ಪಂಚಮಸಾಲಿಗೆ ಸಿಎಂ ಕ್ಷಮೆ ಕೇಳಲು ಆಗ್ರಹ

| Published : Dec 15 2024, 02:02 AM IST

ಸಾರಾಂಶ

ಬೆಳಗಾವಿಯ ಸುವರ್ಣಸೌಧದ ಬಳಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಹತ್ತಿಕ್ಕಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಸಮುದಾಯದ ಅಮಾಯಕ 25 ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅ ಸಾರ್ವಜನಿಕವಾಗಿ ಸಮುದಾಯದ ಕ್ಷಮೆ ಕೇಳಬೇಕು ಎಂದು ತಾಲೂಕು ಪಂಚಮಸಾಲಿ ಸಮುದಾಯದ ಅಧ್ಯಕ್ಷ ಹಿರೇಉಡ ಎಂ.ಆರ್. ಬಸವರಾಜಪ್ಪ ಹೇಳಿದ್ದಾರೆ.

ಚನ್ನಗಿರಿ: ಬೆಳಗಾವಿಯ ಸುವರ್ಣಸೌಧದ ಬಳಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಹತ್ತಿಕ್ಕಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಸಮುದಾಯದ ಅಮಾಯಕ 25 ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅ ಸಾರ್ವಜನಿಕವಾಗಿ ಸಮುದಾಯದ ಕ್ಷಮೆ ಕೇಳಬೇಕು ಎಂದು ತಾಲೂಕು ಪಂಚಮಸಾಲಿ ಸಮುದಾಯದ ಅಧ್ಯಕ್ಷ ಹಿರೇಉಡ ಎಂ.ಆರ್. ಬಸವರಾಜಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು 1994ರಿಂದಲೂ ಹೋರಾಟ ನಡೆಸುತ್ತಿದ್ದೇವೆ. ಸಮುದಾಯದ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ಅವರು ಕೂಡಲಸಂಗಮದಿಂದ ಬೆಂಗಳೂರುವರೆಗೆ 712 ಕಿಮೀ ಪಾದಯಾತ್ರೆ ಮಾಡಿದ್ದರು. ಆಗ ಸಣ್ಣ ತೊಂದರೆಯೂ ಆಗದಂತೆ ಸಮುದಾಯ ಜನರು ನಡೆದುಕೊಂಡಿದ್ದಾರೆ ಎಂದರು.

ಇದೇ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸಮುದಾಯದ ಸುಮಾರು 12 ಶಾಸಕರಿದ್ದಾರೆ. ಈ ಬಗ್ಗೆ ಏನೂ ಮಾತನಾಡದೇ ಇರುವುದು ದುರದೃಷ್ಟಕರ ಸಂಗತಿ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಮುದಾಯ ನೆನಪಿಸಿಕೊಳ್ಳುವ ನಾಯಕರು ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಜೊತೆ ನಿಲ್ಲಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ಸಮಾಜದ ಜನರು ನೀಡಲಿದ್ದಾರೆ ಎಂದರು.

ಸಮಾಜದ ಪ್ರಮುಖರಾದ ಗಂಗಾಧರ, ಟಿ.ಜನಗದೀಶ್, ರಾಜಪ್ಪ, ಬಸವರಾಜಪ್ಪ, ಬಸೇಟಪ್ಪ, ಜ್ಯೋತಿಪ್ರಸಾದ್. ಮಂಜುನಾಥ್ ಹಾಜರಿದ್ದರು.