ್ರಕಾಶ ನಾಯ್ಕ, ವಿಷ್ಣು ಪಟಗಾರ, ಗೌರೀಶ ನಾಯ್ಕ ಹಾಗೂ ಗೋರೆ ಕಾಲೇಜಿನ ಬೋಧಕ - ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.ಮುಷ್ಕರ ಮುಂದುವರಿಸಲು ಅವಕಾಶ ನೀಡುವಂತೆ ಮನವಿ

ಕಾರವಾರ: ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಮುಖ್ಯ ಪುಸ್ತಕದ ಬರಹಗಾರರು(ಎಂಬಿಕೆ) ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ(ಎಲ್‌ಸಿಆರ್‌ಪಿ) ಸಿಬ್ಬಂದಿಗೆ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮುಂದುವರಿಯಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ಮಂಗಳವಾರ ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಸಿಬ್ಬಂದಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ ಅವರಿಗೆ ಮನವಿ ನೀಡಿದರು.ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ. 11ರಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಟ್ಟದ ಎಂಬಿಕೆ ಹಾಗೂ ಎಲ್‌ಸಿಆರ್‌ಪಿ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರು ಮನವಿ ಸ್ವೀಕರಿಸಿ ನ. 25 ಅಥವಾ 26ರಂದು ವಿಶೇಷ ಸಭೆ ಏರ್ಪಡಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ನಂತರ ಷರತ್ತಿನ ಆಧಾರದಲ್ಲಿ ಹೋರಾಟವನ್ನು ಹಿಂದಕ್ಕೆ ಪಡೆಯಲಾಯಿತು. ಆದರೆ ಈವರೆಗೆ ಸಭೆ ಕರೆಯದ ಕಾರಣ ಸಭೆ ನಡೆಯುವ ವರೆಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ಬೀಕರಿಸಿದ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಜಿಲ್ಲೆಗಳಲ್ಲಿ ಸಿಬ್ಬಂದಿಯು ನೀಡಿದ ಮನವಿಯ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಬಳಿಕ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.ಒಕ್ಕೂಟದ ಭಾತರಿ ಎಸ್.ಕೆ., ವರ್ಷ ನಾಯ್ಕ, ಶ್ವೇತಾ ಎಸ್., ಅಂಕಿತಾ, ಶೋಭಾ, ಅನಿತಾ ಹಾಗೂ ಇತರರು ಇದ್ದರು.