ಸಾರಾಂಶ
ವಿದ್ಯಾನಗರ ಬಡಾವಣೆ ಕುವೆಂಪು ಯುವಕರ ಸಂಘದ ವತಿಯಿಂದ ಬಡಾವಣೆಯ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ ಸ್ವಚ್ಚತಾ ಅಭಿಯಾನ ನೆಡೆಸಲಾಯಿತು.
ಕನ್ನಡಪ್ರಭ ವಾರ್ತೆ, ಹಾಸನ
ವಿದ್ಯಾನಗರ ಬಡಾವಣೆ ಕುವೆಂಪು ಯುವಕರ ಸಂಘದ ವತಿಯಿಂದ ಬಡಾವಣೆಯ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ ಸ್ವಚ್ಚತಾ ಅಭಿಯಾನ ನೆಡೆಸಲಾಯಿತು.ವಿದ್ಯಾನಗರ ಬಡಾವಣೆ ಬಸ್ ನಿಲ್ದಾಣ ರಸ್ತೆ ಸ್ವಚ್ಛಗೊಳಿಸಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.ಈ ವೇಳೆ ಮಾತನಾಡಿದ ಕುವೆಂಪು ಯುವಕರ ಸಂಘದ ಗೌರವಾಧ್ಯಕ್ಷ ಡಾ.ಜಗದೀಶ್, ಪರಿಸರ ಸ್ವಚ್ಛತೆಯಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಮೆರೆಯಬೇಕು. ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಬೇಕು ಎಂದರು.
ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಸ್ವಚ್ಚತೆಯನ್ನು ಕಾಪಾಡಿಕೊಂಡರೆ ರೋಗ ರುಜುನಗಳಿಂದ ದೂರ ಇರಬಹುದು ಎಂಬುದು ಎಲ್ಲರಿಗೂ ೇತಿಳಿದಿದೆ. ಪ್ರತಿಯೊಬ್ಬರೂ ಪರಿಸರ ಶುಚಿಯಾಗಿಡುವಲ್ಲಿ ಕೈ ಜೋಡಿಸಬೇಕು. ಪ್ರತಿ ಪ್ರಜೆಗೂ ಪರಿಸರದ ಸ್ವಚ್ಛತೆ ಕಾಪಾಡಬೇಕಾದ ಅತಿದೊಡ್ಡ ಹೊಣೆ ಇದೆ ಎಂಬುದನ್ನು ಯಾರು ಮರೆಯಬಾರದು ಎಂದರು.ಪರಿಸರ ಪ್ರೇಮಿ ಹಗರೆ ಅಹಮದ್ ಮಾತನಾಡಿ, ಮನೆಯಲ್ಲಿಯೇ ಕಸವನ್ನು ವ್ಯವಸ್ಥಿತವಾಗಿ ಬೇರ್ಪಡಿಸಿ ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡುವ ಕುರಿತಂತೆ ಅರಿವು ಮೂಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯಾನಗರದಲ್ಲಿ ಕಸ ರಹಿತ ಮನೆಗಳನ್ನು ಕಾಣುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಕುವೆಂಪು ಯುವಕ ಸಂಘದ ಗಿರೀಶ್, ಸತೀಶ್, ಶ್ರೀನಿವಾಸ್, ಖಜಾಂಚಿ ಚೇತನ್ ಇತರರು ಹಾಜರಿದ್ದರು.