ಕ್ಲಸ್ಟರ್ ಮಟ್ಟದ ಶೈಕ್ಷಣಿಕ, ವಿಜ್ಞಾನ ವಸ್ತುಪ್ರದರ್ಶನ

| Published : Dec 21 2024, 01:17 AM IST

ಸಾರಾಂಶ

ಈ ವಸ್ತುಪ್ರದರ್ಶನಲ್ಲಿ ವೀಕ್ಷಣೆಗೆ ಇಡಲಾಗಿದ್ದ ಮಾದರಿಗಳಲ್ಲಿ 36 ಮಾದರಿಗಳು ಜನವರಿಯಲ್ಲಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಶೈಕ್ಷಣಿಕ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮೇಟಗಳ್ಳಿಯ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರಸ್ವತಿಪುರಂ ಕ್ಲಸ್ಟರ್ ಮಟ್ಟದ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನವನ್ನು ಗುರುವಾರ ಆಯೋಜಿಸಲಾಗಿತ್ತು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ. ರಾಜಶೇಖರ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ಸಹ ನಿರ್ದೇಶಕ ಬಿ. ಶಿವಮಾದಪ್ಪ, ಸಹಾಯಕ ವಿದ್ಯಾಧಿಕಾರಿ ಎನ್. ರೇಣುಕಸ್ವಾಮಿ, ವಿಷಯ ಪರಿವೀಕ್ಷಕರಾದ ಚನ್ನಬಸಪ್ಪ, ಎಚ್.ಎಸ್. ನಾಗರಾಜು ಇದ್ದರು.

ಪ್ರೊ. ಮಹದೇವಪ್ರಸಾದ್, ಪ್ರೊ. ಶಿವಪ್ರಸಾದ್, ಪ್ರೊ.ಪಿ. ಮಲ್ಲಪ್ಪ, ಪ್ರೊ. ಸಿದ್ಧರಾಮಯ್ಯ, ರಾಜಪ್ಪ, ಮತ್ತು ಪ್ರೊ. ಅರ್ಜುನ್ ಅವರು ತೀರ್ಪುಗಾರರಾಗಿ ಆಗಮಿಸಿ, ಜೆಎಸ್‌ಎಸ್ ಸರಸ್ವತಿಪುರಂ ಕ್ಲಸ್ಟರ್ ವ್ಯಾಪ್ತಿಗೆ ಒಳಪಟ್ಟ 7 ಶಾಲೆಗಳಾದ ಮೇಟಗಳ್ಳಿ, ಸರಸ್ವತಿಪುರಂ, ಶ್ರೀರಾಂಪುರ, ಉದಯಗಿರಿ, ಬನ್ನಿಮಂಟಪ, ನಾಚನಹಳ್ಳಿಪಾಳ್ಯ, ವಿಜಯನಗರ ಶಾಲೆಗಳಲ್ಲಿ ಏರ್ಪಡಿಸಿದ್ದ ಶಾಲಾ ಹಂತದ ವಸ್ತುಪ್ರದರ್ಶನದಲ್ಲ್ಲಿ ಆಯ್ಕೆಯಾದ ವಿವಿಧ ಧ್ಯೇಯಗಳಿಗೆ ಸಂಬಂಧಿಸಿದ ಒಟ್ಟು 123 ಮಾದರಿಗಳನ್ನು ವೀಕ್ಷಿಸಿದರು.

ಈ ವಸ್ತುಪ್ರದರ್ಶನಲ್ಲಿ ವೀಕ್ಷಣೆಗೆ ಇಡಲಾಗಿದ್ದ ಮಾದರಿಗಳಲ್ಲಿ 36 ಮಾದರಿಗಳು ಜನವರಿಯಲ್ಲಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಶೈಕ್ಷಣಿಕ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿವೆ.

ವಿವಿಧ ಧ್ಯೇಯಗಳಾದ ಭೌತ ವಿಜ್ಞಾನ/ ತ್ಯಾಜ್ಯ ನಿರ್ವಹಣೆ, ಸಮಾಜ ವಿಜ್ಞಾನ, ಜೈವಿಕ ವಿಜ್ಞಾನ/ ರಸಾಯನಶಾಸ್ತ್ರ, ವಿಪತ್ತು ನಿರ್ವಹಣೆ/ ಕ್ರೀಡೆಗಳು, ನೈಸರ್ಗಿಕ ಕೃಷಿ/ ಸಂಪನ್ಮೂಲ ನಿರ್ವಹಣೆ, ಗಣಿತ/ ದೇಸಿ ಆಟಗಳು, ಭಾಷೆಗಳು/ ಪ್ರಶಸ್ತಿಗಳು ಈ ಧ್ಯೇಯಗಳಿಗೆ ಸಂಬಂಧಿಸಿದ ಹಲವು ಮಾದರಿಗಳನ್ನು ಪೋಷಕರು, ಸ್ಥಳೀಯರು ಮತ್ತು ವಿವಿಧ ಶಾಲೆಯ ಮಕ್ಕಳು ಕುತೂಹಲದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸರಸ್ವತಿಪುರಂ ಕ್ಲಸ್ಟರ್‌ ಮುಖ್ಯಸ್ಥೆ ಕವಿತಾ, ಕ್ಲಸ್ಟರ್‌ ವ್ಯಾಪ್ತಿಯ ಶಾಲೆಗಳ ಮುಖ್ಯ ಶಿಕ್ಷಕರು, ಮೇಟಗಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಎನ್.ಪಿ. ಸತೀಶ್, ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.