ಶಾಮನೂರಲ್ಲಿ ಸ್ವಚ್ಛತೆ, ಕಾಮಗಾರಿ ಪರಿಶೀಲಿಸಿದ ಪಾಲಿಕೆ ಆಡಳಿತ

| Published : Oct 24 2024, 12:53 AM IST

ಶಾಮನೂರಲ್ಲಿ ಸ್ವಚ್ಛತೆ, ಕಾಮಗಾರಿ ಪರಿಶೀಲಿಸಿದ ಪಾಲಿಕೆ ಆಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಮಂಗಳವಾರ ಬೆಳಗ್ಗೆ ನಗರದ 43ನೇ ವಾರ್ಡ್ ವ್ಯಾಪ್ತಿಯ ಶಾಮನೂರಿಗೆ ಭೇಟಿ ನೀಡಿದರು. ಸ್ಚಚ್ಛತೆ, ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ.

- ಮೇಯರ್‌, ಉಪ ಮೇಯರ್ ಭೇಟಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಮಂಗಳವಾರ ಬೆಳಗ್ಗೆ ನಗರದ 43ನೇ ವಾರ್ಡ್ ವ್ಯಾಪ್ತಿಯ ಶಾಮನೂರಿಗೆ ಭೇಟಿ ನೀಡಿದರು. ಸ್ಚಚ್ಛತೆ, ಕಾಮಗಾರಿಗಳ ವೀಕ್ಷಣೆ ಮಾಡಿದರು.

ಶಾಮನೂರಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಬೀದಿದೀಪಗಳ ಕೊರತೆ ಇರುವುದನ್ನು ಸ್ಥಳೀಯರು ಮೇಯರ್‌ ಗಮನಕ್ಕೆ ತಂದರು. ಆಗ ಮೇಯರ್‌ ಆದಷ್ಟು ಬೇಗನೆ ಬೀದಿದೀಪ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೆ.ಎಚ್. ಪಟೇಲ್ ಬಡಾವಣೆಯ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿ, ಕೆಲವು ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಕೇಂದ್ರದಲ್ಲಿ ನಡೆಯುವ ಗೊಬ್ಬರ ತಯಾರಿಕೆ ಕಲಿಕಾ ತರಬೇತಿ ವೀಕ್ಷಣೆ ಮಾಡಿದರು. ನಂತರ ರಾಸ್ತ ಡಾಬಾ ಬಳಿ ಮಳೆಯಿಂದ ಚರಂಡಿ ಬ್ಲಾಕ್ ಆಗಿ ಅವ್ಯವಸ್ಥೆ ಉಂಟಾಗಿದ್ದರಿಂದ ಚರಂಡಿಯನ್ನು ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ, ವಾರ್ಡಿನ ಪಾಲಿಕೆ ಸದಸ್ಯರಾದ ರುದ್ರೇಶ್, ಪಾಲಿಕೆ ಸದಸ್ಯ ಗಡಿಗುಡಾಳ ಮಂಜುನಾಥ, ಉಪ ಆಯುಕ್ತ ಕೆ.ನಾಗರಾಜ, ಪಾಲಿಕೆ ಪರಿಸರ ಎಂಜಿನಿಯರ್ ಬಸವಣ್ಣ, ನೀರು ಮತ್ತು ಒಳಚರಂಡಿ ವಿಭಾಗದ ಎಇಇ ವಿನಾಯಕ್ ಮತ್ತು ಎಇಇ ಪ್ರವೀಣ್, ಪಾಲಿಕೆ ಆರೋಗ್ಯ ನಿರೀಕ್ಷಕ ಹರೀಶ್ ಇತರರು ಇದ್ದರು. -22ಕೆಡಿವಿಜಿ32, 33ಃ: ದಾವಣಗೆರೆಯಲ್ಲಿ ಮಂಗಳವಾರ ಮೇಯರ್ ಸಿಟಿ ರೌಂಡ್ಸ್ ನಡೆಸುವ ಮೂಲಕ ಸ್ವಚ್ಛತೆ, ಕಾಮಗಾರಿಗಳ ಕುರಿತು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.

