ರಾಮನಾಥಪುರದಲ್ಲಿ ಗೂಡಂಗಡಿಗಳ ತೆರವು

| Published : Dec 02 2024, 01:16 AM IST

ಸಾರಾಂಶ

ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಮಣ್ಯಸ್ವಾಮಿ ಮಹಾರಥೋತ್ಸವ ಡಿಸೆಂಬರ್ 7ರಂದು ಶನಿವಾರ ನಡೆಯುವುದರಿಂದ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಹಾಕಿಕೊಂಡಿದ್ದ ಗೂಡಂಗಡಿಗಳನ್ನು ತೆರವು ಮಾಡಿಸಿ ಮತ್ತೆ ಅದೇ ಜಾಗದಲ್ಲಿ ಉತ್ತಮ ರೀತಿಯಲ್ಲಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಹೇಳಿದರು. ಶ್ರೀ ಸುಬ್ರಮಣ್ಯೇಶ್ವರಸ್ವಾಮಿ, ಅಗಸ್ಥೇಶ್ವರಸ್ವಾಮಿ ಮುಂತಾದ ದೇವಾಲಯಗಳ ಅಕ್ಕಪಕ್ಕದಲ್ಲಿ ಇಷ್ಟ ಬಂದಂತೆ ಸ್ವಚ್ಛತೆ ಇಲ್ಲದೆ ಕಟ್ಟಿಕೊಂಡಿದ್ದ ಗೂಡಂಗಡಿಗಳನ್ನು ತೆರವು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಲ್ಲಿಯ ಶ್ರೀ ಸುಬ್ರಮಣ್ಯೇಶ್ವರಸ್ವಾಮಿ, ಅಗಸ್ಥೇಶ್ವರಸ್ವಾಮಿ ಮುಂತಾದ ದೇವಾಲಯಗಳ ಅಕ್ಕಪಕ್ಕದಲ್ಲಿ ಇಷ್ಟ ಬಂದಂತೆ ಸ್ವಚ್ಛತೆ ಇಲ್ಲದೆ ಕಟ್ಟಿಕೊಂಡಿದ್ದ ಗೂಡಂಗಡಿಗಳನ್ನು ತೆರವು ಮಾಡಲಾಯಿತು. ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಮಣ್ಯಸ್ವಾಮಿ ಮಹಾರಥೋತ್ಸವ ಡಿಸೆಂಬರ್ 7ರಂದು ಶನಿವಾರ ನಡೆಯುವುದರಿಂದ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಹಾಕಿಕೊಂಡಿದ್ದ ಗೂಡಂಗಡಿಗಳನ್ನು ತೆರವು ಮಾಡಿಸಿ ಮತ್ತೆ ಅದೇ ಜಾಗದಲ್ಲಿ ಉತ್ತಮ ರೀತಿಯಲ್ಲಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಶೌಚಾಲಯಗಳ ಸ್ವಚ್ಛತೆ, ಹಾಗೂ ಕಾವೇರಿ ನದಿಯ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಬರುವ ರಸ್ತೆ ಅಗಸ್ಥೇಶ್ವರಸ್ವಾಮಿ ಬರುವ ರಸ್ತೆ ಹಾಗೂ ರಾಮೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಕಾವೇರಿ ನದಿ ವಹ್ನಿ ಪುಷ್ಕರಣಿಯಲ್ಲಿರುವ ಮೆಟ್ಟಿಲುಗಳ ಸ್ವಚ್ಛತೆ ಹಾಗೂ ಮೆಟ್ಟಲುಗಳಿಗೆ ಬಣ್ಣ ಹಾಕುವುದು ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ವಚ್ಛತೆ ಮಾಡಲಾಗಿದೆ. ಅಲ್ಲದೆ ರಾಮನಾಥಪುರದ ಪಟ್ಟಣದ ಪ್ರತಿ ಬೀದಿಗಳು ಹಾಗೂ ದೇವಾಲಯಗಳು ಸುತ್ತ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ಗ್ರಾಮದ ನೈರ್ಮಲ್ಯ, ಸ್ವಚ್ಛತೆ ಕುಡಿಯುವ ನೀರು ಮುಂತಾದ ವ್ಯವಸ್ಥೆಯನ್ನು ಬರುವ ಭಕ್ತರಿಗೆ ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವನಕುಮಾರಿ, ಉಪಾಧ್ಯಕ್ಷ ಮಾದೇಶ್, ಕಾರ್ಯದರ್ಶಿ ರೇವಣ್ಣ, ಸದಸ್ಯರಾದ ಮೋಹನ್, ಸುನೀಲ್ ಮುಂತಾದವರು ಇದ್ದರು.