ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆಯಾಗಿದೆ ಎಂದು ನನಗಾಗಲಿ, ಶಾಸಕರು ಮತ್ತು ಸಚಿವರಿಗೆ ಯಾರಿಗೂ ಗೊತ್ತಿಲ್ಲ. ಏನು ಮಾತುಕತೆಯಾಗಿದೆ ಎಂಬುದನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಥವಾ ಹೈಕಮಾಂಡ್ ಮಾತ್ರ ಹೇಳಲು ಸಾಧ್ಯ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆಯಾಗಿದೆ ಎಂದು ನನಗಾಗಲಿ, ಶಾಸಕರು ಮತ್ತು ಸಚಿವರಿಗೆ ಯಾರಿಗೂ ಗೊತ್ತಿಲ್ಲ. ಏನು ಮಾತುಕತೆಯಾಗಿದೆ ಎಂಬುದನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಥವಾ ಹೈಕಮಾಂಡ್ ಮಾತ್ರ ಹೇಳಲು ಸಾಧ್ಯ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತುಕತೆಯಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸವದಿ, ಸಿಟಿ ರವಿ ಅವರೇ ಲೆಟರ್ ಬರೆದುಕೊಂಡಿರಬೇಕು. ಅದನ್ಯಾರು ಮಾಡುತ್ತಾರೆ. ಅನಾಮಧೇಯ ಪತ್ರ ನಿಮಗೂ ಬರುತ್ತೆ. ಅದು ಲೆಕ್ಕಕ್ಕೆ ಬರಲ್ಲ ಅಡ್ರೆಸ್ ಹಾಕಿ ಹಾಕಿದರೆ ಅದು ಲೆಕ್ಕಕ್ಕೆ ಬರುತ್ತದೆ. ಅನಾಮಧೇಯ ಎಂದರೆ ಅದು ಸುಳ್ಳು ಇರುವುದು ಸತ್ಯೆನು ಇರಬಹುದು. ಅದಕ್ಕೆ ಆಧಾರ ಇರುವುದಿಲ್ಲ ಎಂದರು.ಸವದಿ ಘರ್ ವಾಪಸಿ ಯಾವಾಗ ಎಂಬ ಪ್ರಶ್ನೆ ಗೆ ಉತ್ತರಿಸಿದ್ದ ಅವರು, ನಾನು ಒಂದು ಮನೆಯಲ್ಲಿ ಇದ್ದೇನೆ ಮತ್ತ್ಯಾವ ಗರ್ ವಾಪಸ್ಸಿ ಎಂದು ಮರು ಪ್ರಶ್ನಿಸಿದರು. ಜಗದೀಶ್ ಶೆಟ್ಟರಿಗೆ ಹಾಗೂ ನನಗೆ ಯಾಕೆ ತಳಕು ಹಾಕುತ್ತೀರಿ. ಅವರದ್ದೇ ಬೇರೆ ನಮ್ಮದೇ ಬೇರೆ ಎಂದರು.
ಬಿಜೆಪಿಗೆ ಹೋಗುವ ಸಲುವಾಗಿಯೇ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿಲ್ಲ ಎಂಬ ಆರೋಪಕ್ಕೆ ಸವದಿ ಉತ್ತರಿಸಿ, ಸ್ಥಳೀಯ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಕೊಟ್ಟಿದ್ದರು. ಪಠಾಣ ಅಭ್ಯರ್ಥಿಯಾಗಿರುವುದರಿಂದ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲೆ ಇತ್ತು. ಅಲ್ಲಿ ಹೋಗಿ ಕೆಲಸ ಮಾಡಿ ಯಶಸ್ವಿಯಾಗಿ ಗೆದ್ದಿದ್ದೇವೆ ಎಂದು ತಿಳಿಸಿದರು.