ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಪಂ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ 113 ವರ್ಷ ಇತಿಹಾಸ ಹೊಂದಿರುವ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮಾಜಿ ಸೈನಿಕರು, ಮಹಿಳೆಯರು ಮತ್ತು ಶಿಕ್ಷಕಿಯರಿಂದ 80ನೇ ವರ್ಷದ ಸ್ವಾತಂತ್ರೋತ್ಸವ ಅಂಗವಾಗಿ ಗುರುವಾರ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಪಂ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ 113 ವರ್ಷ ಇತಿಹಾಸ ಹೊಂದಿರುವ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮಾಜಿ ಸೈನಿಕರು, ಮಹಿಳೆಯರು ಮತ್ತು ಶಿಕ್ಷಕಿಯರಿಂದ 80ನೇ ವರ್ಷದ ಸ್ವಾತಂತ್ರೋತ್ಸವ ಅಂಗವಾಗಿ ಗುರುವಾರ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. 86 ವರ್ಷದ ಹಿರಿಯರಿಂದ ಹಿಡಿದು ಕಿರಿಯರು ಸೇರಿ ಉತ್ಸಾಹದಿಂದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಈ ಶಾಲೆಯನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಈ ವ್ಯಾಪ್ತಿಯ ಹಳೆ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿಯಿತು.
ಮುದ್ದಂಡ ತಿಮ್ಮಯ್ಯ, ನಾಣ್ಯಪ್ಪ, ಪಟ್ಟು ಸೋಮಯ್ಯ, ಓಡಿಯಂಡ ಶಿವಯ್ಯ, ಗೌಡಂಡ ಕಾರ್ಯಪ್ಪ, ತಂಬುಗುತ್ತೀರಾ ರೇಖಾ ಸೋಮಯ್ಯ, ನಾಪಂಡ ಸೈಲಾ ಶಿವಕುಮಾರ್, ಕುಂಬಾರ ಗಡಿಗೆ ಗ್ರಾಮದ ತೆಕ್ಕೆರ ತಮ್ಮಯ್ಯ, ಮಂಕ್ಯಾ ಗ್ರಾಮದ ಮೇದೂರ ಕಂಠೀ ನಾನ್ಯಪ್ಪ, ಮುಟ್ಲು ಗ್ರಾಮದ ಪುಡಿಯತಂಡ ಬೆಳ್ಳಿಯಪ್ಪ, ಮತ್ತು ರವಿ ಕೆ, ಉದಿಯಂಡ ಶಾರದ, ಬೋಟ್ಟುಳಂಡ ಭಾರತಿ ಮತ್ತಿತರರು ಉಪಸ್ಥಿತರಿದ್ದರು.