ಸಾರಾಂಶ
ಪಟ್ಟಣದ 8ನೇ ವಾರ್ಡಿನಲ್ಲಿ ಕಸ ಸಂಗ್ರಹದ ಬುಟ್ಟಿಗಳ ವಿತರಣೆ
ಕನ್ನಡಪ್ರಭ ವಾರ್ತೆ, ಕಡೂರುಕಸ ಮುಕ್ತ ಪಟ್ಟಣ ಮಾಡುವ ನಿಟ್ಟಲ್ಲಿ ಸ್ವಚ್ಛ ಭಾರತ ಮೆಷಿನ್ ನಿಂದ 23 ವಾರ್ಡುಗಳ ನಿವಾಸಿಗಳಿಗೆ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಸಂಗ್ರಹ ಮಾಡಲು ಬುಟ್ಟಿಗಳನ್ನು ವಿತರಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಪಟ್ಟಣದ 8ನೇ ವಾರ್ಡಿನಲ್ಲಿ ವಾರ್ಡಿನ ನಿವಾಸಿಗಳಿಗೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಕಸ ಸಂಗ್ರಹದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದರು. ಕೇಂದ್ರ ಸರಕಾರದ ಸ್ವಚ್ಚಭಾರತ್ ಯೋಜನೆಯಲ್ಲಿ ಈ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿ ಮನೆಗೆ ಕಸ ಸಂಗ್ರಹದ ಬುಟ್ಟಿಗಳನ್ನು ನೀಡಲಾಗುತ್ತಿದೆ. ರಾಜ್ಯ ಸರಕಾರ ಯೋಜನೆ ಅನುಷ್ಟಾನಕ್ಕೆ ಕೈ ಜೋಡಿ ಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 23 ವಾರ್ಡುಗಳಿರುವ ಕಡೂರು ಪಟ್ಟಣಕ್ಕೆ 17 ಸಾವಿರ ಬುಟ್ಟಿಗಳನ್ನು ವಿತರಿಸಲಾಗಿದೆ. 15ನೇ ಹಣಕಾಸಿನಲ್ಲಿ 2500 ಮತ್ತು ಪುರಸಭೆ ನಿಧಿಯಿಂದಲೂ 2500 ಬುಟ್ಟಿಗಳನ್ನು ನೀಡಲಾಗುತ್ತಿದೆ ಎಂದರು.
ಪಟ್ಟಣದಲ್ಲಿ ಇದುವರೆಗೆ ಶೇ 90 ರಷ್ಟು ವಿತರಣೆ ಆಗಿದ್ದು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಸ್ವಚ್ಛತೆ ಹಾಗೂ ಜನರ ಆರೋಗ್ಯಕ್ಕೆ ತೊಂದರೆ ಆಗುತ್ತಿದೆ. ಈ ನಿಟ್ಟಲ್ಲಿ ಜನರು ಎರಡು ರೀತಿ ಕಸ ಸಂಗ್ರಹಿಸಿ ಬೆಳಿಗ್ಗೆ ಬರುವ ಪುರಸಭೆ ವಾಹನ ಗಳಿಗೆ ನೀಡಬೇಕು. ಪಟ್ಟಣವನ್ನು ಕಸಮುಕ್ತ ಮತ್ತು ಸ್ವಚ್ಛ ಪಟ್ಟಣವಾಗಿಸಲು ಪುರಸಭೆಯಿಂದ ಕ್ರಮ ಕೈಗೂಳ್ಳಲಾಗಿದೆ ಎಂದರು. ಕಸ ಬೇರ್ಪಡಿಸಿ ಹಾಕಿದರೆ ಅದನ್ನು ವಿಲೇವಾರಿ ಘಟಕದಲ್ಲಿ ಕಸವನ್ನು ಗೊಬ್ಬರ ಮಾಡಲು ಅನುಕೂಲವಾಗುತ್ತದೆ. ಪಟ್ಟಣದ ನಾಗರಿಕರು ಸ್ವಚ್ಛತೆಗೆ ಪುರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ಕೋರಿದರು.ಇದು ಸಾವರ್ಜನಿಕರು ಕೈ ಜೋಡಿಸುವುದರಿಂದ ಇದು ಸಾಧ್ಯವಾಗಲಿದ್ದು ಕೇವಲ ಪುರಸಭೆ ಮತ್ತು ಅಧಿಕಾರಿಗಳಿಂದ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತು ಸಹಕಾರ ನೀಡಬೇಕು.ಹೆಚ್ಚು ಕಸ ಸಂಗ್ರಹವಾಗುವ ಸ್ಥಳಗಳಲ್ಲಿ ದೊಡ್ಡದಾದ 10 ಕಸ ಸಂಗ್ರಹದ ಬುಟ್ಟಿಗಳನ್ನು ನೀಡಲಾಗುತ್ತಿದೆ. ಅಲ್ಲದೆ ನಮ್ಮ ಅಧಿಕಾರದ ಅವಧಿಯಲ್ಲಿ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ನಮ್ಮ ಈ ಶ್ರಮಕ್ಕೆ ನಮ್ಮ ಅಧಿಕಾರಿ ಸಿಬ್ಬಂದಿ ಕೈ ಜೋಡಿಸಿ ಕೆಲಸ ಮಾಡುತಿದ್ದಾರೆ ಎಂದರು. ಪುರಸಭೆ ನಿ. ವ್ಯವಸ್ಥಾಪಕ ಮರಿಯಪ್ಪ, ಇಂಜಿನಿಯರ್ ಶ್ರೇಯಸ್ ಕುಮಾರ್, ಪುರಸಭೆ ಮಾಜಿ ಉಪಾಧ್ಯಕ್ಷ ಚಿನ್ನರಾಜು, ಅಧಿಕಾರಿಗಳಾದ ಶ್ರೀನಿವಾಸಮೂರ್ತಿ, ಭಂಡಾರಿ ಬಸವರಾಜು ಸೇರಿದಂತೆ ವಾರ್ಡಿನ ನಿವಾಸಿಗಳು ಇದ್ದರು.
1ಕೆಕೆಡಿಯು1ಪಟ್ಟಣದ 8 ನೇ ವಾರ್ಡಿನ ನಿವಾಸಿಗಳಿಗೆ ಕಸ ಸಂಗ್ರಹದ ಬುಟ್ಟಿಗಳನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ವಿತರಿಸಿದರು.