ನಕ್ಸಲ್‌ರ ಶರಣಾಗತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ನಕ್ಸಲರು ಹಿಂದೆ ಶರಣಾಗಿದ್ದರಲ್ಲ ಆಗ ಯಾರು ಯಾರಿಗೆ ಶರಣಾಗಿದ್ದರು. ನಕ್ಸಲರು ಶರಣಾಗಿದ್ದು ಒಂದು ಒಳ್ಳೆಯ ಬೆಳವಣಿಗೆ. ನಕ್ಸಲರು ಶಸ್ತ್ರಾಸ್ತ್ರ ಎಲ್ಲಿದೆ. ಅವರ ಬಟ್ಟೆಯಲ್ಲಿದೆ. ಅವರ ಚಪ್ಪಲಿಗಳು ಎಲ್ಲಿವೆ ಎಂಬುದನ್ನು ಕೇಳಲು ಇಲಾಖೆ ಇರುತ್ತದೆ. ಇಲಾಖೆಯಿಂದ ತನಿಖೆಯಾಗುತ್ತದೆ. ಅಂತಹದ್ದೇನಾದರೂ ಇದ್ದರೆ ಇಲಾಖೆ ಅವುಗಳನ್ನು ವಶಪಡಿಸಿಕೊಳ್ಳುವ ಕೆಲಸ ಮಾಡುತ್ತದೆ. ಅದು ಮುಖ್ಯಮಂತ್ರಿಯ ಕೆಲಸ ಅಲ್ಲ. ಕಾನೂನು ಚೌಕಟ್ಟಿನಲ್ಲಿ ಏನಾಗಬೇಕು ಅವರು ಶರಣಾಗತಿಯಾಗಿ ಮಾನವೀಯ ಆಧಾರ ಮೇಲೆ ಕಾರ್ಯವನ್ನು ಮಾಡುತ್ತೇವೆ. ಬಂದು ಶರಣಾಗತರಾಗಿದ್ದನ್ನು ಸ್ವಾಗತ ಮಾಡಬೇಕು, ಹೊರತಾಗಿ ಪ್ರಚೋದನೆ ಕೊಡುವ ಕೆಲಸ ಆಗಬಾರದು ಎಂದು ಹೇಳಿದರು.ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ನನಗನಿಸಿಲ್ಲ. ಅನುದಾನ ನನಗೂ ಕೊಟ್ಟಿದ್ದಾರೆ. ಅನೇಕ ಕ್ಷೇತ್ರಗಳಿಗೆ ಕೊಟ್ಟಿದ್ದಾರೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ರಸ್ತೆಗಳಿಗೆ ಅನುದಾನ ಕೊಡುವ ಕಾರ್ಯ ಹಂತದಲ್ಲಿದೆ. ಲೋಕೋಪಯೋಗಿ ಇಲಾಖೆ ನೀರಾವರಿ ಇಲಾಖೆಗಳಿಗೆ ಅನುದಾನ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ₹ 50ರಿಂದ ₹ 56 ಸಾವಿರ ಕೋಟಿ ಹಣ ಹೋಗುವುದರಿಂದ ಅದು ಅಭಿವೃದ್ಧಿ ಅಲ್ಲವೇ, ಬಡವರ ನಿರ್ಗತಿಕರ ಜೀವನ ಮಟ್ಟ ಸುಧಾರಣೆಯಾಗುವುದು ಅಭಿವೃದ್ಧಿ ಅಲ್ಲವೇ, ರಸ್ತೆ ಚರಂಡಿ ಮಾಡಿದರ ಅಷ್ಟೇ ಅಭಿವೃದ್ಧಿನಾ ಎಂದು ಪ್ರಶ್ನಿಸಿದರು. ಬಡವರ ಜೀವನಮಟ್ಟ ಸುಧಾರಣೆ ಯಾಗಿದ್ದು ಕೂಡ ಅಭಿವೃದ್ಧಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.ಕೋಟ್ನನಗೆ ಯಾವುದು ಗೊತ್ತಿಲ್ಲ. ಇದು ಮುಖ್ಯಮಂತ್ರಿಗಳು, ಹೈಕಮಾಂಡ್ ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಅನೇಕ ಬಾರಿ ನಾನು ಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಹೀಗೆ ಕೊಟ್ಟರೆ ಅದನ್ನು ನಿರ್ವಹಿಸುವ ಸಾಮರ್ಥ್ಯ ಇದೆ. ಸಚಿವ ಸ್ಥಾನ ಕೊಟ್ಟರು ಸಂತೋಷ, ಕೊಡದೆ ಇದ್ದರೂ ಸಂತೋಷ. ನಾನು ಮಂತ್ರಿ ಸ್ಥಾನಕ್ಕಾಗಿ ಹಪಹಪಿಸುವ ವ್ಯಕ್ತಿ ಅಲ್ಲ.ಲಕ್ಷ್ಮಣ ಸವದಿ, ಮಾಜಿ ಡಿಸಿಎಂ