ಸಾರಾಂಶ
ಬಿಜೆಪಿ ಜಯಮೃತ್ಯುಂಜಯ ಸ್ವಾಮಿ ಪರವಾಗಿ ಇರಲಿದೆ. ಅವರ ಹೋರಾಟವನ್ನು ಬೆಂಬಲಿಸಲಿದೆ.
ಬಳ್ಳಾರಿ: ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಹೋರಾಟವನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮಾಡಿರುವ ಪೊಲೀಸರ ನಡೆ ಹೇಯವಾದದ್ದು. ಹಿರಿಯರು, ವಯಸ್ಸಾದವರು ಎನ್ನದೇ ಭಯಾನಕವಾಗಿ ಲಾಠಿ ಪ್ರಹಾರ ನಡೆಸಿದ್ದು, ಈ ಕೃತ್ಯಕ್ಕೆ ಮುಖ್ಯಮಂತ್ರಿಯೇ ನೇರ ಹೊಣೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಲಾಠಿ ಚಾರ್ಜ್ ಮಾಡುವ ಮೂಲಕ ರಾಜ್ಯ ಸರ್ಕಾರ ಸೇಡಿನ ರೀತಿಯಲ್ಲಿ ವರ್ತಿಸಿದೆ. ಹೋರಾಟಗಾರರ ಮೇಲೆ ಬ್ರಿಟಿಷರಂತೆ ಹೀನಾಯವಾಗಿ ಪೊಲೀಸರು ಹಲ್ಲೆಗೈದಿದ್ದಾರೆ. ಸಮುದಾಯದ ಜಯಮೃತ್ಯುಂಜಯ ಶ್ರೀಗಳನ್ನು ಬಂಧಿಸಲಾಗಿದೆ. ಮುಖಂಡರಾದ ಸಿ.ಸಿ. ಪಾಟೀಲ್, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಎಡಿಜಿಪಿ ಹಿತೇಂದ್ರ ಬ್ರಿಟಿಷ್ ಕಾಲದ ರೀತಿ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ದೂರಿದರು.ಬಿಜೆಪಿ ಜಯಮೃತ್ಯುಂಜಯ ಸ್ವಾಮಿ ಪರವಾಗಿ ಇರಲಿದೆ. ಅವರ ಹೋರಾಟವನ್ನು ಬೆಂಬಲಿಸಲಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಹಿರಿಯ ಮುಖಂಡರಾದ ಡಾ.ಮಹಿಪಾಲ್, ಡಾ.ಬಿ.ಕೆ. ಸುಂದರ್, ಅಡವಿಸ್ವಾಮಿ, ಶರಣು, ಕೆ.ಆರ್.ಮಲ್ಲೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದರು.