ಸಾರಾಂಶ
ಬಳ್ಳಾರಿ: ಇಲ್ಲಿನ ಲಯನ್ಸ್ ಕ್ಲಬ್‌ನಿಂದ ಮಕ್ಕಳಿಗಾಗಿ ಉಚಿತ ಸೀಳುತುಟಿ ಹಾಗೂ ಸೀಳು ಅಂಗುಳ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾ.24 ರಂದು ನಗರದ ಕಪ್ಪಗಲ್ ರಸ್ತೆಯ ಲಯನ್ಸ್ ಕ್ಲಬ್ ನಲ್ಲಿ ತಪಾಸಣೆ ಕಾರ್ಯ ನಡೆಯಲಿದೆ ಎಂದು ಕ್ಲಬ್ ನ ಅಧ್ಯಕ್ಷ ಸಿದ್ದರಾಮೇಶ್ವರ ಗೌಡ ಕರೂರು ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ನಿಂದ ಕಳೆದ 2004ರಿಂದಲೂ ಉಚಿತ ಸೀಳುತುಟಿ ಹಾಗೂ ಸೀಳು ಅಂಗುಳ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು,ಈವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ಎಂದಿನಂತೆ ಶಿಬಿರವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಚಿಕಿತ್ಸೆಯ ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸೀಳುತುಟಿ, ಸೀಳುನಾಲಿಗೆಯ ಮಕ್ಕಳು ಕಂಡು ಬಂದಲ್ಲಿ ಸಾರ್ವಜನಿಕರು ಶಿಬಿರಕ್ಕೆ ಕಳಿಸಿಕೊಡಬೇಕು ಎಂದು ಮನವಿ ಮಾಡಿದರು.ಮಾ.24ರಂದು ಬಳ್ಳಾರಿಯ ಲಯನ್ಸ್ ಕ್ಲಬ್ ನಲ್ಲಿ ನಡೆಯುವ ಸ್ಕ್ರೀನಿಂಗ್ ಕಾರ್ಯದಲ್ಲಿ 10ಕ್ಕೂ ಹೆಚ್ಚು ತಜ್ಞ ವೈದ್ಯರು ಪಾಲ್ಗೊಂಡು ತಪಾಸಣೆ ನಡೆಸುವರು. ಆಯ್ಕೆಗೊಳ್ಳುವ ಮಕ್ಕಳನ್ನು ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಳಿಸಿಕೊಡಲಾಗುವುದು. ಎಲ್ಲ ವೆಚ್ಚವನ್ನು ಕ್ಲಬ್ ಭರಿಸಲಿದೆ. ಚಿಕಿತ್ಸೆಗೆ ಯಾವುದೇ ಪ್ರದೇಶ ನಿರ್ದಿಷ್ಟಗೊಳಿಸಲಾಗಿಲ್ಲ. ದೇಶದ ಯಾವುದೇ ಭಾಗದವರಾದರೂ ಬಂದು ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದು ಹೇಳಿದರು.ಸೀಳುತುಟಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ 9480569117 ಗೆ ಕರೆ ಮಾಡಬಹುದು ಎಂದರು.
ಕ್ಲಬ್ ನ ಕಾರ್ಯದರ್ಶಿ ಕಲ್ಯಾಣ ಚಕ್ರವರ್ತಿ, ಖಜಾಂಚಿ ಕಲ್ಲುಕಂಬ ಎರಿಸ್ವಾಮಿ, ರಾಜಶೇಖರ, ಎರಿಸ್ವಾಮಿ, ರವಿ ದೇಸಾಯಿ, ಮಕ್ಕಳ ತಜ್ಞ ಡಾ.ಅಜಯ್, ಡಾ.ಗಡ್ಡಿ ದಿವಾಕರ, ಬಂಗಾರ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.