ಸಾರಾಂಶ
ಕಲ್ಲುಮೊಟ್ಟೆ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಶ್ರಮದಾನ ಮಾಡಲಾಯಿತು. ನಾಪೋಕ್ಲು ಶೌರ್ಯ ಘಟಕದ ವತಿಯಿಂದ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕಲ್ಲುಮೊಟ್ಟೆ ಹಿಂದೂ ರುದ್ರಭೂಮಿಯಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಾಹಣ ಘಟಕದ ವತಿಯಿಂದ ಸೋಮವಾರ ಸ್ವಚ್ಛತಾ ಶ್ರಮದಾನ ಮಾಡಲಾಯಿತು.ಸೇವೆಯಲ್ಲಿ ಶೌರ್ಯ ಮಾಸ್ಟರ್ ದಿವ್ಯ ಬಾಳೆಯಡ, ಸೀನ ಮಾಧವನ್, ದಿಲಿಶ್, ಶಂಕರ್, ಶರವಣ, ಶ್ಯಾಮಲಾ, ಚಂದ್ರಕಲಾ ಹಾಜರಿದ್ದರು.
---------------------------------------------ಇಂದು ವಿದ್ಯುತ್ ವ್ಯತ್ಯಯಮಡಿಕೇರಿ : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಮತ್ತು ಎಫ್5 ಜಿ.ಟಿ ರಸ್ತೆ ಪೀಡರ್ ಮಾರ್ಗಗಳಲ್ಲಿ ಅಕ್ಟೋಬರ್ 08 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ದಸರಾ ಹಬ್ಬದ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಮೈಸೂರು ರಸ್ತೆ, ಮಂಗಳಾದೇವಿನಗರ, ಪುಟಾಣಿನಗರ, ಜಲಾಶಯ ಬಡಾವಣೆ, ದೇಚೂರು, ಚೈನ್‌ಗೇಟ್, ಅರಣ್ಯಭವನ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.