ಸಾರಾಂಶ
ದಾವಣಗೆರೆ ಮಹಾನಗರ ಪಾಲಿಕೆ ಮೌನ ವಹಿಸಿರುವುದು ಕರವೇ ಸಹಿಸುವುದಿಲ್ಲ. ತಕ್ಷಣ ಆಂಗ್ಲ ನಾಮಫಲಕಗಳ ಹಾಗೂ ಜಾಹೀರಾತು ಫಲಕಗಳ ಕಿತ್ತು ಹಾಕುವಂತೆ ಕರವೇ ಒತ್ತಾಯಿಸುತ್ತದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಂಗಡಿಯ ಅಥವಾ ಸಂಸ್ಥೆಯ ಮಾಲೀಕರು ಹಾಕುವ ಬೋರ್ಡಿನ ಅನುಸಾರ ಶೇ.60ರಷ್ಟು ದೊಡ್ಡದಾಗಿ ಕನ್ನಡದ ನಾಮಫಲಕಗಳ ಹಾಕಬೇಕೆಂದು ಆದೇಶಿಸಿದ್ದರೂ ಈ ವರೆಗೂ ಕ್ರಮ ಕೈಗೊಳ್ಳದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಮಂಗಳವಾರ ಮಹಾನಗರ ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟು ನಗರ ಪಾಲಿಕೆಯ ಆರೋಗ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಿ ಪ್ರತಿಭಟಿಸಲಾಯಿತು.ನಾಮಫಲಕ ಉಸ್ತುವಾರಿಯಾದ ಪಾಲಿಕೆ ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಮನವಿ ಸ್ವೀಕರಿಸಿ ಒಂದು ವಾರ ಸಮಯ ಕೊಡಿ ಎಲ್ಲಾ ಆಗ ನಾಮಫಲಕಗಳ ತೆರವುಗೊಳಿಸುತ್ತೇವೆ ಎಂದು ತಿಳಿಸಿದರು. ಇದಕ್ಕೆ ಒಪ್ಪದ ಕರವೇ ಅಧ್ಯಕ್ಷ ಎಂ.ಎಸ್.ರಾಮೇಗೌಡ, ಮಾ.10 ರೊಳಗಾಗಿ ಎಲ್ಲ ನಾಮ ಫಲಕಗಳ ಜಾಹೀರಾತು ಫಲಕಗಳ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು ಇಲ್ಲವಾದರೆ ಅಂದು ಸಂಜೆ 5 ಗಂಟೆಗೆ ಮತ್ತೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ ಎಚ್ಚರಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಮೌನ ವಹಿಸಿರುವುದು ಕರವೇ ಸಹಿಸುವುದಿಲ್ಲ. ತಕ್ಷಣ ಆಂಗ್ಲ ನಾಮಫಲಕಗಳ ಹಾಗೂ ಜಾಹೀರಾತು ಫಲಕಗಳ ಕಿತ್ತು ಹಾಕುವಂತೆ ಕರವೇ ಒತ್ತಾಯಿಸುತ್ತದೆ. ಸರ್ಕಾರ ಮಾ.13ರ ಒಳಗಾಗಿ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂದು ಆದೇಶಿಸಿದೆ. ಆದರೆ ಮಹಾನಗರ ಪಾಲಿಕೆ ಮಹಾಪೌರ ರಾಗಲಿ, ಆಯುಕ್ತ ರಾಗಲಿ ಯಾವುದೇ ಸಭೆ ಕರೆದಿಲ್ಲ. ತಕ್ಷಣ ಸಭೆ ನಡೆಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕ ಅಧ್ಯಕ್ಷೆ ಬಸಮ್ಮ ಹರಿಹರ ತಾಲೂಕ ಅಧ್ಯಕ್ಷೆ ನೇತ್ರಾವತಿ. ಮಾಲಾ, ಡಿ.ಮಲ್ಲಿಕಾರ್ಜುನ, ಗೋಪಾಲ್ ದೇವರಮನಿ, ಎನ್.ಟಿ.ಹನುಮಂತಪ್ಪ, ಜಿಎಸ್.ಸಂತೋಷ್, ಜಬಿವುಲ್ಲಾ, ರಫೀಕ್. ಖಾದರ್ ಭಾಷಾ, ರವಿಕುಮಾರ್, ರಾಜೇಶ್, ಶಶಿಕುಮಾರ, ಮಹಾಂತೇಶ, ಸುರೇಶ್, ಮುನ್ನ , ರುದ್ರಗೌಡರು, ಅಮಾನುಲ್ಲಾ ಖಾನ್, ಮುಸ್ತಫ, ಮುಸ್ರಾಫ್, ರಾಘವೇಂದ್ರ , ವಿನಯ್, ಮಂಜು, ಚಂದ್ರು, ಕರಿಯಪ್ಪ, ತುಳಸಿರಾಮ್, ಕರಿಬಸಪ್ಪ, ರಾಜೇಶ್, ದಾದಾಪೀರ್ ಇತರರಿದ್ದರು.