- - - ಬಾಕ್ಸ್‌

* ಮೂಲಸೌಲಭ್ಯ ಕಲ್ಪಿಸಲು ನಾಗರಿಕ ಹಿತರಕ್ಷಣಾ ಸಮಿತಿ ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಜೆ.ಎಚ್.ಪಟೇಲ್ ಬಡಾವಣೆಗೆ ಮಂಗಳವಾರ ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್‌ಸಾಬ್ ಹಾಗೂ ಉಪ ಮೇಯರ್ ಸೋಗಿ ಶಾಂತಕುಮಾರ ಭೇಟಿ ನೀಡಿ ಬಡಾವಣೆಯ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭ ಬಡಾವಣೆಯಲ್ಲಿ ಮೂಲ ಸೌಕರ್ಯಗಳಾದ ಪಾರ್ಕ್ ಅಭಿವೃದ್ಧಿ ಮತ್ತು ಬೀದಿದೀಪಗಳ ಅವ್ಯವಸ್ಥೆ ಸರಿಪಡಿಸಿ, ಸೂಕ್ತ ನಿರ್ವಹಣೆ ಕೈಗೊಳ್ಳಬೇಕು. ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ನಾಗರಿಕರಿಗೆ ವಿದ್ಯುತ್ ಟ್ರಾನ್ಸಫಾರ್ಮರ್ ಅಳವಡಿಸಲು ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಮೇಯರ್ ಕೆ.ಚಮನ್‌ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ ಹಾಗೂ ಪಾಲಿಕೆ ನಾಮನಿರ್ದೇಶಕ ಸದಸ್ಯ ಕಲ್ಲಳ್ಳಿ ರುದ್ರೇಶ್, ಪಾಲಿಕೆ ವಲಯ-3 ರ ಆಯುಕ್ತ ನೌಕರ ನಾಗರಾಜ್‌ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ನಾಗರಿಕ ಹಿತರಕ್ಷಣಾ ಸಮಿತಿಯ ಪ್ರೊ. ಕೆ.ಎಸ್.ಎನ್. ರಾವ್, ಹೆಬ್ಬಾಳ್ ರಾಜಯೋಗಿ, ಕೇರಂ ಗಣೇಶ್, ಎ.ಎಚ್. ಹನುಮಂತಪ್ಪ, ಗುರುಬಸವರಾಜ, ಸತ್ಯಪ್ರಕಾಶ್, ಶ್ರೀಕಾಂತ್, ರವೀಂದ್ರಪ್ಪ ಮೇಸ್ಟ್ರು, ಆಡಿಟರ್ ಸುನೀಲ್, ಸುರೇಶ್‌ ಸ್ವಾಮಿ, ಬಿ.ಜಿ.ಆನಂದ, ವಿರೂಪಾಕ್ಷಪ್ಪ ನಾರಪ್ಪನವರ್, ಮಾಗಾನಹಳ್ಳಿ ಪ್ರವೀಣ್, ನಾಗರಾಜ, ನಾಗೇಂದ್ರಾಚಾರ್, ಎಸ್.ಎಸ್. ಬಸವರಾಜ, ಶಿವಕುಮಾರ, ಕುಂಟೋಜಿ ಬಸವರಾಜ, ವಲಯ-3 ಕಂದಾಯ ಅಧಿಕಾರಿ ಕೃಷ್ಣ, ಅಜಯಕುಮಾರ್, ಕರ ವಸೂಲಿಗಾರ ಮಹೇಂದ್ರ ಮತ್ತಿತರರು ಭಾಗವಹಿಸಿದ್ದರು.

- - - -22ಕೆಡಿವಿಜಿ31ಃ: ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಮೇಯರ್, ಉಪಮೇಯರ್‌ ಅವರನ್ನು ಸನ್ಮಾನಿಸಲಾಯಿತು.