ಶಾಸಕ ರಘುಮೂರ್ತಿ ಪುತ್ರಿ ವಿವಾಹಕ್ಕೆ ಸಿಎಂ ಭಾಗಿ ಹಿನ್ನೆಲೆ ಸಿದ್ಧತೆ ಪರಿಶೀಲನೆ

| Published : Oct 19 2024, 12:28 AM IST

ಶಾಸಕ ರಘುಮೂರ್ತಿ ಪುತ್ರಿ ವಿವಾಹಕ್ಕೆ ಸಿಎಂ ಭಾಗಿ ಹಿನ್ನೆಲೆ ಸಿದ್ಧತೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರ ಪುತ್ರಿ ಸುಚಿತ್ರ ವರುಣರವರ ವಿವಾಹ ಮಹೋತ್ಸವ ಅ.೨೧ರ ಸೋಮವಾರ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಬರದಿಂದ ಸಾಗಿವೆ.

ವಿವಾಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮಂತ್ರಿಮಂಡಲದ ಸಚಿವರು, ಶಾಸಕರು ಆಗಮಿಸಿ ನೂತನ ವಧುವರರನ್ನು ಆಶೀರ್ವಾದಿಸಲಿದ್ದಾರೆ.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೂರ್ವವಲಯದ ಐಜಿಪಿ ನೇತೃತ್ವದಲ್ಲಿ ಬಂದೋಬಸ್ತ್ ಕಾರ್ಯ ವೀಕ್ಷಿಸಲಾಯಿತು.

ಚಿತ್ರದುರ್ಗ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಹೆಲಿಕಾಪ್ಟರ್ ನಿಲ್ದಾಣವನ್ನು ಸಿದ್ಧಪಡಿಸಲು ಸ್ಥಳ ವೀಕ್ಷಣೆಯನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೂರ್ವವಲಯ ಐಜಿಪಿ ರಮೇಶ್‌ಬಾನೋತ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ.ರಾಜಣ್ಣ, ತಹಸೀಲ್ದಾರ್ ರೇಹಾನ್‌ಪಾಷ, ಲೋಕೋಪಯೋಗಿ ಎಇಇ ವಿಜಯಭಾಸ್ಕರ್ ಮಾಡಿದರು.

ಹೆಲಿಪ್ಯಾಡ್‌ ನಿಲ್ದಾಣದಿಂದ ಮುಖ್ಯಮಂತ್ರಿಗಳು ವಿವಾಹನ ನಡೆಯುವ ಸ್ಥಳಕ್ಕೆ ಆಗಮಿಸಿ ನೂತನ ವಧುವರರನ್ನು ಆಶೀರ್ವಾದಿಸಲಿದ್ದಾರೆ. ಈಗಾಗಲೇ ಸುಧಾಕರ್ ಕ್ರೀಡಾಂಗಣದಲ್ಲಿ ವೈಭವಪೂರಿತ ವಿವಾಹಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.