ಸಾರಾಂಶ
- ಮುಖದ ಅವಲಕ್ಷಣ ಇರುವ ಮಕ್ಕಳ ಉಚಿತ ಅರೋಗ್ಯ ಶಿಬಿರ ಉದ್ಘಾಟನೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಎಲ್ಲ ಶಾಲೆಯಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳ ಆರೋಗ್ಯ ತಪಾಸಣೆ ಕೈಗೊಂಡು ಮಕ್ಕಳ ತಂದೆ ತಾಯಿಯರಿಗೆ ಈ ಸೀಳು ತುಟಿ ಮತ್ತು ಸೀಳು ಅಂಗಳ ಹಾಗೂ ಮುಖದ ಅವಲಕ್ಷಣ ಇರುವ ಮಕ್ಕಳ ಶಸ್ತç ಚಿಕಿತ್ಸೆ ಲಾಭವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಶ ಬಿರಾದರ ಅವರು ಹೇಳಿದರು.ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ, ಬುಧವಾರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಇಂಗಾ ಹೆಲ್ತ್ ಫೌಂಡೇಷನ ಸಂಯೋಜನೆಯಲ್ಲಿ ಸೀಳು ತುಟಿ ಮತ್ತು ಸೀಳು ಅಂಗಳ ಹಾಗೂ ಮುಖದ ಅವಲಕ್ಷಣ ಇರುವ ಮಕ್ಕಳ ಉಚಿತ ಅರೋಗ್ಯ ಶಿಬಿರವನ್ನು ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ, ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿ ಮಕ್ಕಳಲ್ಲಿ ನೂನ್ಯತೆ ಕಂಡು ಬಂದಂತಹ ಮಕ್ಕಳಿಗೆ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ ಯಾದಗಿರಿ ಇಲ್ಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗುವದು, ಸೀಳು ತುಟಿ ಮತ್ತು ಸೀಳು ಅಂಗಳ ಹಾಗೂ ಮುಖದ ಅವಲಕ್ಷಣ ಇರುವ ಮಕ್ಕಳ ಉಚಿತ ಆರೋಗ್ಯ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.2023-24ನೇ ಸಾಲಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 18ನೇ ತಾರೀಖಿನಂದು ಉಚಿತ ಆರೋಗ್ಯ ಶಿಬಿರದಲ್ಲಿ ಒಟ್ಟು 1465 ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದಲ್ಲಿ ದೊರೆಯುವ ಸೇವೆಗಳು ಮಕ್ಕಳ ತಜ್ಞರ ಸೇವೆಗಳು, ಶ್ರವಣ ತಪಾಸಣಾ ಸೇವೆಗಳು, ಭೌತಿಕ ಸೇವೆಗಳು, ಮನೋಶಾಸ್ತ್ರ ಸೇವೆಗಳು, ವಿಶೇಷ ಶಿಕ್ಷಣ ಸೇವೆಗಳು, ನೇತ್ರ ತಪಾಸಣಾ ಸೇವೆಗಳು ಉಚಿತ ಸೀಳು ತುಟಿ ಮತ್ತು ಸೀಳು ಅಂಗಳ ಹಾಗೂ ಮುಖದ ಅವಲಕ್ಷಣ ಶಿಬಿರದಲ್ಲಿ ಒಟ್ಟು 20 ಮಕ್ಕಳು ಹಾಜರಾಗಿದ್ದು ಅದರಲ್ಲಿ 14 ಮಕ್ಕಳು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂತಾನೋತ್ಪತ್ತಿ ಅಧಿಕಾರಿಗಳಾದ ಡಾ.ಮಲ್ಲಪ್ಪ.ಕೆ. ನಾಯ್ಕಲ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರಿಜ್ವಾನ ಆಫ್ರೀನ್, ಯಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗ ಮುಖ್ಯಸ್ಥರಾದ ಡಾ. ಕುಮಾರ ಅಂಗಡಿ ಮಾತನಾಡಿದರು.ಶಿಬಿರದಲ್ಲಿ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದ ಮಕ್ಕಳ ತಜ್ಞರಾದ ಡಾ.ಗುರುರಾಜ ಮನೋಹರ ಪಾಟೀಲ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಶಿವಲಿಂಗಪ್ಪ, ಜಿಲ್ಲೆಯ ಎಲ್ಲಾ ಆರ್.ಬಿ.ಎಸ್.ಕೆ ತಂಡದ ವೈದ್ಯಾಧಿಕಾರಿಗಳು, ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದ ವ್ಯವಸ್ಥಾಪಕರು, ಸಿಬ್ಬಂದಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
---5ವೈಡಿಆರ್2 : ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಯಾದಗಿರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಇಂಗಾ ಹೆಲ್ತ್ ಫೌಂಡೇಷನ ಸಂಯೋಜನೆಯಲ್ಲಿ ಸೀಳು ತುಟಿ ಮತ್ತು ಸೀಳು ಅಂಗಳ ಹಾಗೂ ಮುಖದ ಅವಲಕ್ಷಣ ಇರುವ ಮಕ್ಕಳ ಉಚಿತ ಅರೋಗ್ಯ ಶಿಬಿರ ಆಯೋಜಿಸಲಾಗಿತ್ತು.