ಜಿಲ್ಲೆಯ ಪಂಚಮಸಾಲಿಗಳ ಹಾಗೂ ಕೆಲವು ದಾನಿಗಳ ಸಹಕಾರದಿಂದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗಿರುವ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಯನ್ನು ಪಂಚಮಸಾಲಿಗಳ ಭಾವನೆಗೆ ನೋವುಂಟು ಮಾಡಿದ್ದ ಸಿದ್ದರಾಮಯ್ಯನವರಿಂದ ಅನಾವರಣ ಮಾಡಿಸುವುದು ಬೇಡ ಎಂದು ನೊಂದ ಪಂಚಮಸಾಲಿಗರು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಈ‌ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ವಿವಿಧ ಘಟಕಗಳ ಪದಾಧಿಕಾರಿಗಳು, ಕಳೆದ ವರ್ಷ ಮೀಸಲಾತಿ ಹೋರಾಟದ ವೇಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ದೌರ್ಜನ್ಯ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 2ಎ ಮೀಸಲಾತಿಗೆ ಸ್ಪಂದಿಸಲಿಲ್ಲ. ಇಂತಹವರಿಂದ ಚನ್ನಮ್ಮನ‌ ಮೂರ್ತಿ ಅನಾವರಣ ಮಾಡಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಎಂ.ಪಾಟೀಲ, ನಿಂಗನಗೌಡ ಸೋಲಾಪುರ, ಮಲ್ಲಿಕಾರ್ಜುನ ಕೆಂಗನಾಳ, ಈರನಗೌಡ ಬಿರಾದಾರ, ಕುಮಾರ ಪಾಟೀಲ, ಸಿದ್ದಣ್ಣ ಮುಕರ್ತಿಹಾಳ, ಈರಣ್ಣ ಶಿರಮಗೊಂಡ, ಅಶೋಕ ಅಲ್ಲಾಪುರ ಇದ್ದರು.