ಭಾನುವಾರ, ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಯುಟಿ ಖಾದರ್ರ್ ಮಾತನಾಡಿದರು.
ಬೆಳ್ತಂಗಡಿ: ತಾಳ್ಮೆಯ ಮೂಲಕ ನಾವು ಪಡೆಯುವ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಿರಿಯರು ಸಹಿಸಿದ ತ್ಯಾಗ ಮತ್ತು ತಾಳ್ಮೆಯನ್ನು ಯುವಜನತೆ ಅರಿತು ಬಾಳಬೇಕು ಎಂದು ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಹೇಳಿದರು.ಭಾನುವಾರ, ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಧಾರ್ಮಿಕ ನಂಬಿಕೆಗಳು ದೌರ್ಬಲ್ಯ ಅಲ್ಲ. ಅದು ನಮ್ಮ ಮಣ್ಣಿನ ಶಕ್ತಿ. ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬರಿಗೆ ನೋವು ತರುವ, ಗಾಯ ಮಾಡುವ ಕತ್ತಿಯಾಗಬಾರದು ಎಂದರು.
ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ಮಾತನಾಡಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ನಮ್ಮ ಶಕ್ತಿಯಾಬೇಕು ಎಂದರು.ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿ, ದೌರ್ಜನ್ಯ, ನ್ಯಾಯ ನಿರಾಕರಣೆ ಇದು ಪ್ರವಾದಿಯವರ ಕಾಲಘಟ್ಟದಿಂದಲೂ ನಮ್ಮ ಮೇಲೆ ಪರೀಕ್ಷೆಗಾಳಾಗಿದ್ದು ಅದನ್ನು ಮೀರಿ ಬೆಳೆದ ಸಮುದಾಯ ಈ ಮುಸ್ಲಿಂ ಸಮುದಾಯ ಎಂದರು.ಶಿಕ್ಷಣ ತಜ್ಞ ಡಾ. ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಸಖಾಫಿ ಮಾತನಾಡಿ, ನೈತಿಕ ಪ್ರಗತಿ ಬಹುಮುಖ್ಯವಾದುದು ಎಂದರು.ವಿದ್ವಾಂಸ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ಮತೀಯತೆ ಮತ್ತು ಮಾದಕತೆ ಬಹುಬೇಗ ಪಸರಿಸುತ್ತಿದೆ. ಈಬಗ್ಗೆ ಎಚ್ಚರ ವಹಿಸಿ ಎಂದರು.ವಕ್ಫ್ ನಿಕಟ ಪೂರ್ವಾಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ನೆರವೇರಿಸಿದರು. ಮಾಜಿ ಸಚಿವ ಬಿ ರಾಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್, ಮಾಜಿ ಶಾಸಕ ಮೊಯಿದಿನ್ ಬಾವಾ, ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಮಾತನಾಡಿದರು.ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ವಹಿಸಿ ವಿಶೇಷ ದುಆ ಪ್ರಾರ್ಥನೆ ನಡೆಸಿಕೊಟ್ಟರು.
ಅಬ್ದುಲ್ ಕರೀಂ ಗೇರುಕಟ್ಟೆ, ಯು.ಕೆ ಮುಹಮ್ಮದ್ ಹನೀಫ್, ಸುಲ್ತಾನ್ ಗೋಲ್ಡ್‌ನ ಅಬ್ದುಲ್ ರವೂಫ್ ಹಾಜಿ, ಇಸ್ಮಾಯಿಲ್ ಶಾಫಿ ಮುಳಪಟ್ಣ, ಅಕ್ಬರ್ ಬೆಳ್ತಂಗಡಿ, ಅಶ್ರಫ್ ಕಿನಾರ, ನೂರುದ್ದೀನ್ ಸಾಲ್ಮರ, ಅಬ್ದುಲ್ ರಝಾಕ್ ಮಂಚಿ, ಬದ್ರುದ್ದೀನ್ ಹರೇಕಳ, ಮೋನು ಉಳ್ಳಾಲ, ಅಬ್ದುಲ್ ಖಾದರ್ ಬಿಜೂರು, ಮುಸ್ತಫ ರೂಬಿ, ಮುಕುಂದ ಸುವರ್ಣ, ಅಬೂಬಕ್ಕರ್ ಹಾಜಿ ನೇಜಾರು, ಡಾ. ಉಮರ್ ಬೀಜದಕಟ್ಟೆ, ಕೆ.ಎಂ ಅಬ್ಬಾಸ್, ಶಮೀಮ್ ಯೂಸುಫ್ ಹಾಜಿ ಮದ್ದಡ್ಕ, ಎಚ್ ಮುಹಮ್ಮದ್ ವೇಣೂರು, ಕೆ.ಯು ಉಮರ್ ಸಖಾಫಿ, ಅಬ್ದುರ್ರಹ್ಮಾನ್ ಬಾಖವಿ , ಕೆ ಶೇಖಬ್ಬ , ಯೂಸುಫ್ ಶರೀಫ್, ಕೆ.ಯು ಮುಹಮ್ಮದ್ ಸಖಾಫಿ, ಇಬ್ರಾಹಿಂ ಮದನಿ, ಅಬ್ದುಶ್ಶುಕೂರ್ ಉಜಿರೆ, ವಝೀರ್ ಬಂಗಾಡಿ, ಮೊದಲಾದವರು ಉಪಸ್ಥಿತರಿದ್ದರು.ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಕೋಶಾಧಿಕಾರಿ ಡಿ.ವೈ ಉಮರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಹಿರಿಯ ಸದಸ್ಯರಾದ ಅಬೂಬಕ್ಕರ್ ಮಲ್ಲಿಗೆಮನೆ ಮತ್ತು ಬದ್ರುದ್ದೀನ್ ಕಾಜೂರು, ಬಶೀರ್ ಅಹ್ಸನಿ ಮೊದಲಾದವರು ವೇದಿಕೆಯಲ್ಲಿದ್ದರು.ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.