ಸಾರಾಂಶ
ಸುಂಟಿಕೊಪ್ಪ ಸರ್ಕಾರಿ ಹಾಗೂ ಸಂಘ ಸಂಸ್ಥೆಗಳ ಫಲಕಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಎಸ್‌ವೈಎಸ್ ಪದಾಧಿಕಾರಿಗಳು ನಡೆಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಎಸ್‌ವೈಎಸ್ ವತಿಯಿಂದ ‘ಫ್ರೆಶ್ ಇಂಡಿಯಾ’ ಎಂಬ ಧ್ಯೇಯ ವಾಕ್ಯದೊಂದಿಗೆ ಸುಂಟಿಕೊಪ್ಪ ಸರ್ಕಾರಿ ಹಾಗೂ ಸಂಘ ಸಂಸ್ಥೆಗಳ ಫಲಕಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಎಸ್‌ವೈಎಸ್ ಪದಾಧಿಕಾರಿಗಳು ನಡೆಸಿದರು.ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸುಂಟಿಕೊಪ್ಪ ಎಸ್‌ವೈಎಸ್ ಟೀಂ ಇಸಾಬಾ ತಂಡದ ಯುವಕರು ಗದ್ದೆಹಳ್ಳದಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಸೇರಿದ ಫಲಕಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಟೀಂ ಇಸಾಬಾ ತಂಡದ ಯುವಕರ ತಂಡದ ನಾಸೀರ್ ಮತ್ತು ಸಾಹಿಲ್ ನೆರವೇರಿಸಿದರು.