ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನ.೩ರಂದು ಉದ್ಘಾಟಿಸಬೇಕಾಗಿದ್ದ ನಗರಸಭೆ ವತಿಯಿಂದ ಕೈಗೊಂಡಿದ್ದ ಅಭಿವೃದ್ದಿ ಕಾಮಗಾರಿಗಳನ್ನು ನ.೫ರ ಗುರುವಾರಕ್ಕೆ ಮುಂದೂಡಲಾಗಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು
ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನ.೩ರಂದು ಉದ್ಘಾಟಿಸಬೇಕಾಗಿದ್ದ ನಗರಸಭೆ ವತಿಯಿಂದ ಕೈಗೊಂಡಿದ್ದ ಅಭಿವೃದ್ದಿ ಕಾಮಗಾರಿಗಳನ್ನು ನ.೫ರ ಗುರುವಾರಕ್ಕೆ ಮುಂದೂಡಲಾಗಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿಗಳು ನ.೩ಕ್ಕೆ ಸಮಯ ಕೊಟ್ಟಿದ್ದರು. ಅದರಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಹಿರಿಯೂರಿನಲ್ಲಿ ಬಹುಕೋಟಿ ಅಭಿವೃಧ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಬೇಕಾದ ಅನಿವಾರ್ಯತೆ ಸೃಷ್ಠಿಯಾದ್ದರಿಂದ ರಾಮನಗರಕ್ಕೆ ಭೇಟಿ ಕೊಡುವ ಕಾರ್ಯಕ್ರಮವನ್ನು ಅವರ ಸೂಚನೆ ಮೇರೆಗೆ ನ.೫ರ ಗುರುವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.ನ.೫ರಂದು ಸಂಜೆ ೪ ಗಂಟೆಗೆ ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸಲಿದ್ದು, ಮೊದಲು ನಗರಸಭೆಗೆ ಭೇಟಿ ಕೊಟ್ಟು, ಶ್ರೀ ಕೆಂಪೇಗೌಡ ಪ್ರತಿಯೆನ್ನು ಅನಾವರಣಗೊಳಿಸಲಿದ್ದು, ಮತ್ತು ನೂತನವಾಗಿ ನಿರ್ಮಿಸಿರುವ ಡಾ.ದೇವರಾಜ ಅರಸು ಸಭಾಂಗಣವನ್ನು ಉದ್ಘಾಟಿಸುವರು. ನಂತರ ನೀರಿನ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್ ಉದ್ಘಾಟಿಸುವರು. ಅಲ್ಲಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಫುಡ್ ಕೋರ್ಟ್ ಉದ್ಘಾಟಿಸುವರು. ಇದಾದ ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ನಗರಸಭೆಯ ಪರವಾಗಿ ವಿವಿಧ ಸವಲತ್ತುಗಳನ್ನು ಪಲಾನುಭವಿಗಳಿಗೆ ವಿತರಿಸುವರು. ಅದೇ ವೇದಿಕೆಯಲ್ಲಿ ೭೧ನೇ ಕನ್ನಡ ರಾಜ್ಯೋತ್ಸವದ ಕಾಂiiಕ್ರಮವೂ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಂದೂಡಿರುವ ಕಾರ್ಯಕ್ರಮಕ್ಕೆ ಜಿಲ್ಲೆಯ ನಾಗರೀಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ವೇದಿಕೆ ಕಾರ್ಯಕ್ರಮದ ನಂತರ ರಸಮಂಜರಿ ಕಾರ್ಯಕ್ರಮವು ನಡೆಯಲಿದೆ ಎಂದು ಕೆ.ಶೇಷಾದ್ರಿ ತಿಳಿಸಿದರು.ಬಾಕ್ಸ್..............ಮಳಿಗೆಗಳ ಬಾಡಿಗೆಗೆ ಬಹಿರಂಗ ಹರಾಜು
ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ಯೂನಿಲೆಟ್ ಶೋರೂಂ ಎದುರಿಗೆ ನಗರಸಭೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಫುಡ್ಕೋರ್ಟ್ನಲ್ಲಿ ಎಸಿಸಿ/ಜಿಎ ಶೀಟುಗಳಿಂದ ೩೭ ಮಳಿಗೆಗೆಳು ನಿರ್ಮಾಣವಾಗಿದೆ. ಸದರಿ ಮಳಿಗೆಗಳನ್ನು ಬಾಡಿಗೆಗೆ ನೀಡಲು ಬಹಿರಂಗ ಹರಾಜು ನ.೭ರ ಬೆಳಿಗ್ಗೆ ೧೧ ಗಂಟೆಗೆ ಸ್ಥಳದಲ್ಲೇ ನಡೆಯಲಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದ್ದಾರೆ.ಆಸಕ್ತರು ನ.೬ರೊಳಗೆ ಅರ್ಜಿಯೊಡನೆ ನಿಗಧಿಪಡಿಸಿರುವ ಪ್ರಾಥಮಿಕ ಠೇವಣಿ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಡಿಡಿ ಮತ್ತು ದಾಖಲಾತಿಗಳನ್ನು ನಗರಸಭೆಯ ಕಚೇರಿಗೆ ಸಲ್ಲಿಸಿ, ಖುದ್ದಾಗಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಬಿಡ್ ಮಾಡುವ ಮೂಲಕ ಮಳಿಗೆಗಳನ್ನು ಮಾಸಿಕ ಬಾಡಿಗೆಗೆ ಪಡೆಯಬಹುದಾಗಿದೆ. ಹೆಚ್ಚಿನ ವಿವಿರಗಳನ್ನು ಕಚೇರಿ ವೇಳೆಯಲ್ಲಿ ಕಂದಾಯ ಶಾಖೆಯಲ್ಲಿ ಪಡೆಯಬಹುದು ಎಂದು ತಿಳಿಸಿದರು. ಪೊಟೋ೨ಸಿಪಿಟಿ೧: ರಾಮನಗರದ ನಗರಸಭೆ ಕಚೇರಿಯಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.