ಸಾರಾಂಶ
ಐತಿಹಾಸಿಕ ಶ್ರೀರಂಗಪಟ್ಟಣಕ್ಕೆ ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸಿ ತೆರಳಲಿದ್ದು, ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಅವರು ಧರಿಸಿದ್ದ ಬಟ್ಟೆ ಸೇರಿದಂತೆ ಕಾಗದ, ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ಒಂದೆಡೆ ಹಾಕಿದರು. ನಂತರ ಶಾಸ್ವತಿ ಧಾರ್ಮಿಕ ಕ್ರಿಯಾ ಸಮಿತಿಯಲ್ಲಿ ಉಪಾಹಾರ ಸ್ವೀಕರಿಸಿ ಟಿ.ನರಸಿಪುರ ಕಡೆಗೆ ಬೈಕ್ ರ್‍ಯಾಲಿ ಮೂಲಕ ತೆರಳಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕಾವೇರಿ ನದಿ ತೀರದಲ್ಲಿ ಚೆಲ್ಲಾಡಿದ್ದ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ಭಾನುವಾರ ಯುವ ಬ್ರಿಗೇಡ್ ವತಿಯಿಂದ ಕಾವೇರಿ ಸ್ವಚ್ಛತಾ ಅಭಿಯಾನ ನಡೆಸಿ ಗಮನ ಸೆಳೆದರು.ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ಮಂದಿ ಬೆಳಗ್ಗೆ 6 ಗಂಟೆಯಿಂದ ಶ್ರಮದಾನ ನಡೆಸಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾವೇರಿ ನದಿಯನ್ನು ಪ್ರದಕ್ಷಣೆ ಆಕಾರವಾಗಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಐತಿಹಾಸಿಕ ಶ್ರೀರಂಗಪಟ್ಟಣಕ್ಕೆ ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸಿ ತೆರಳಲಿದ್ದು, ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಅವರು ಧರಿಸಿದ್ದ ಬಟ್ಟೆ ಸೇರಿದಂತೆ ಕಾಗದ, ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ಒಂದೆಡೆ ಹಾಕಿದರು. ನಂತರ ಶಾಸ್ವತಿ ಧಾರ್ಮಿಕ ಕ್ರಿಯಾ ಸಮಿತಿಯಲ್ಲಿ ಉಪಾಹಾರ ಸ್ವೀಕರಿಸಿ ಟಿ.ನರಸಿಪುರ ಕಡೆಗೆ ಬೈಕ್ ರ್‍ಯಾಲಿ ಮೂಲಕ ತೆರಳಿದರು.ನಂತರ ವೇದಬ್ರಹ್ಮ ಡಾ.ಭಾನುಪ್ರಕಾಶ ಶರ್ಮಾ ಮಾತನಾಡಿ, ಯುವ ಬ್ರಿಗೇಡ್ ವತಿಯಿಂದ 100ಕ್ಕೂ ಹೆಚ್ಚು ಮಂದಿ ಸದಸ್ಯರು ಬೈಕ್ ರ್‍ಯಾಲಿ ಮೂಲಕ ಕಾವೇರಿ ನದಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ ಎಂದರು.
ಕಾವೇರಿ ಹರಿಯುವ ಅನೇಕ ಸ್ಥಳಗಳಲ್ಲಿ ಸ್ವಚ್ಛತೆ ನಡೆಸುತ್ತಿದ್ದು, ಶ್ರೀರಂಗಟಪ್ಟಣದ ಕಾವೇರಿ ನದಿಯನ್ನು ಸ್ವಚ್ಛಗೊಳಿಸಿದ್ದಾರೆ. ಭಾನುವಾರ ಟಿ.ನರಸಿಪುರದಲ್ಲಿ ವಾಸ್ತವ್ಯ ಹೂಡಲಿದ್ದು, ನಂತರ ಶಿವನಸಮುದ್ರವ ವರೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.